Investment: ಹಿರಿಯ ನಾಗರಿಕರೇ ಗಮನಿಸಿ : ಶೀಘ್ರದಲ್ಲೇ ಮುಗಿಯಲಿರುವ PMVVY, ಮಿತಿ ಏರಿಸಿದ SCSS

Senior Citizens’ Schemes: ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ(Future) ಬಗ್ಗೆ ಚಿಂತಿಸುವುದಲ್ಲದೆ ಮುಂದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ತಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ನಿಶ್ಚಿಂತೆಯಿಂದ ಕಳೆಯಲು ಬಯಸುವುದು ಸಹಜ.

(Savings)ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಜೊತೆಗೆ ವೃದ್ಧಾಪ್ಯದಲ್ಲಿ ಹಣಕಾಸಿನ ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ ನೆರವಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೂಡಿಕೆ(Investment) ಮಾಡೋದು ಕಾಮನ್. ಸರ್ಕಾರ ಕೂಡ ಹಿರಿಯ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು(Schemes for Senior Citizens) ಜಾರಿಗೆ ತಂದಿದ್ದು, ಈ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಇದರ ಜೊತೆಗೆ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಸರ್ಕಾರ ಮಾಸಿಕ 1 ಸಾವಿರ ರೂ ಸಹಾಯಧನ ವಿತರಣೆ ಮಾಡಲಾಗುತ್ತಿದ್ದು ವಿಧವೆಯರಿಗೂ ಮಾಸಿಕ ಪಿಂಚಣಿ ಲಭ್ಯವಾಗುತ್ತಿದೆ.

ಅಷ್ಟೆ ಏಕೆ, ಇತ್ತೀಚೆಗೆ ನಡೆದ ಬಜೆಟ್ ನಲ್ಲಿ ಕೂಡ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿತ್ತು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (POMIS) ಹೂಡಿಕೆ ಮಿತಿಯನ್ನು 9 ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಈ ಬಜೆಟ್​ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳ ಕೂಡ ಮಾಡಿದೆ. ಹೀಗಾಗಿ, ಹಿರಿಯ ನಾಗರಿಕರಿಗೆ ಹಣಕಾಸು ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಬಡ್ಡಿ ಲಭ್ಯವಾಗಲಿವೆ.

ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಎಫ್​ಡಿ ಮೂಲಕ ಹೆಚ್ಚು ಬಡ್ಡಿ ಪಡೆಯಬಹುದು. ಕೆಲ ಬ್ಯಾಂಕುಗಳು ವೃದ್ಧರ ಎಫ್​ಡಿಗೆ ಶೇ. 9ರವರೆಗೆ ಬಡ್ಡಿ ನೀಡುತ್ತವೆ. ಹಿರಿಯ ಪಿಎಂಎಂಐಎಸ್ ಸ್ಕೀಮ್​ನ ಮೂಲಕ ಕೂಡ ಉತ್ತಮ ಬಡ್ಡಿ( Intrest Rate)ಲಭ್ಯವಾಗುತ್ತದೆ. ಇದಲ್ಲದೇ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಕೂಡ ಇದ್ದು, ಈ ನಾಲ್ಕು ಸೇವಿಂಗ್ ಸ್ಕೀಮ್​ಗಳ ಮೇಲೆ ಹಿರಿಯ ನಾಗರಿಕರು ಒಂದು ಕೋಟಿ ರೂಗೂ ಹೆಚ್ಚು ಮೊತ್ತದಷ್ಟು ಹೂಡಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು.

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS- Senior Citizen Saving Scheme) ಹೂಡಿಕೆ ಯೋಜನೆಯು ಐದು ವರ್ಷಗಳ ಹೂಡಿಕೆ ಯೋಜನೆಯಾಗಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕವಾಗಿ ನಿಮಗೆ ಶೇ. 8ರಷ್ಟು ಬಡ್ಡಿ ಲಭ್ಯವಾಗಲಿವೆ. ಒಂದು ವೇಳೆ ನೀವು 15 ಲಕ್ಷ ರೂ ಹೂಡಿಕೆ ಮಾಡಿದ್ದಲ್ಲಿ ವರ್ಷಕ್ಕೆ ಕೇವಲ ಬಡ್ಡಿ ಮುಖೇನ 1.2 ಲಕ್ಷ ರೂ ಪಡೆಯಬಹುದು. ಸರ್ಕಾರ ಈ ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದರೆ ನಿಮ್ಮ ಕೈ ಸೇರುವ ಬಡ್ಡಿದರ ಕೂಡ ಹೆಚ್ಚಳವಾಗಲಿದೆ. ಎಸ್​ಸಿಎಸ್​ಎಸ್ ಯೋಜನೆಯ ಹೂಡಿಕೆ ಮಿತಿ ಏಪ್ರಿಲ್ 1ರಿಂದ 30 ಲಕ್ಷಕ್ಕೆ ಏರಿಕೆ ಕಾಣಲಿದೆ.

ಪಿಎಂ ವಯ ವಂದನ ಯೋಜನೆ (ಪಿಎಂವಿವಿವೈ) ( PMVVY) ಎಂಬ ಪೆನ್ಷನ್ ಸ್ಕೀಮ್ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ ಎನ್ನಲಾಗುತ್ತಿದೆ. ಇದು 10 ವರ್ಷಗಳ ಅವಧಿಯ ಯೋಜನೆಯಾಗಿದ್ದು,ಹಿರಿಯ ನಾಗರಿಕರು ತಮ್ಮ ಬಳಿ ಹೆಚ್ಚು ಹಣವಿದ್ದರೆ ಪಿಎಂವಿವಿವೈ ಸ್ಕೀಮ್ನಲ್ಲಿ ಹಣ ತೊಡಗಿಸಿಕೊಳ್ಳಬಹುದಾಗಿದೆ. ಏಪ್ರಿಲ್ 1ರಿಂದ ಈ ಯೋಜನೆ ಲಭ್ಯವಾಗದು ಎನ್ನಲಾಗುತ್ತಿದೆ. ಸದ್ಯ, ಈ ಯೋಜನೆಯಲ್ಲಿ ಹೂಡಿಕೆ ಮಿತಿ 15 ಲಕ್ಷ ರೂ ವರೆಗೆ ಇರಲಿದ್ದು, ಪಿಎಂವಿವಿವೈ ಯೋಜನೆಯಲ್ಲಿನ ಹೂಡಿಕೆಗೆ ವಾರ್ಷಿಕವಾಗಿ ಶೇ. 7.4ರಷ್ಟು ಬಡ್ಡಿ ಲಭ್ಯವಾಗುತ್ತಿದೆ. ಈ ಯೋಜನೆ ಬಗ್ಗೆ ಹಿರಿಯ ನಾಗರಿಕರಿಗೆ ಗೊಂದಲ ಇರುವ ಜೊತೆಗೆ ಈ ಯೋಜನೆ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಇದನ್ನು ಹೊರತುಪಡಿಸಿ ಹೂಡಿಕೆ ಮಾಡಲು ಬಯಸುವವರು ರಿಸ್ಕ್ ತೆಗೆದುಕೊಳ್ಳಲು ಬಯಸುವವರು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ, ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಗಳು ಸಾಲಪತ್ರಗಳು ಬಹಳ ಸುರಕ್ಷಿತ ಹೂಡಿಕೆ ವಿಧಾನಗಳಾಗಿವೆ.

Leave A Reply

Your email address will not be published.