Smart Phone: ನೀವು ಫೋನ್​ ಹಿಡಿಯೋ ಸ್ಟೈಲ್ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಏನೆಂದು! ಹಾಗಿದ್ರೆ ನೀವು ಮೊಬೈಲ್ ಹಿಡಿಯೋದ್ ಹೇಗೆ? ನಿಮ್ಮ ವ್ಯಕ್ತಿತ್ವ ಎಂತದ್ದು?

Personality test: ಸಾಮಾನ್ಯವಾಗಿ ನಮ್ಮ ನಡೆ ನುಡಿಗಳಿಂದ ನಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾರೆ. ನಾವು ಧೈರ್ಯವಂತರೋ ಅಥವಾ ಹೆದರಿಕೆಯ ಸ್ವಭಾವದವರೋ ಎಂದು ನಮ್ಮ ಮಾತುಗಳೇ ತಿಳಿಸಿಬಿಡುತ್ತದೆ. ಆದರೆ ನಾವು ಯೂಸ್ ಮಾಡೋ ಮೊಬೈಲ್(Mobile), ನಮ್ಮ ವ್ಯಕ್ತಿತ್ವ ಎಂತದು (Personality test) ಎಂದು ತೋರಿಸುತ್ತದೆ ಅಂದ್ರೆ ನೀವು ನಂಬ್ತೀರಾ? ಹೌದು, ನೀವು ಫೋನ್ ಅನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತೀರಿ ಮತ್ತು ಅದನ್ನು ಹೇಗೆ ಬಳಸುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.

ಒಮ್ಮೆ ನಿಮಗೆ ನೀವೇ ಯೋಚಿಸಿ, ಸಾಮಾನ್ಯವಾಗಿ ಮೊಬೈಲ್‌ ಬಳಸುವಾಗ ನಿಮ್ಮ ಸ್ಟೈಲ್‌(Style) ಹೇಗಿರುತ್ತೆ? ಒಂದೇ ಕೈಯಲ್ಲಿ ಹಿಡಿದು ಸ್ಕ್ರಾಲ್‌(Scroll) ಮಾಡ್ತೀರಾ ಅಥವಾ ಎರಡು ಕೈಗಳಿಂದ ಫೋನ್‌ ಹಿಡಿದು ಎರಡು ಬೆರಳುಗಳನ್ನು ಬಳಸುತ್ತೀರಾ? ಹಾಗಿದ್ರೆ ನೀವು ಸ್ಮಾರ್ಟ್‌ಫೋನ್(Smartphone)ಅನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಎಂತದು ಎಂಬುದನ್ನು ನೋಡೋಣ ಬನ್ನಿ.

• ಒಂದು ಕೈಯಲ್ಲಿ ಫೋನು ಹಿಡಿದು, ಇನ್ನೊಂದು ಕೈಯ ತೋರು ಬೆರಳಿನಿಂದ ಪೋನ್ ಯೂಸ್ ಮಾಡ್ತೀರಾ?:
ನಿಮ್ಮ ಫೋನ್ ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯ ತೋರು ಬೆರಳನ್ನು ಸ್ಕ್ರಾಲ್ ಮಾಡಲು ಅಥವಾ ಟೈಪ್ ಮಾಡಲು ಬಳಸಿದರೆ, ನೀವು ಸ್ವಯಂಪ್ರೇರಿತ, ಸೃಜನಶೀಲ ಮತ್ತು ಕಾಲ್ಪನಿಕ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ. ನಿಮ್ಮನ್ನು ರೀಚಾರ್ಜ್ ಮಾಡಲು ಏಕಾಂತತೆಯನ್ನು ಬಯಸುವವರು. ನಿಮಗೆ ಶ್ರೀಮಂತನಾಗುವ ಕಲ್ಪನೆಯಿದೆ. ಅದಕ್ಕಾಗಿ ಕೆಲಸವನ್ನೂ ಮಾಡುತ್ತೀರಿ. ಜೀವನದಲ್ಲಿ ಹಣದ ಹರಿವು ಉತ್ತಮವಾಗಿರಬೇಕು ಅನ್ನೋದು ನಿಮ್ಮ ಆಸೆ. ನೀವು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರೋದ್ರಿಂದ ಜನರನ್ನು ಬೇಗನೇ ನಿಮ್ಮ ಕಡೆ ಸೆಳೆದುಬಿಡುತ್ತದೆ. ಪ್ರಣಯದ ವಿಚಾರದಲಿಯೂ ನೀವು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತೀರಿ.

• ಎರಡೂ ಕೈಗಳಿಂದ ಫೋನ್ ಹಿಡಿದು ಮತ್ತು ಎರಡೂ ಹೆಬ್ಬೆರಳುಗಳನ್ನು ಬಳಸುವವರು: ಸ್ಕ್ರಾಲ್‌ ಮಾಡಲು ಅಥವಾ ಟೈಪ್(Type) ಮಾಡಲು ನಿಮ್ಮ ಫೋನ್ ಅನ್ನು ಎರಡೂ ಕೈಗಳಿಂದ ಹಿಡಿದು, ಎರಡೂ ಹೆಬ್ಬೆರಳುಗಳನ್ನು ಬಳಸುತ್ತಿದ್ದರೆ, ನೀವು ಶಕ್ತಿಯುತ, ಬಹುಮುಖ ಮತ್ತು ಬುದ್ಧಿವಂತ ವ್ಯಕ್ತಿ ಎಂಬುದನ್ನು ಇದು ಬಹಿರಂಗಪಡಿಸುತ್ತದೆ. ಬದಲಾವಣೆ ಜಗದ ನಿಯಮ. ಈ ಬದಲಾವಣೆ ಬೆಳವಣಿಗೆಯನ್ನು ಸೂಚಿಸುತ್ತದೆ. ಆದ್ರಿಂದ ನೀವು ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತೀರಿ ಹಾಗೂ ಅದಕ್ಕೆ ತಕ್ಕಂತೆ ಬಹಳ ಬೇಗನೇ ಹೊಂದಿಕೊಳ್ಳುತ್ತೀರಿ. ನೀವು ವಿಶ್ಲೇಷಣಾತ್ಮಕ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅದನ್ನು ಪರಿಹರಿಸುವುದು ಬೇಗ. ನಿಮಗೆ ಚಾತುರ್ಯತೆ ಮತ್ತು ಶಕ್ತಿ ಹೆಚ್ಚು. ಮಗುವಿನಂತಹ ಮುಗ್ಧತೆಯನ್ನು ನಿಮ್ಮಲ್ಲಿದ್ದರೂ, ನೀವು ಬೌದ್ಧಿಕ ಚರ್ಚೆಗಳನ್ನು ಇಷ್ಟಪಡುತ್ತೀರಿ. ಆದಾಗ್ಯೂ, ನಿಮ್ಮ ನಿರಾತಂಕದ ವರ್ತನೆಯು ನಿಮ್ಮ ಪ್ರೀತಿ ಜೀವನಕ್ಕೆ ಒಳ್ಳೆಯದಲ್ಲ. ಹೃದಯದಿಂದ ಪ್ರೀತಿ ಮಾಡೋದನ್ನು ಕಲಿಯೋದು ಒಳ್ಳೆಯದು.

• ಎರಡೂ ಕೈಗಳಿಂದ ಫೋನ್ ಹಿಡಿದು, ಕೇವಲ ಹೆಬ್ಬೆರಳನ್ನು ಬಳಸುವವರು: ನಿಮ್ಮ ಫೋನ್ ಅನ್ನು ಎರಡೂ ಕೈಗಳಿಂದ ಹಿಡಿದಿಟ್ಟುಕೊಂಡು, ಸ್ಕ್ರಾಲ್ ಮಾಡಲು ಅಥವಾ ಟೈಪ್ ಮಾಡಲು ಒಂದು ಹೆಬ್ಬೆರಳನ್ನು ಬಳಸುವವರು ನೀವಾಗಿದ್ದರೆ, ನೀವು ಅರ್ಥಗರ್ಭಿತ, ಪ್ರಾಯೋಗಿಕ ಮತ್ತು ಬುದ್ಧಿವಂತರು ಎಂಬ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತವೆ. ಅಂದರೆ ನೀವು ಯಾವುದಕ್ಕೂ ಸುಲಭವಾಗಿ ಮಾರುಹೋಗುವುದಿಲ್ಲ. ಎಲ್ಲವನ್ನೂ ಕೂಲಂಕುಶವಾಗಿ ಚಿಂತಿಸಿ, ತುಂಬಾ ಜಾಗರೂಕತೆಯಿಂದ ಬದುಕು ನಡೆಸುವಂತವರಾಗಿರುತ್ತೀರಿ. ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಬದುಕುವುದು ಜೀವನದ ಎರಡು ವಿಭಿನ್ನ ಮಾರ್ಗಗಳಾಗಿವೆ. ಎಚ್ಚರಿಕೆಯಿಂದ ಬದುಕುವುದು ಎಂದರೆ ಯಾವುದೇ ಅಪಾಯ ತೆಗೆದುಕೊಳ್ಳದಂತೆ ಬದುಕುವುದು. ಈ ಬದುಕನ್ನು ನೀವು ಬದುಕುತ್ತೀರಿ.. ನಿಮ್ಮ ಅರ್ಥಗರ್ಭಿತ ಸ್ವಭಾವವು ಯಾವುದೇ ಸನ್ನಿವೇಶದಲ್ಲಿ ನಿಮ್ಮನ್ನು ಉತ್ತಮ ತೀರ್ಪುಗಾರರನ್ನಾಗಿ ಮಾಡುತ್ತದೆ. ಇದರ ಜೊತೆಗೆ ಕಾಳಜಿ ಮತ್ತು ಸಹಾನುಭೂತಿ ಹೆಚ್ಚೇ ಇದೆ. ನೀವು ಬೇಗನೆ ಪ್ರೀತಿಯಲ್ಲಿ ಬೀಳಬಹುದು ಆದರೆ ಅವಸರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಬೆಳೆಸಿಕೊಳ್ಳಬೇಕು.

• ಒಂದೇ ಕೈಯಲ್ಲಿ ಫೋನ್‌, ಅದೇ ಕೈ ಹೆಬ್ಬೆರಳು ಬಳಸುವವವರು: ನಿಮ್ಮ ಫೋನನ್ನು ಒಂದು ಕೈಯಿಂದ ಹಿಡಿದು, ಅದೇ ಕೈಯ ಹೆಬ್ಬೆರಳಿನಿಂದ ನಿಮ್ಮ ಫೋನನ್ನು ಸ್ಕ್ರಾಲ್ ಮಾಡುವಂತವರು ನೀವಾದರೆ, ನೀವು ಆಶಾವಾದಿಗಳೆಂದು ಅರ್ಥ. ಹೌದು, ಪೋನ್‌ ಹಿಡಿದುಕೊಳ್ಳುವ ಈ ಸ್ಟೈಲ್‌ ಪ್ರಕಾರ ನೀವು ಆತ್ಮವಿಶ್ವಾಸವುಳ್ಳವರು ಹಾಗೂ ನಿರಾಂತಕದ ವ್ಯಕ್ತಿಗಳು. ಜೀವನ ಹೇಗೆ ಬರುತ್ತದೆಯೋ ಅದೇ ರೀತಿ ಸ್ವೀಕರಿಸುತ್ತೀರಿ. ಆ ಜೀವನಕ್ಕೆ ಯಾವುದೇ ಕೊರಗಿಕೊಂಡು ಕೂರುವುದಿಲ್ಲ. ನೀವು ಕೊರಗುವ ಅಥವಾ ದೂರುವ ವ್ಯಕ್ತಿಯಲ್ಲ. ನಿಮ್ಮ ಸಾಮರ್ಥ್ಯಗಳ ಮೇಲೆ ನಿಮಗೆ ವಿಶ್ವಾಸ ಇದೆ. ನೀವು ಅಂದುಕೊಂಡ ರೀತಿಯಲ್ಲಿ ಏನಾದರೂ ಕೆಲಸ ಆಗದಿದ್ದಲ್ಲಿ, ನೀವಿನ್ನೂ ಕಲಿಯಲು ಬಹಳಷ್ಟಿದೆ ಎಂಬ ಪಾಠವನ್ನು ಕಲಿಯಲು ಮುಂದಾಗುತ್ತೀರಿ. ಜೀವನದಲ್ಲಿ ಬೇಗನೇ ಮುಂದೆ ಹೋಗುತ್ತೀರಿ. ಅಷ್ಟೇ ಅಲ್ಲ, ನಿಮ್ಮ ಆರಾಮ ವಲಯದಿಂದ ಹೊರಗೆ ಹೋಗಲು ಇಷ್ಟ ಪಡುವಂತಹ ವ್ಯಕ್ತಿಗಳು ನೀವು. ಈ ವ್ಯಕ್ತಿತ್ವದ ಲಕ್ಷಣಗಳು ವೃತ್ತಿಪರ ಜೀವನದಲ್ಲಿ ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತವೆ, ಆದರೆ ಅವು ನಿಮ್ಮ ಪ್ರೀತಿಯ ಜೀವನಕ್ಕೆ ಹಾನಿಕಾರಕವಾಗಿದೆ.

Leave A Reply

Your email address will not be published.