Breaking News । ಭಯಾನಕ ಕಾಳ್ಗಿಚ್ಚಿಗೆ ಸಿಕ್ಕ ಕರ್ನಾಟಕ ತತ್ತರ, ಹತೋಟಿಗೆ ಬಾರದ ಬೆಂಕಿ, ಕ್ಷಣಕ್ಷಣಕ್ಕೂ ವ್ಯಾಪಿಸುತ್ತಿರುವ ಅಗ್ನ್ಜಿಜ್ವಾಲೆ !!

Share the Article

ಕರ್ನಾಟಕವೊಂದು ಭಯಾನಕ ಕಾಳ್ಗಿಚ್ಚಿಗೆ (Wild fire) ಬಲಿಯಾಗುತ್ತಿದೆ. ಪರಿಸ್ಥಿತಿ ಕೈ ಮೀರಿ ಹೋಗಿದೆ ಎನ್ನಲಾಗುತ್ತಿದೆ. ಕಾಡಿಗೆ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಕ್ಷಣ ಕ್ಷಣಕ್ಕೂ ವ್ಯಾಪಿಸಿತ್ತಿದೆ.

ಪಶ್ಚಿಮ ಘಟ್ಟಗಳ ಮೇಲ್ಭಾಗದಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡ ಕಾಡ್ಕಿಚ್ಚು ನಿಯಂತ್ರಣ ಮೀರಿ ಹರಡುತ್ತಿದೆ. ಪರಿಸ್ಥಿತಿ ಕೈ‌ ಮೀರುವ ಸಾಧ್ಯತೆ. ಇದು ಬೆಳ್ತಂಗಡಿ ತಾಲೂಕಿನ ನಾರಾವಿಯ ಸಮೀಪ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮಕ್ಕೆ ಒತ್ತಿಕೊಂಡಂತೆ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಮತ್ತು ಬೆಳ್ತಂಗಡಿಯನ್ನು ಗಡಿಯಾಗಿ ಹಂಚಿಕೊಂಡ ಪ್ರದೇಶದಲ್ಲಿ ಈಗ ಬೆಂಕಿ ಹಬ್ಬಿ ನಿಂತಿದೆ. ಕಾಡಿನ ತಪ್ಪಲಿನ ಕುತ್ಲೂರು ಸುಳ್ಕೇರಿ ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸುತ್ತಲಿನ ಜನಜೀವನ ಅಸ್ತವ್ಯಸ್ತ ಮತ್ತು ಭಯಭೀತ !!

ಭಯಾನಕ ಕಾಳ್ಗಿಚ್ಚು ಹತೋಟಿ ಮೀರಿ ಅರಣ್ಯ ಸಂಪತ್ತನ್ನು ನಾಶಪಡಿಸುತ್ತಿದೆ. ಸ್ಥಳಕ್ಕೆ ಶೀಘ್ರದಲ್ಲೇ ರಾಷ್ಟ್ರೀಯ ವಿಪತ್ತು ದಳ ಬರುವ ಸಾಧ್ಯತೆ ಇದೆ. ಇದೀಗ ಸ್ಥಳಕ್ಕೆ ಸ್ಥಳೀಯ ವಿಪತ್ತುದಳ ಆಗಮಿಸಿದೆ. ಅಗ್ನಿಶಾಮಕದಳಗಳ ಬೃಹತ್ ದಂಡು ಸ್ಥಳಕ್ಕೆ ಅಡಿಯಿಡುತ್ತಿದೆ. ಇದು ಇತ್ತೀಚಿಗೆ ಕುದ್ರೆಮುಖದಲ್ಲಿ ಘಟಿಸಿದ ಕಾಡಿನ ಬೆಂಕಿಗಿಂತಲೂ ಘೋರ ಎನ್ನಲಾಗುತ್ತಿದೆ.

ಬಂಗಾರಪಲ್ಕೆಯಲ್ಲಿ ಶಮನ ತಂಡ ಇದ್ದು, ಬೆಂಕಿ ಇನ್ನೊಂದು ಕಡೆ ಇದೆ. ಅಲ್ಲಿಗೆ ಹೋಗಿ ಬೆಂಕಿ ಆರಿಸುವ ಸಾಧ್ಯತೆ ಇಲ್ಲ. ಹೆಲಿಕಾಪ್ಟರ್ ನಲ್ಲಿ ನೀರು ಹಾಯಿಸುವ ಅಗತ್ಯ ಇದೆ ಅಂತ ಸ್ಥಳೀಯ ತಜ್ಞರು ಹೇಳಿದ್ದಾರೆ.

ಲೇಟೆಸ್ಟ್‌ ಅಪ್ಡೇಟ್‌ : 

ಚಾರ್ಮಾಡಿ ಘಾಟ್‌ನ ಆಲೇಕಾನ್ ಜಲಪಾತದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಬಫರ್ ಲ್ಯಾಂಡ್, ಚಾರ್ಮಾಡಿ ಘಾಟಿಯ ಅಣ್ಣಪ್ಪ ಬೆಟ್ಟ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಹೆಚ್ಚು ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಚಾರ್ಮಾಡಿ ಘಾಟ್‌ನ ಸುಮಾರು 3 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿದ್ದ ತಕ್ಷಣವೇ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಆರಿಸಿದ್ದಾರೆ. ಮಂಗಳವಾರ ತಡರಾತ್ರಿವರೆಗೂ ಬೆಳ್ತಂಗಡಿ ವನ್ಯಜೀವಿ ವಿಭಾಗವನ್ನು ಒಳಗೊಂಡಂತೆ ಅಳದಂಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಂಡ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರ್ಯ ಪವೃತ್ತರಾದ ಹಿನ್ನೆಲೆ ಹೆಚ್ಚಿನ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ.

 

Leave A Reply