Notes Showered In Gujarat : ರೂ.500 ರ ನೋಟಿನ ಮಳೆ ಸುರಿಸಿದ ಊರಿನ ಮುಖ್ಯಸ್ಥ! ವೀಡಿಯೋ ವೈರಲ್!

Notes Showered In Gujarat: ಸಾಮಾನ್ಯವಾಗಿ ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ನೋಡಿರುತ್ತೇವೆ. ಪಾರ್ಟಿಗಳಲ್ಲಿ ಹಣವನ್ನು ಕೈಯಲ್ಲಿ ಹಿಡ್ಕೊಂಡು ಪೇಪರ್ ತರ ಎಲ್ಲೆಡೆ ಬಿಸಾಕಿಬಿಡುತ್ತಾರೆ. ಸಿನಿಮಾದಲ್ಲಿ ಅದು ಅಸಲಿ ಹಣ ಆಗಿರೋದಿಲ್ಲ. ಆದ್ರೆ ಇಲ್ಲೊಬ್ಬ ಅಸಲಿ ಹಣವನ್ನು, ಅದರಲ್ಲೂ ಗರಿ ಗರಿ 500 ರೂ. ನೋಟುಗಳನ್ನು ಪೇಪರ್ ತರ ತೂರಿ ಬಿಟ್ಟ. ಅದನ್ನ ತೊಗೊಳೋದಿಕ್ಕೆ ಜನರೆಲ್ಲಾ ಮುಗ್ಗರಿಸಿಕೊಂಡು ಮುಗಿಬೀಳುತ್ತಿದ್ದಾರೆ. ಅಬ್ಬಾ!! ಇವನಿಗೆ ಏನಾಗಿರಬಹುದು? ಸದ್ಯ ಪ್ರಪಂಚದಲ್ಲಿ ದುಡ್ಡಿಗೆ ಮುಗಿಬೀಳದವರಿಲ್ಲ. ಎಲ್ಲಾ ದುಡಿತಿರೋದೇ ದುಡ್ಡಿಗೆ. ಅಂತದ್ರಲ್ಲಿ ಕಂತೆ ಕಂತೆ ದುಡ್ಡನ್ನು ಎಸಿತಿದಾನಲ್ಲ ಇವನು. ಬನ್ನಿ ಅಸಲಿ ವಿಚಾರ ತಿಳಿಯೋಣ.

ಈ ಘಟನೆ ಗುಜರಾತ್ ನಲ್ಲಿನ ಮೆಹಸಾನ ಜಿಲ್ಲೆಯ ಕೇಕ್ರಿ ತಾಲೂಕಿನ ಅಗೋಲ್ ಎಂಬ ಗ್ರಾಮದಲ್ಲಿ ನಡೆದಿದ್ದು, ಗರಿ ಗರಿ ನೋಟುಗಳನ್ನು ಎಸೆದಿರುವಾತ ಸ್ಥಳೀಯ ಗಾಮಪಂಚಾಯ್ತಿ ಮಾಜಿ ಅಧ್ಯಕ್ಷ ಕರೀಂ ಯಾದವ್‌ ಎಂಬಾತ ಎಂದು ಹೇಳಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯಾದವ್‌ ತನ್ನ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮದಲ್ಲಿ  ಮನೆಯ ಮೇಲಿಂದ ₹100 ಹಾಗೂ ₹500 ಮುಖ ಬೆಲೆ ನೋಟುಗಳನ್ನು ತೂರಿದ್ದಾರೆ (Notes Showered In Gujarat). ಅವರು ಜೊತೆಗೆ ಹಲವರು ಟೆರೇಸ್ ಮೇಲೆ ನಿಂತು ಹಣ ಎಸಿತಿದ್ದಾರೆ. ಟೆರೇಸ್ ನಿಂದ ಹಾರಿ ಬಂದ ನೋಟುಗಳನ್ನು ಬಾಚಿಕೊಳ್ಳಲು ಸಾಕಷ್ಟು ಜನರು ಮುಗಿಬೀಳುತ್ತಿರುವ ದೃಶ್ಯ ವಿಡಿಯೋದಲ್ಲಿ ನೋಡಬಹುದು.

ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಕೆ.ಆರ್. ಮಾರ್ಕೆಟ್ ಪ್ರೈಓವರ್ (KR Market Flyover) ಮೇಲೆ ನಿಂತು ನೋಟುಗಳನ್ನು ಎಸೆದಿದ್ದ. ಈತನ ಚೇಷ್ಟೆಯಿಂದ ಟ್ರಾಫಿಕ್ ಜಾಮ್ ಆಗಿ, ನಂತರ ಆತನನ್ನು

ಪೊಲೀಸರು ವಶಪಡಿಸಿಕೊಂಡಿದ್ದರು. ಇದಲ್ಲದೆ, ಈ ಹಿಂದೆ ಹೈದರಾಬಾದ್‌ನಲ್ಲೂ ವಿವಾಹ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ₹500 ರೂ ಮುಖಬೆಲೆಯ ನೋಟುಗಳನ್ನು ರಸ್ತೆಯಲ್ಲಿ ಎರಚಿದ್ದರು. ಬಹುಶಃ ಹಣ ಹೆಚ್ಚಾಗಿದೆಯೋ ಅಥವಾ ಸಂಪ್ರದಾಯವೋ ಅಥವಾ ಇನ್ನೇನೋ ತಿಳಿಯದು. ಒಟ್ಟಾರೆ ಈ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Leave A Reply

Your email address will not be published.