Tech Tips : ಕರೆಂಟ್ ಇಲ್ಲದೆಯೂ ನೀವು ಮೊಬೈಲ್ ಚಾರ್ಜ್ ಮಾಡಬಹುದು, ಪವರ್ ಬ್ಯಾಂಕ್ ಅಂದ್ಕೊಂಡ್ರಾ? ಅಲ್ಲ, ಇಲ್ಲಿದೆ ನೋಡಿ ಟ್ರಿಕ್ಸ್!

ಟೆಕ್ ದುನಿಯಾದಲ್ಲಿ ತಂತ್ರಜ್ಞಾನ (Technology) ಕ್ಷೇತ್ರವು ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಅನೇಕ ಸಾಧನಗಳೂ ನಮಗೆ ಉಪಯುಕ್ತವಾಗುವ ರೀತಿಯಲ್ಲಿ ಈಗಲೂ ಮಾರ್ಪಾಡು ಹೊಂದುತ್ತಲೇ ಇದೆ. ಇದೀಗ ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸ ಚಾರ್ಜರ್ ಒಂದು ಎಂಟ್ರಿಯಾಗಿದ್ದು ಇದಕ್ಕೆ ವಿದ್ಯುತ್ ನ ಅವಶ್ಯಕತೆ ಇಲ್ವೇ ಇಲ್ಲಂತೆ. ಸಾಮಾನ್ಯವಾಗಿ ಮೊಬೈಲ್ ಚಾರ್ಜ್(Mobile charge) ಆಗಬೇಕಂದ್ರೆ ವಿದ್ಯುತ್ ಬೇಕೆ ಬೇಕು. ವಿದ್ಯುತ್ (current) ಇಲ್ಲಂದ್ರೆ ಅಥವಾ ದೂರದ ಊರಿಗೆ ಪ್ರಯಾಣಿಸುವಾಗ ಪವರ್ ಬ್ಯಾಂಕ್ ಉಪಯೋಗ ಮಾಡ್ತೇವೆ. ಆದ್ರೆ, ಪವರ್ ಬ್ಯಾಂಕ್ (power bank) ಗೂ ವಿದ್ಯುತ್ ಅವಶ್ಯಕ. ಆದರೆ, ಈ ಚಾರ್ಜರ್ (charger) ವಿದ್ಯುತ್ ಉಪಯೋಗಿಸದೆ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತೇ!! ಹಾಗಾದ್ರೆ ಆ ಚಾರ್ಜರ್ ಯಾವುದು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.

ಈಗ ಸೌರ ಕಿರಣಗಳಿಂದ ಮೊಬೈಲ್ ಚಾರ್ಜಿಂಗ್ (Solar mobile charger) ಮಾಡುವಂತಹ ಹೊಸ ಟೆಕ್ನಾಲಜಿ ಬಂದಿದೆ. ಇನ್ಮುಂದೆ ಮೊಬೈಲ್ ಚಾರ್ಜ್ ಮಾಡಲು ಕೇವಲ ಸೂರ್ಯನ ಶಾಖ ಇದ್ದರೆ ಸಾಕು. ಈ ಸೋಲಾರ್ ಚಾರ್ಜರ್ ಮೂಲಕ ಮೊಬೈಲ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಹೀಗಾಗಿ ಇನ್ಮುಂದೆ ಕರೆಂಟ್ ಹೋಗಿದೆ, ಫೋನ್ ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂಬ ಆತಂಕ ಬೇಡ. ಜೊತೆಗೆ ಈ ಚಾರ್ಜರ್‌ಗಳನ್ನು ಕೂಡ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವುದು ತುಂಬಾ ಸುಲಭ. ಮುಖ್ಯವಾಗಿ ವಿದ್ಯುತ್ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರಲಿದೆ.

ಸೌರ ಚಾರ್ಜರ್ ಅನ್ನು ಬಿಸಿಲಿನಲ್ಲಿ ಇರಿಸಿ ನಿಮ್ಮ ಫೋನ್ ಅನ್ನು ಅದರ ಕೇಬಲ್‌ಗೆ ಸಂಪರ್ಕಿಸಿದರೆ ಸಾಕು ಚಾರ್ಜ್ ಆಗಲು ಆರಂಭವಾಗುತ್ತೆ. ಆಗುತ್ತದೆ. ಸೌರ ಮೊಬೈಲ್ ಚಾರ್ಜರ್​ನಿಂದ ಕೆಲವೇ ಘಳಿಗೆಯಲ್ಲಿ ನಿಮ್ಮ ಫೋನ್ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಸೋಲಾರ್ ಮೊಬೈಲ್ ಚಾರ್ಜರ್ ಸಹಾಯದಿಂದ ಮೊಬೈಲ್ ಅನ್ನು ವಿದ್ಯುತ್ ಚಿಂತೆಯಿಲ್ಲದೆ ಆರಾಮವಾಗಿ, ಉಚಿತವಾಗಿ ಚಾರ್ಜ್ ಮಾಡಬಹುದು. ಇದಕ್ಕೆ ಯಾವುದೇ ವಿದ್ಯುತ್, ಜನರೇಟರ್, ಇನ್ವರ್ಟರ್ ಅಗತ್ಯವಿಲ್ಲ. ಅಲ್ಲದೆ ವಿದ್ಯುತ್ ಬಿಲ್ ಕೂಡ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲಾ, ವಿದ್ಯುತ್ ಉಳಿತಾಯದ ಜೊತೆಗೆ ಇದು ಪರಿಸರ ಸ್ನೇಹಿಯು ಹೌದು.

ಸೌರ ಮೊಬೈಲ್ ಚಾರ್ಜರ್‌ಗಳು ಎಲೆಕ್ಟ್ರಿಕ್ ಚಾರ್ಜರ್‌ (Electric charger) ಗಳಿಗಿಂತ ಹೆಚ್ಚು ಅಗ್ಗದ ಬೆಲೆಗೆ ಲಭ್ಯವಿದೆ. ಸೋಲಾರ್ ಮೊಬೈಲ್ ಚಾರ್ಜರ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ತಮ್ಮ ಹವಾ ಸೃಷ್ಟಿಸಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್‌ ಸ್ಟೋರ್​ಗಳಲ್ಲಿ ಭರ್ಜರಿ ಸೇಲ್ ಕಾಣುತ್ತಿದೆ. ಆನ್ಲೈನ್ ನಲ್ಲಿ ಖರೀದಿಸಲು ಬಯಸುವವರು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಖರೀದಿಸಬಹುದಾಗಿದ್ದು, ಈ ಚಾರ್ಜರ್ ಕೇವಲ 330 ರೂ. ಇಂದ ಪ್ರಾರಂಭವಾಗುತ್ತದೆ. ಈ ಚಾರ್ಜರ್ ಅನ್ನು ಆಫ್‌ಲೈನ್‌ನಲ್ಲಿಯೂ ಖರೀದಿಸುವುದಾದರೆ, ಅನೇಕ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ESPtronics ಸೋಲಾರ್ ಪ್ಯಾನೆಲ್ ಮೊಬೈಲ್ ಚಾರ್ಜರ್ ಅತ್ತುತ್ತಮ ಪ್ರೊಡಕ್ಟ್ ಆಗಿದ್ದು, ಇದು ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಅವಶ್ಯಕವಾದ ಎಲ್ಲ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಈ ESPTronics ಸೋಲಾರ್ ಪ್ಯಾನೆಲ್​ನಲ್ಲಿ DC ಮೋಟಾರ್‌ಗಳು, ಮೈಕ್ರೋ USB ಕನೆಕ್ಟರ್, ಕ್ರೊಕೊಡೈಲ್ ಕ್ಲಿಪ್ಸ್, ಫ್ಯಾನ್, LED ಲೈಟ್​ಗಳು ಇದರಲ್ಲಿದೆ. ಈ ಚಾರ್ಜರ್ ಕೇವಲ 463 ರೂ. ಗೆ ಲಭ್ಯವಿದೆ.

Leave A Reply

Your email address will not be published.