ದ.ಕ : ನರ ಹಂತಕ ಕಾಡಾನೆ ಸೆರೆ ಹಿಡಿಯಲಾಗಿದೆ, ಜನರು ನಿರ್ಭೀತಿಯಿಂದ ಇರಬಹುದು- ಜಿಲ್ಲಾಧಿಕಾರಿ

Elephant Rescue : ಕಡಬ : ಸಾರ್ವಜನಿಕ ಉಪಳಟ ನೀಡುತ್ತಿದ್ದ ಹಾಗೂ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ( Elephant Rescue) ಹಿಡಿಯಲಾಗಿದೆ. ಜನರಿನ್ನು ನಿರ್ಭೀತಿಯಿಂದ ಇರಬಹುದು. ಇನ್ನೂ ಕಾಡಾನೆಗಳು ಇರುವ ಬಗ್ಗೆ ಸ್ಥಳೀಯರು ತಿಳಿಸಿದ್ದು ಅವುಗಳನ್ನು ಸೆರೆ ಹಿಡಿಯುವ ಕಾರ್ಯ ನಡೆಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದ್ದಾರೆ.

ಅವರು ಕಡಬದಲ್ಲಿ ಕಾಡಾನೆ ಸೆರೆ ಹಿಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಜೀವ ಬಲಿ ತೆಗೆದುಕೊಂಡ ಆನೆಯನ್ನು ಕಡಬ ತಾಲೂಕಿನ ಕೊಂಬಾರಿನ ಮಂಡೆಕರ ಎಂಬಲ್ಲಿ ಸೆರೆ ಹಿಡಿಯಲಾಗಿದೆ. ಅದರ ದಂತ ಹಾಗೂ ಕಾಲಿನ ಬಾಗದಲ್ಲಿ ರಕ್ತದ ಕಳೆ ಇರುವುದರಿಂದ ಇದೇ ಆನೆ ಇಬ್ಬರನ್ನು ಕೊಂದಿರುವುದು ಎಂಬುದು ಸ್ಪಷ್ಟ ಗೊಂಡಿದೆ. ಗಂಡು ಆನೆ ಇದಾಗಿದೆ. ಇದೀಗ ಆನೆಯನ್ನು ಅರೆವಳಿಕೆ ನೀಡಿಲಾಗಿದ್ದು, ಇದೀಗ ಸೆರೆ ಹಿಡಿದು, ನಾಳೆ ಸಂಜೆವರೆಗೆ ಅದರ ಮೇಲೆ ನಿಗಾ ವಹಿಸಿ ಬಳಿಕ ಈ ಕಾಡಾನೆ ಯನ್ನು ಆನೆಗಳ ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲಾಗುವುದು.

ಇದನ್ನೂ ಓದಿ : ದಕ್ಷಿಣ ಕನ್ನಡ : ಕೊನೆಗೂ ಸೆರೆಸಿಕ್ಕ ಕಾಡಾನೆ!!!

ಸೆರೆ ಹಿಡಿಯಲಾದ ಆನೆ ವ್ಯಘ್ರಗೊಂಡಿದ್ದು, ಸೆರೆ ಹಿಡಿಯದೇ ಇರುತ್ತಿದ್ದಲ್ಲಿ ಇನ್ನೂ ಹಚ್ಚಿನ ಸಮಸ್ಯೆ ಮಾಡುವ ಸಾಧ್ಯತೆಯಿತ್ತು. ಕಾಡಾನೆ ಸೆರೆ ಹಿಡಿಯುವಲ್ಲಿ ಇದೀಗ ಯಶಸ್ವಿಯಾಗಿದೆ. ಸಹಕರಿಸಿದ ವಿಶೇಷವಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.