Monthly Income: ಈ ಸರ್ಕಾರಿ ಯೋಜನೆಗಳು ನಿಮಗೆ ನೀಡುತ್ತೆ ತಿಂಗಳಿಗೆ ಸಾವಿರಗಟ್ಟಲೇ ಹಣ!

Monthly income : ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ರಿಟರ್ನ್ಸ್ ಉತ್ತಮವಾಗಿದ್ದರೂ, ಅಪಾಯದ ಅಂಶವೂ ಹೆಚ್ಚು. ಆದರೆ, ಅಪಾಯವನ್ನು ಇಷ್ಟಪಡದ ಅನೇಕ ಜನರಿದ್ದಾರೆ ಅಂತಹವರಿಗೆ ಅಪಾಯ ಮುಕ್ತವಾಗಿ ಆದಾಯ (income )ಗಳಿಸಲು ಇಲ್ಲಿದೆ ಮಾಹಿತಿ. ಹೌದು ಪ್ರತಿ ತಿಂಗಳು ಸಾವಿರ ಪಡೆಯುವುದು (monthly income) ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ಮುಖ್ಯವಾಗಿ ಕೆಲವು ಯೋಜನೆಗಳಲ್ಲಿ (Schemes) ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ರಿಸ್ಕ್ ಫ್ರೀ ರಿಟರ್ನ್ಸ್ ಪಡೆಯಬಹುದು. ಅದಲ್ಲದೆ ಕೇಂದ್ರ ಸರ್ಕಾರದ ಖಾತರಿಯೂ ಇರುತ್ತದೆ.

ಕೇಂದ್ರ ಸರ್ಕಾರ ಹಲವು ಯೋಜನೆಗಳ ಹೂಡಿಕೆ ಮಿತಿಯನ್ನು 2023 ರ ಬಜೆಟ್ ನಲ್ಲಿ ಹೆಚ್ಚಿಸಿದ್ದು ಅದರಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ ಒಂದು. ಇದುವರೆಗೆ ಈ ಮಿತಿ ರೂ. 15 ಲಕ್ಷ ಇತ್ತು. 2023 ರ ಬಜೆಟ್ ಪ್ರಕಾರ ಹಿರಿಯ ನಾಗರಿಕರು ಇನ್ನು ಮುಂದೆ ರೂ. 30 ಲಕ್ಷ ಹೂಡಿಕೆ ಮಾಡಬಹುದು.

ಇನ್ನು ಪೋಸ್ಟ್ ಆಫೀಸ್(post office )ನಲ್ಲಿ ಮಾಸಿಕ ಆದಾಯ ಯೋಜನೆ ಹೂಡಿಕೆ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಈಗ ರೂ. 9 ಲಕ್ಷ ಹೂಡಿಕೆ ಮಾಡಬಹುದು. ಇದುವರೆಗೆ ಈ ಮಿತಿ ರೂ. 4.5 ಲಕ್ಷ ಮಾತ್ರ ಇತ್ತು. ಈ ಯೋಜನೆಯ ಬಡ್ಡಿ ದರವು ಶೇಕಡಾ 7.1 ಆಗಿದೆ. ಹೆಚ್ಚಿದ ಮಿತಿ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ನೀವು ಈ ಯೋಜನೆಗೆ ಸೇರಲು ಬಯಸಿದರೆ ಈಗ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ರೂ. 15 ಲಕ್ಷ ಹಾಕಬಹುದು. ಅಲ್ಲದೆ ಮಾಸಿಕ ಆದಾಯ ಯೋಜನೆಯಲ್ಲಿ ರೂ. 4.5 ಲಕ್ಷ ಹೂಡಿಕೆ ಮಾಡಬಹುದು.

ಮುಖ್ಯವಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸುತ್ತದೆ. ಅಂದರೆ 15 ಲಕ್ಷ ಹೂಡಿಕೆ ಮಾಡಿದ್ದರೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಬಡ್ಡಿ ಬರಲಿದೆ. ಪ್ರಸ್ತುತ ಶೇಕಡಾ 8 ರಷ್ಟು ಬಡ್ಡಿ ಲಭ್ಯವಿದೆ.

ಇನ್ನು ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೂಡ ಇದೆ. ಇದು ಹಿರಿಯ ನಾಗರಿಕರಿಗೂ ಲಭ್ಯವಿದೆ. ಇದರಲ್ಲಿಯೂ ರೂ. 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. 7.4 ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಯು 31 ಮಾರ್ಚ್ 2023 ರವರೆಗೆ ಮಾತ್ರ ಲಭ್ಯವಿದೆ. ಯೋಜನೆಯ ಮುಕ್ತಾಯ ಅವಧಿಯು ಹತ್ತು ವರ್ಷಗಳಾಗಿವೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಮಾರ್ಚ್ 31 ರ ಮೊದಲು ತಿಂಗಳಿಗೆ 10 ಸಾವಿರ ಬಡ್ಡಿ ಹಣ ಬರಲಿದೆ. ಅಲ್ಲದೆ ಮಾಸಿಕ ಆದಾಯ ಯೋಜನೆಯಲ್ಲಿ ಮಾರ್ಚ್ 31 ರ ಮೊದಲು 2,660 ಬರಲಿದೆ.
ಇದು ನಿಮಗೆ ಒಟ್ಟು ರೂ. 34,575 ಬರಲಿದೆ. ಇದೇ ರೀತಿ ಪಾಲುದಾರರ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಈ ಮೊತ್ತ ಎರಡು ಪಟ್ಟಿನಷ್ಟು ಆಗುತ್ತದೆ.

ಆರ್‌ಬಿಐ ಫ್ಲೋಟಿಂಗ್ ರೇಟ್ ಬಾಂಡ್‌ಗಳೂ ಇವೆ. ಇವುಗಳಲ್ಲಿಯೂ ಹೂಡಿಕೆ ಮಾಡಬಹುದು. ಈ ಬಾಂಡ್‌ಗಳ ಮೇಲಿನ ಬಡ್ಡಿ ದರವನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿ ದರಕ್ಕೆ ಲಿಂಕ್ ಮಾಡಲಾಗಿದೆ. 0.35 ರಷ್ಟು ಪ್ರೀಮಿಯಂ ಸಹ ಲಭ್ಯವಿದೆ. 54 ಲಕ್ಷ ಹೂಡಿಕೆ ಮಾಡಿದರೆ ಆಗ ನಿಮಗೆ 1.98 ಲಕ್ಷ ಬರಲಿದೆ. ಅಂದರೆ ತಿಂಗಳಿಗೆ ರೂ. 33 ಸಾವಿರಕ್ಕೂ ಹೆಚ್ಚು ಸಿಗಲಿದೆ. ಈ ಮೂಲಕ ನೀವು ಒಟ್ಟು 67 ಸಾವಿರಕ್ಕೂ ಹೆಚ್ಚು ಪಡೆಯಬಹುದು.

ಹೌದು ಈ ಮೇಲಿನ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ರಿಸ್ಕ್ ಫ್ರೀ ರಿಟರ್ನ್ಸ್ ಪಡೆಯಬಹುದು. ಅದಲ್ಲದೆ ಕೇಂದ್ರ ಸರ್ಕಾರದ ಖಾತರಿಯ ಜೊತೆಗೆ ಅಪಾಯ ಮುಕ್ತ ಯೋಜನೆ ಆಗಿದೆ.

Leave A Reply

Your email address will not be published.