OnePlus 11R 5G : ಶುರುವಾಯ್ತು ಒನ್‌ಪ್ಲಸ್‌ 11R 5G ಫೋನ್‌ನ ಅಬ್ಬರ ! ಏನಿದರ ವೈಶಿಷ್ಟ್ಯತೆ?

OnePlus 11R 5G : ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ವಿಭಿನ್ನ ವೈಶಿಷ್ಟ್ಯದ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವ ಮೂಲಕ ತಮ್ಮದೇ ಆದ ಸ್ಥಾನವನ್ನು ಗಳಿಸಿವೆ. ಅದರಲ್ಲಿ OnePlus ಕಂಪನಿಯೂ ಒಂದು. ಕಂಪನಿ ಅದ್ಭುತ ವಿನ್ಯಾಸದ ಸ್ಮಾರ್ಟ್ ಫೋನ್, ಇಯರ್ ಬಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಜನರನ್ನು ಆಕರ್ಷಿಸುತ್ತಲಿದೆ. ಸದ್ಯ OnePlus ಕಂಪೆನಿಯ ಇತ್ತೀಚಿನ OnePlus 11R 5G ಸ್ಮಾರ್ಟ್‌ಫೋನ್ ಇಂದಿನಿಂದ ಮೊದಲ ಬಾರಿಗೆ ಪ್ರೀ-ಬುಕ್ಕಿಂಗ್‌ ಗೆ ಲಭ್ಯವಿದೆ.

ಫೆಬ್ರವರಿ 7 2023 ರಂದು OnePlus 11 ಸ್ಮಾರ್ಟ್‌ಫೋನ್ ಜೊತೆಗೆ OnePlus 11R 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್ ಫೋನ್ ಅನ್ನು ಇಂದಿನಿಂದ ಅಮೆಜಾನ್ ಇಂಡಿಯಾ, OnePlus ಸ್ಟೋರ್, ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರೀ-ಬುಕ್ ಮಾಡಲು ಅವಕಾಶ ನೀಡಲಾಗಿದೆ. ಗ್ರಾಹಕರು 39,999 ರೂ.ಬೆಲೆಯಲ್ಲಿ 8GB+128GB ಮೊಮೊರಿ ಸಾಮರ್ಥ್ಯದ ಹಾಗೂ 44,999 ರೂ. ಬೆಲೆಯಲ್ಲಿ ಹೈ-ಎಂಡ್ 16GB+256GB ಮೆಮೊರಿ ಸಾಮರ್ಥ್ಯದ OnePlus 11R 5G ಸ್ಮಾರ್ಟ್‌ಫೋನನ್ನು ಖರೀದಿ ಮಾಡಬಹುದಾಗಿದೆ. ಹಾಗೆಯೇ ಇವುಗಳು Sonic Black ಮತ್ತು Galatic Silver ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇದಿಷ್ಟೇ ಅಲ್ಲದೆ, OnePlus 11R ಸ್ಮಾರ್ಟ್‌ಫೋನ್ ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ಉಚಿತವಾಗಿ 4,999 ರೂ. ಬೆಲೆಯ OnePlus Buds Z2 ಇಯರ್‌ಬಡ್ಸ್ ಕೂಡ ಲಭ್ಯವಾಗಲಿದೆ. ಇದೊಂದೇ ಅಲ್ಲದೆ, ನೀವು ICICI ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, 1,000 ರಿಯಾಯಿತಿ ಸಿಗುತ್ತದೆ. ಹಾಗೆಯೇ
OnePlus ರೆಡ್ ಕೇಬಲ್ ಕ್ಲಬ್ ಸದಸ್ಯರಿಗೆ 2,000 ರಿಯಾಯಿತಿ ಲಭ್ಯವಾಗುತ್ತದೆ.

OnePlus 11R ಸ್ಮಾರ್ಟ್‌ಫೋನ್ ವೈಶಿಷ್ಟ್ಯತೆ ಬಗ್ಗೆ ಹೇಳಬೇಕಾದರೆ, ಇದು 6.74-ಇಂಚಿನ ಪೂರ್ಣ-HD+ (2772×1240) ಕರ್ವ್ಡ್ AMOLED ಡಿಸ್‌ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ಈ ಡಿಸ್‌ಪ್ಲೇ 40Hz-120Hz ನ ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್, 1000Hz ವರೆಗೆ ಟಚ್ ರೆಸ್ಪಾನ್ಸ್, 4450 ppi ಬ್ರೈಟ್‌ನೆಸ್, 450ppi ಪಿಕ್ಸೆಲ್ ಸಾಂದ್ರತೆ, 1,450 ನಿಟ್ಸ್ ಪೀಕ್ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್ 16GB RAM ಮತ್ತು 256GB ಹೊಂದಿದ್ದು, ಬಲಿಷ್ಟವಾದ Snapdragon 8+ Gen 1 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. Adreno 740 GPU ಹೊಂದಿರುವ ಈ ಸ್ಮಾರ್ಟ್‌ಫೋನ್ Android 13 ನಲ್ಲಿ ColorOS 13.0 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ GPA (ಯಂತ್ರ ಕಲಿಕೆ)ಫ್ರೇಮ್ ಸ್ಟೆಬಿಲೈಸರ್ 4.0 ನಂತಹ ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್‌ನಲ್ಲಿ ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಬಂದಿದ್ದು, ಇದು 50-ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಲೆನ್ಸ್, 8-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 120-ಡಿಗ್ರಿ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 4cm ಮ್ಯಾಕ್ರೋ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಹೋಲ್-ಪಂಚ್ ಕಟೌಟ್‌ನಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು, ಫೋನಿನ ಹಿಂಬದಿಯ ಕ್ಯಾಮೆರಾ 4K ಗುಣಮಟ್ಟದ ವೀಡಿಯೊಗಳನ್ನು 30fps ರೆಕಾರ್ಡ್ ಮಾಡುತ್ತದೆ‌. ಮತ್ತು ಅದರ EIS ಮತ್ತು OIS ಬೆಂಬಲದಿಂದ ಶೇಕ್-ಫ್ರೀ ಆಗಿದೆ ಎಂದು ಕಂಪೆನಿ ತಿಳಿಸಿದೆ.

ಹಾಗೆಯೇ ಸೂಪರ್-ಫಾಸ್ಟ್ 100W SUPERVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಈ ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G, 4G, Wi-Fi, ಬ್ಲೂಟೂತ್ 5.3, NFC ಮತ್ತು GPS ವೈಶಿಷ್ಟ್ಯಗಳು ಇವೆ. ಉತ್ತಮ ಫೀಚರ್ಸ್ ಇರುವ ಅತ್ಯುತ್ತಮ ಸ್ಮಾರ್ಟ್ ಫೋನ್ ಆಗಿದ್ದು, ಇಂದೇ ಬುಕ್ ಮಾಡಿ‌.

Leave A Reply

Your email address will not be published.