Home Latest Sports News Karnataka IND vs AUS 3rd Test : ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್‌ ಎಲ್ಲಿ ನಡೆಯಲಿದೆ?

IND vs AUS 3rd Test : ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್‌ ಎಲ್ಲಿ ನಡೆಯಲಿದೆ?

cricket

Hindu neighbor gifts plot of land

Hindu neighbour gifts land to Muslim journalist

IND vs AUS 3rd Test: ಕ್ರಿಕೆಟ್ ಎಂಬ ಮಾಂತ್ರಿಕ ಲೋಕದ ಹಣಾಹಣಿ ಪಂದ್ಯದ ರೋಚಕ ಕ್ಷಣಗಳನ್ನು ಎದುರು ನೋಡಲು ಇಡೀ ಕ್ರಿಕೆಟ್ ಅಭಿಮಾನಿಗಳು ಕೌತುಕದಿಂದ ಕಾಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಅಡಿಯಲ್ಲಿ ನಡೆಯುತ್ತಿರುವ 4 ಪಂದ್ಯಗಳ ಸರಣಿಯಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಎರಡು ಟೆಸ್ಟ್ ಪಂದ್ಯ ಮುಗಿದಿದೆ. ಹಾಗೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಜಿದ್ದಾ ಜಿದ್ದಿಯ ತೃತೀಯ ಟೆಸ್ಟ್  ಪಂದ್ಯ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ನಡೆಯಲಿದೆ.

ಇತ್ತೀಚೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆದಿದ್ದು, ಭಾರತ ಕಾಂಗರೂಗಳನ್ನು 132 ರನ್‌ಗಳಿಂದ  ಮಣಿಸಿತ್ತು. ಟೀಮ್ ಇಂಡಿಯಾ ಮೊದಲ ಎರಡು ಟೆಸ್ಟ್ ನಲ್ಲಿ ಭರ್ಜರಿ ಗೆಲುವಿನ ನಗೆ ಬೀರಿ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉಭಯ ತಂಡಗಳ ನಡುವೆ ತೃತೀಯ ಕದನಕ್ಕೆ   ವೇದಿಕೆ ಅಣಿಯಾಗಲಿದ್ದು, ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಅಭಿಮಾನಿಗಳಲ್ಲಿ  ಮನೆ ಮಾಡಿದ್ದು, ಬಾರ್ಡರ್- ಗವಾಸ್ಕರ್ ಟ್ರೋಫಿ ಯಾರ ಮುಡಿಗೆ ಏರಲಿದೆ ಎಂಬ ಕುತೂಹಲ ಸದ್ಯ ಗರಿಗೆದರಿವೆ. ಹಾಗಾದರೆ, ಇಂಡೋ- ಆಸೀಸ್ ಮೂರನೇ ಟೆಸ್ಟ್ (IND vs AUS 3rd Test)ಯಾವಾಗ ಶುರುವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಈಗಾಗಲೆ  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ  ಮೊದಲೆರಡು ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು, ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಎದುರಾಳಿ ತಂಡದ ಬೆವರಿಳಿಸುವಲ್ಲಿ ಯಶಸ್ವಿಯಾಗಿದ್ದರು. ಭಾರತ ತಂಡ  ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಅದರಲ್ಲಿಯೂ ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ವೇಳೆ ರವೀಂದ್ರ ಜಡೇಜಾ (Ravindra jadeja) ಹಾಗೂ ರವಿಚಂದ್ರನ್ ಅಶ್ವಿನ್ ಸ್ಪಿನ್ ತಂತ್ರಗಾರಿಕೆಯನ್ನು ಅರಿತುಕೊಳ್ಳಲು ಎದುರಾಳಿ ಪಡೆ ವಿಫಲ ಪ್ರಯತ್ನ ನಡೆಸಿದೆ. ಹೀಗಾಗಿ, ಸದ್ಯ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು (Border gavaskar Trophy) ಭಾರತ ತನ್ನಲ್ಲೇ ಉಳಿಸಿಕೊಂಡಿದೆ.

ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಮತ್ತು 4ನೇ ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದ್ದು,  ಮೊದಲ 2 ಟೆಸ್ಟ್ ಪಂದ್ಯಗಳಲ್ಲಿದ್ದ ಆಟಗಾರರು ಇನ್ನುಳಿದ  ಪಂದ್ಯಗಳಲ್ಲಿ ಕೂಡ ಇರಲಿದ್ದಾರೆ. ಆದರೆ, ಉಪ ನಾಯಕ ಯಾರು ಎಂಬ ಗುಟ್ಟನ್ನು ಸದ್ಯ ಬಿಸಿಸಿಐ ರಟ್ಟು ಮಾಡುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಇನ್ನೂ 2ನೇ ಟೆಸ್ಟ್ ಪಂದ್ಯದಿಂದ ಹೊರಗಿದ್ದ ಜಯದೇವ್ ಉನಾದ್ಕಟ್ ಅವರನ್ನು ಉಳಿದ ಎರಡು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದ್ದು, ಇನ್ನೂ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಮತ್ತು 4ನೇ ಟೆಸ್ಟ್ ಈ ಎರಡು ಪಂದ್ಯದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಜಿದ್ದಾ ಜಿದ್ದಿಯ ತೃತೀಯ ಟೆಸ್ಟ್  ಪಂದ್ಯ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ನಡೆಯಲಿದೆ. ಇಂಡೋ- ಆಸೀಸ್ ಮೂರನೇ  ಟೆಸ್ಟ್ ಪಂದ್ಯವು ಬೆಳಗ್ಗೆ 09:30 ಕ್ಕೆ ಆರಂಭವಾಗಲಿದ್ದು, ಒಂಬತ್ತು ಗಂಟೆಗೆ ಟಾಸ್ ಪ್ರಕ್ರಿಯೆ ಜರುಗಲಿದೆ. ಈ ಜಿದ್ದಾ ಜಿದ್ದಿನ ಪಂದ್ಯ ನೋಡೋದು ಹೇಗಪ್ಪಾ ಅಂತ ಯೋಚಿಸುತ್ತಿದ್ದೀರಾ?? ಚಿಂತೆ ಬಿಡಿ!! ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದ ಹಣಾಹಣಿ ಪಂದ್ಯವನ್ನು  ನೇರ ಪ್ರಸಾರದ ಮೂಲಕ ನೋಡಬಹುದು. ಅದು ಹೇಗಪ್ಪಾ ಅಂದರೆ, ನಿಮಗಾಗಿ  ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ  ಪ್ರಸಾರ  ಇರಲಿದ್ದು, ಹಾಗೆಯೇ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕೂಡ ಲಭ್ಯವಾಗಲಿದೆ.