Maha shivaratri and Urus Celebration: ಪೊಲೀಸರ ಸರ್ಪಗಾವಲಲ್ಲಿ ಕಲಬುರಗಿಯ ದರ್ಗಾದೊಳಗಿಂದು ಶಿವರಾತ್ರಿ ಆಚರಣೆ! ಘರ್ಷಣೆ ಭೀತಿಯಿಂದ ಮನೆ ಬಿಟ್ಟ ಮುಸ್ಲಿಂಮರು! ಅರೆ ಏನಿದು ವಿವಾದ?

Maha shivaratri and Urus Celebration: ಇಂದು ಹಿಂದೂಗಳಿಗೆ ಮಹಾ ಶಿವರಾತ್ರಿ ಆಚರಣೆ ಸಂಭ್ರಮ. ಇದರೊಂದಿಗೆ ಇಂದು ಮುಸಲ್ಮಾನರ ಪವಿತ್ರ ಹಬ್ಬ ಉರುಸ್ ಆಚರಣೆ ಕೂಡ ಇದೆ. ಹಿಂದುಗಳೂ ಶಿವರಾತ್ರಿಯ ಆಚರಣೆಯನ್ನು ಹಾಗೂ ಮುಸಲ್ಮಾನರು ಅವರ ಹಬ್ಬವನ್ನು ತಮ್ಮ ಸಂಪ್ರದಾಯಗಳೊಂದಿಗೆ ಆಚರಿಸುತ್ತಾರೆ. ಆದರೆ ಈ ಹಬ್ಬ ಬಂತೆಂದರೆ ಕಲಬುರಗಿ(kalaburgi) ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇರುವ ಲಾಡ್ಲೆ ಮಾಶಾಖಾ(Ladley Mashak Dargah Urus) ದರ್ಗಾದಲ್ಲಿ ಮಾತ್ರ ಭಾರೀ ತಲೆನೋವು ಏರ್ಪಡುತ್ತದೆ. ಇದು ಕಳೆದ ವರ್ಷದಿಂದ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ವಾರದ ಮುಂಚಿತವಾಗಿಯೇ ಅಲ್ಲಿ ಪೋಲೀಸ್ ಸರ್ಪಗಾವಲು ಹಾಕಲಾಗುತ್ತದೆ!. ಅರೇ ಇಲ್ಯಾಕೆ ಹೀಗೆ? ಎಲ್ಲೆಡೆಯೂ ಶಾಂತವಾಗಿ ನಡೆಯುವ ಧರ್ಮದ್ವಯಗಳ ಹಬ್ಬ ಇಲ್ಲಿ ಮಾತ್ರ ಪೋಲೀಸ್ ಕಣ್ಗಾವಲಿನಲ್ಲಿ ಯಾಕೆ ನಡೆಯುತ್ತಿದೆ ಅನ್ಕೊಳ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು, ಇಂದು ಆಳಂದ್ ಪುರಸಭೆ ವ್ಯಾಪ್ತಿಯಲ್ಲಿ 144 ಕಲಂ, ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಆಳಂದ ಮಾರ್ಗವಾಗಿ ಬರುವ, ಹೊರ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸರು, ಯಾವುದೇ ಅಹಿತರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ, ಡಿಎಆರ್‌ ತುಕಡಿ, ಕ್ಯೂಆರ್‌ಟಿ ಹಾಗೂ ವಿಶೇಷ ಪೊಲೀಸ್‌ ಪಡೆ ಸೇರಿದಂತೆ ಸುಮಾರು 500 ಕ್ಕೂ ಅಧಿಕ ಪೊಲೀಸ್ರನ್ನು ಬಂದೋಬಸ್ತು ಸಲುವಾಗಿ ನಿಯೋಜನೆ ಮಾಡಲಾಗಿದೆ. ಸಾಲದಕ್ಕೆ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆಗೆ ಇಲಾಖೆಯ ಸಿದ್ಧತೆ ಇದೆ. ಅರೇ ಇಷ್ಟೆಲ್ಲಾ ಯಾಕೆ ಕ್ರಮಗಳು. ಅಂತಹ ದುರಂತವೇನು ಅಲ್ಲಿ ಸಂಭವಿಸಲಿದೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಮುಖ್ಯ ಕಾರಣ ಏನಂದ್ರೆ ಲಾಡ್ಲೆ ಮಾಶಾಖಾ ದರ್ಗಾ ಊರುಸ್ ಮತ್ತು ಅಲ್ಲೇ ಇರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಉಭಯ ಕೋಮಿನವರಿಗೆ ಷರತ್ತು ಬದ್ಧವಾಗಿ ಕೋರ್ಟ್ ಅನುಮತಿ ನೀಡಿರುವುದು.

ಸುಮಾರು ಹದಿನಾಲ್ಕನೇ ಶತಮಾನದಲ್ಲಿ ತನ್ನ ತತ್ತ್ವ ವಿಚಾರಗಳಿಂದ ಪ್ರಶಿದ್ಧಿ ಪಡೆದ ಲಾಡ್ಲೆ ಮಶಾಕ್‌ ಅವರ ದರ್ಗಾವು (Mashak Dargah)ಕಲಬುರ್ಗಿಯ ಆಳಂದ ಪಟ್ಟಣದಲ್ಲಿದೆ. ಇದೇ ದರ್ಗಾದ ಆವರಣದಲ್ಲಿ ಶಿವಾಜಿ ಮಹಾರಾಜರ ಗುರು ಸಮರ್ಥ ರಾಮದಾಸ ರಾಘವ ಚೈತನ್ಯರ ಸಮಾದಿಯಿದೆ. ಸಮಾದಿಯ ಮೇಲೆ ಶಿವಲಿಂಗವೂ ಇದೆ. ಹಿಂದಿನಿಂದಲೂ ದರ್ಗಾಕ್ಕೆ ಹೋಗುತ್ತಿದ್ದ ಹಿಂದೂಗಳು ರಾಘವ ಚೈತನ್ಯರ ಸಮಾದಿ ಮತ್ತು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಜೋಶಿ ಕುಟುಂಬವು ಪ್ರತಿನಿತ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿತ್ತು.

ಆದರೆ, ಕಳೆದ ವರ್ಷ ಅನ್ಯ ಧರ್ಮಕ್ಕೆ ಸೇರಿದ ಕೆಲವರು ಶಿವಲಿಂಗಕ್ಕೆ ಮಲಮೂತ್ರ ವಿಸರ್ಜನೆ ಮಾಡಿದ್ದರು ಎನ್ನಲಾಗಿದೆ. ಬಳಿಕ ಎರಡು ಧರ್ಮಗಳ ನಡುವೆ ಪ್ರತಿಭಟನೆ, ಹೋರಾಟ ನಡೆದಿದ್ದವು. ಹೀಗಾಗಿ ಕಳೆದ ವರ್ಷ ಹತ್ತು ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿತ್ತು. ಕಡಗಂಚಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮೆರವಣಿಗೆಗೆ ಹೋಗುತ್ತಿದ್ದವರ ಮೇಲೆ ಮುಸ್ಲಿಂ ಸಮುದಾಯವರು ಕಲ್ಲು ಎಸೆದಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡ್, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ 10 ಜನರ ಮೇಲೆ ಕಲ್ಲೆಸೆಯಾಗಿತ್ತು. ಪೊಲೀಸರು, ಮಾಧ್ಯಮದವರೂ ಗಾಯಗೊಂಡಿದ್ದರು.

ಈ ವೇಳೆ ಜಿಲ್ಲೆಯ ಆಳಂದ(Alanda) ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್‌ ದರ್ಗಾ ಉರುಸ್‌(Ladley Mashak Dargah Urus) ಹಾಗೂ ಅದೇ ದಿನ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅನುಮತಿ ನೀಡಿ ಕಲಬುರಗಿಯ ಕರ್ನಾಟಕ ವಕ್ಫ್ ಟ್ರಿಬ್ಯುನಲ್‌(Karnataka Waqf Tribunal Order) ತೀರ್ಪು ನೀಡಿತ್ತು. ಆದರೆ ಆದೇಶವನ್ನು ಪ್ರಶ್ನಿಸಿ ಲಾಡ್ಲೇ ಮಶಾಕ್‌ ದರ್ಗಾ ಕಮೀಟಿಯವರು ಕಲಬುರಗಿ ಹೈಕೋರ್ಟ್ ನಲ್ಲಿ ಸಿವಿಲ್‌ ರಿವಿಜನ್‌ ಪಿಟಿಷನ್‌ ದಾಖಲಿಸಿದ್ದರು. 39ಯ 192 ರೂಲ್‌ ಅಡಿಯಲ್ಲಿ ವಾದ ಮಂಡಿಸಿದ್ದ ಕಮೀಟಿಯವರು ಆಂದೋಲಾ ಸಿದ್ದಲಿಂಗ ಸ್ವಾಮೀಜಿ (Andola siddalinga swamiji)ಮತ್ತವರ ಹಿಂಬಾಲಕರ್ಯಾರೂ ಶಿವರಾತ್ರಿ ದಿನ ದರ್ಗಾ ಆವರಣ ಪ್ರವೇಶಿಸಬಾರದು, ಶಿವಲಿಂಗ ಪೂಜೆಗೂ ಅವಕಾಶ ನೀಡಬಾರದು ಎಂದು ವಾದ ಮಂಡಿಸಿದ್ದರು.

ಆದರೀಗ ಶಿವಲಿಂಗ ಪೂಜೆಗೆ ಅನುಮತಿ ನೀಡಿರುವ ಕಲಬುರಗಿಯ ಕರ್ನಾಟಕ ವಕ್ಫ್ ಟ್ರಿಬ್ಯುನಲ್‌ ತೀರ್ಪನ್ನು ಇಲ್ಲಿನ ಹೈಕೋರ್ಟ್ (Karnataka Highcourt) ಪೀಠ ಎತ್ತಿ ಹಿಡಿದಿದೆ. ಸದರಿ ಪ್ರಕರಣದಲ್ಲಿ ಇಬ್ಬರ ವಾದವನ್ನು ಸವಿಸ್ತಾರವಾಗಿ ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಂ. ಖಾಜಿ(Justic JM Khaji) ಯವರು ಕಲಬುರಗಿಯಲ್ಲಿರುವ ಕರ್ನಾಟಕ ವಕ್ಫ್ ಟ್ರಿಬ್ಯೂನಲ್‌ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದ್ದಾರೆ. ಜಿಲ್ಲಾಧಿಕಾರಿಗಳು ಪ್ರತಿವಾರದ ಸರದಿಯಂತೆ ಸಿಬ್ಬಂದಿಗೆ ನೇಮಕ ಮಾಡಿ ಇಲ್ಲಿನ ಬೆಳವಣಿಗೆ ಗಮನಿಸಬೇಕು ಹಾಗೂ ಶಿವರಾತ್ರಿ ಹಬ್ಬದ ದಿನವೇ ಉರೂಸ್‌ ಹಬ್ಬವೂ (Maha shivaratri and Urus Celebration) ಇರುವ ಕಾರಣ ಇಂದು ಬೆಳಗ್ಗೆ 8-12 ಗಂಟೆಯವರೆಗೆ ಮುಸ್ಲಿಮರಿಗೆ ಉರೂಸ್‌ ಹಬ್ಬಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿ ಇದೀಗ ಉರೂಸ್‌ ಹಬ್ಬ ನಡೆಯುತ್ತಿದೆ. ಅಪರಾಹ್ನ 2 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಲಾಗಿದೆ. ನಂತರ ಸಂಜೆ 6 ಗಂಟೆಯಾದ ಮೇಲೆ ದರ್ಗಾ ಹಾಗೂ ಶಿವಲಿಂಗ ಆವರಣದಲ್ಲಿ ಯಾರೊಬ್ಬರೂ ಇರಬಾರದು ಎಂಬ ಟ್ರಿಬುನಲ್‌ ಸೂಚನೆಗಳಿಗೆ ಸಡಿಲಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಳಂದ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಈ ದಿನ ಆಳಂದದಲ್ಲಿ ಶಿವರಾತ್ರಿ ಅಂಗವಾಗಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ 15 ಜನರ ಯಾದಿ ಸಿದ್ಧವಾಗಿದೆ. ಕಡಗಂಚಿ ವೀರಭದ್ರ ಶಿವಾಚಾರ್ಯ ರು, ಆಂದೋಲಾ ಸಿದ್ದಲಿಂಗ ಶ್ರೀಗಳು, ಕೇಂದ್ರ ಸಚಿವ ಭಗವಂತ ಖೂಬಾ(Bhagwanth Khuba), ಶಾಸಕರಾದ ಸುಭಾಷ ಗುತ್ತೇದಾರ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌(Rajkumar Patil Telkur), ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಸವರಾಜ ಮತ್ತಿಮಡು, ಅವಿನಾಶ ಜಾಧವ್‌, ಮಾಜಿ ಜಿಪಂ ಸದಸ್ಯ ಹ,ರ್ಷಾನಂದ ಗುತ್ತೇದಾರ್‌, ಕ್ರೆಡಲ್‌ ಅಧ್ಯಕ್ಷ ಚಂದ್ರಕಾಂತ ಬಿ ಪಾಟೀಲ್‌, ಆನಂದ ಪಾಟೀಲ್‌ ಕೋರಳ್ಳಿ, ನಾಗನಾಥ ಏಟೆ, ಮಹೇಶ ಗೌಳಿ, ಮಹೇಶ ಗೊಬ್ಬೂರ್‌, ಚೌಡಾಪುರದ ಮುರಾರಿ ಮಹಾರಾಜರು ಶಿವಲಿಂಗ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ ಕಳೆದ ವರ್ಷದ ಸಂಭವಿಸಿದ್ದ ಘರ್ಷಣೆಯ ಆತಂಕದಿಂದ ಇನ್ನೂ ಹೊರಬರದ ಅನೇಕ ಮುಸ್ಲಿಂ ಕುಟುಂಬಗಳು (Muslim Families) ಮನೆಗೆ ಬೀಗ ಹಾಕಿ ಬೇರೆಡೆ ತೆರಳಿವೆ. ಕಳೆದ ವರ್ಷ ಘರ್ಷಣೆ ಬಳಿಕ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಹೀಗಾಗಿ ಈ ವರ್ಷ ಭೀತಿಯಿಂದ ಅನೇಕ ಕುಟುಂಬಗಳು ಮನೆಗೆ ಬೀಗ ಹಾಕಿ ತೆರಳಿವೆ. ಈ ಮಧ್ಯೆ, ದರ್ಗಾದ ಸುತ್ತಮುತ್ತ ಪ್ರತಿಯೊಂದು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ತಪಾಸಣೆಯನ್ನೂ ಬಿಗಿಗೊಳಿಸಿದ್ದಾರೆ.

Leave A Reply

Your email address will not be published.