LPG : ಇನ್ನು ಮುಂದೆ ಎಲ್‌ಪಿಜಿ ಗೆ ಹೇಳಿ ಗುಡ್‌ ಬೈ, ಬಂದಿದೆ ಹೊಸ ವಿಶೇಷ ಸ್ಟವ್‌ ! ಸುಲಭವಾಗಿ ಅಡುಗೆ ತಯಾರಿ

Surya nutan Solar Stove : ಸಾಮಾನ್ಯ ಜನತೆಗೆ ದಿನಂಪ್ರತಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಪ್ರತಿ ವಸ್ತುಗಳ ಬೆಲೆ ಗಗನಕ್ಕೆರುತ್ತಿದ್ದು, ಜನರ ಉಳಿತಾಯಕ್ಕಿಂತ ಹೆಚ್ಚು ವೆಚ್ಚ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಜನರ ಪರಿಸ್ಥಿತಿ. ಇದರ ಜೊತೆಗೆ ವಾಹನ ಬಳಕೆ ಮಾಡದೇ ಇರಲು ಸಾಧ್ಯವೇ?? ಇವುಗಳಿಗೆ ಬಳಕೆ ಮಾಡುವ ಪೆಟ್ರೋಲ್ ಡೀಸೆಲ್ ಹಾಗೂ ಮಹಿಳೆಯರ ನೆಚ್ಚಿನ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆ ಏರಿಕೆ ಕಂಡು ಜನರ ಸಂಕಷ್ಟದ ಪಾಡು ಹೇಳತೀರದು. ಆದರೆ, ನೀವು ಹೀಗೆ ಚಿಂತಿಸುವ ಅವಶ್ಯಕತೆ ಇಲ್ಲ. ಯಾಕೆ ಅಂತೀರಾ??ಹಾಗಿದ್ರೆ ಈ ಮಾಹಿತಿ ನೀವು ಅರಿತಿರುವುದು ಉತ್ತಮ. ನಿಮ್ಮ ಬಜೆಟ್ ನಲ್ಲಿ ಉಳಿತಾಯ ಮಾಡುವ ಸಲಹೆ ಬಗ್ಗೆ ನಾವು ಹೇಳ್ತೀವಿ ಕೇಳಿ!

ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು (Indian Oil Corporation ) ‘ಸೂರ್ಯ ನೂತನ್’ ಸೌರ ಒಲೆ ( Surya nutan Solar Stove) ಸಿದ್ಧಪಡಿಸಿದ್ದು, ಸೂರ್ಯ ನೂತನ್ ಸ್ಟವ್ ಅನ್ನು ಮನೆಗೆ ತಂದರೆ ನೀವು ದುಬಾರಿ ಎಲ್ಪಿಜಿ ಗ್ಯಾಸ್(LPG GAS CYLINDER) ಸಿಲಿಂಡರ್ ಗಳನ್ನು ಕೈ ಬಿಡಬಹುದು. ಹಾಗಿದ್ರೆ ಮಳೆಗಾಲ ಬೇರೆ ಶುರುವಾಗಲಿದೆ. ಈಗ ಬಿಸಿಲು ಕೂಡ ಇರೋದಿಲ್ಲ ? ಮತ್ತೆ ಹೇಗಪ್ಪಾ ಅಂತ ಯೋಚಿಸುತ್ತಿದ್ದೀರಾ ? ನೀವು ಈ ಹೀಗೆ ಟೆನ್ಶನ್ ಮಾಡ್ಕೊಳೋದೆ ಬೇಡ!!

ಸೂರ್ಯ ನೂತನ್ ಸೋಲಾರ್ ಸ್ಟೌವ್ 2 ಘಟಕಗಳನ್ನು ಹೊಂದಿದ್ದು, ಒಂದು ಸ್ಟವ್ ಅಡುಗೆಮನೆಯಲ್ಲಿ ಇರಿಸಬಹುದು. ಇನ್ನೊಂದು ಘಟಕವು ಛಾವಣಿಯ ಮೇಲೆ ಸೌರ ಫಲಕಕ್ಕೆ ಸಂಪರ್ಕವನ್ನು ಹೊಂದಿರುತ್ತದೆ. ಅಡುಗೆಮನೆಯಲ್ಲಿ ಸ್ಟವ್ ಇರಿಸಿ, ನೀವು ಸುಲಭವಾಗಿ ಇದನ್ನು ಬಳಕೆ ಮಾಡಬಹುದಾಗಿದ್ದು, ಇದರ ಜೊತೆಗೆ ಪುನರ್ಭರ್ತಿ ಮಾಡಲೂ ಅವಕಾಶ ಕಲ್ಪಿಸಲಾಗಿದ್ದು ಒಳಾಂಗಣ ಸೌರ ಅಡುಗೆ ವ್ಯವಸ್ಥೆ ಕೂಡ ಇರಲಿದೆ.ಈ ಸ್ಟವ್ ಅನ್ನು ಮೇಲ್ಛಾವಣಿಯ ಮೇಲಿನ ಸೌರ ಫಲಕಕ್ಕೆ ಕೇಬಲ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಪ್ಲೇಟ್ ಸೌರ ಶಕ್ತಿಯನ್ನು ಥರ್ಮಲ್ ಬ್ಯಾಟರಿಯಲ್ಲಿ ಸಂಗ್ರಹ ಮಾಡುವುದರಿಂದ ರಾತ್ರಿಯಲ್ಲಿ ಕೂಡ ಸೂರ್ಯ ನೂತನ್ ಒಲೆಯಿಂದಲೇ ಅಡುಗೆ ತಯಾರಿಸಬಹುದು.

ಇದರ ಜೊತೆಗೆ ಈ ಸ್ಟೌವ್ ಹೈಬ್ರಿಡ್ ಮೋಡ್‌ನಲ್ಲಿ ಕೂಡ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ನೀವು ಸೌರಶಕ್ತಿ ಮತ್ತು ವಿದ್ಯುತ್‌ನಿಂದ ಇದನ್ನು ಬಳಕೆ ಮಾಡಬಹುದಾಗಿದೆ. ಈ ಸ್ಟೌವ್ 3 ವಿಭಿನ್ನ ಮಾದರಿಗಳಲ್ಲಿ ನಿಮಗೆ ದೊರೆಯಲಿದ್ದು, ಇದರ ಪ್ರೀಮಿಯಂ ಮಾದರಿಯು 4 ಜನರ ಕುಟುಂಬಕ್ಕೆ ಬೆಳಗಿನ ಉಪಾಹಾರ, ಊಟ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುವ ಪೂರ್ಣ ದಿನದ ಊಟವನ್ನು ತಯಾರಿಸಹುದಾಗಿದೆ. ಪ್ರತಿನಿತ್ಯ ಸಿಗುವ ಸೂರ್ಯನ ಬೆಳಕಿನ ಮೂಲಕ ಈ ಒಲೆಯ ಮೂಲಕ 4 ಮಂದಿಗೆ ಹಗಲು ರಾತ್ರಿ ಅಡುಗೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ ಎನ್ನಲಾಗಿದೆ.

ಇನ್ನು ಈ ಸೋಲಾರ್ ಒಲೆಯ ಬೆಲೆ ಎಷ್ಟು ಎಂದು ಗಮನಿಸಿದರೆ, ಈ ಸೋಲಾರ್ ಒಲೆಯ ಮೂಲ ಮಾದರಿಯ ಬೆಲೆ ಸುಮಾರು 12,000 ರೂ. ಹೊಂದಿದ್ದು, ಉನ್ನತ ಮಾದರಿಯ ಬೆಲೆ 23,000 ರೂ. ಮುಂದಿನ ದಿನಗಳಲ್ಲಿ ಈ ಬೆಲೆ ಗಣನೀಯವಾಗಿ ಕಡಿಮೆಯಾಗುವುದಲ್ಲದೆ ಸರ್ಕಾರವು ಈ ಒಲೆಯ ಮೇಲೆ ಸಹಾಯಧನವನ್ನು ನೀಡುವುದಾಗಿ ಘೋಷಿಸಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿಕೊಂಡಿದೆ. ಈ ಸ್ಟೌವ್ ನಿರ್ವಹಣೆಯಿಲ್ಲದೆ 10 ವರ್ಷಗಳವರೆಗೆ ಬಾಳಿಕೆ ಬರಲಿದ್ದು, ಬದಲಿ ವ್ಯವಸ್ಥೆ ಅಗತ್ಯವಿಲ್ಲದ ವಿಶಿಷ್ಟ ಬ್ಯಾಟರಿಯನ್ನು ಒಳಗೊಂಡಿರುವ ಬಗ್ಗೆ ಕೂಡ ಕಂಪೆನಿ ಮಾಹಿತಿ ನೀಡಿದೆ.

ಕಳೆದ 6 ತಿಂಗಳಲ್ಲಿ ಸರ್ಕಾರವು ಸುಮಾರು 50 ಸೋಲಾರ್ ಅಡುಗೆ ಟಾಪ್‌ಗಳನ್ನು ಆರ್ಮಿ, ಬಿಆರ್‌ಒ ಮತ್ತು ಶಾಲೆಗಳು ಸೇರಿದಂತೆ ತೀವ್ರ ಶೀತ ಮತ್ತು ಬಿಸಿ ವಾತಾವರಣ ಇರುವ ಕಡೆಗಳಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಅಷ್ಟೆ ಅಲ್ಲದೇ, ಲೇಹ್ ಸೇರಿದಂತೆ ಶೀತ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಸಿದ್ದಪಡಿಸಲಾಗಿದ್ದು. ಗ್ವಾಲಿಯರ್, ಉದಯಪುರ ಮತ್ತು ದೆಹಲಿ/ಎನ್‌ಸಿಆರ್‌ನಲ್ಲಿ ಪರೀಕ್ಷೆಯ ಮೂಲಕ ಜನರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.