ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ಬಾಲ್, ಹುಂಜ ಸಹಿತ ಇಬ್ಬರ ಬಂಧನ

Share the Article

Kundapur: ಉಡುಪಿ : ಕುಂದಾಪುರ ತಾಲೂಕಿನ ವಕ್ವಾಡಿ ಹೆಗ್ಗರ್‌ಬೈಲು ಚಿಕ್ಕು ಅಮ್ಮ ದೇವಸ್ಥಾನದ ಬಳಿ ಫೆ.17ರಂದು ಸಂಜೆ ವೇಳೆ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಇಬ್ಬರನ್ನು ಕುಂದಾಪುರ(Kundapur) ಪೊಲೀಸರು ಬಂಧಿಸಿದ್ದಾರೆ.

ತಲ್ಲೂರ್ ನೆಟ್ಟಿಬೈಲಿನ ಮಂಜುನಾಥ್ (31) ಹಾಗೂ ಆನಗಳ್ಳಿ ಗಾಣಿಗರ ಬೆಟ್ಟುವಿನ ಆದಿತ್ಯ (25) ಬಂಧಿತ ಆರೋಪಿಗಳು.

ಕೆಲವರು ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾರೆ. ಬಂಧಿತರಿಂದ 8000 ರೂ. ಮೌಲ್ಯದ ಹುಂಜ ಕೋಳಿಗಳು, 2 ಬಾಲ್, 900 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply