Viral News: ಈ ಊರಿನಲ್ಲಿ ಸೊಳ್ಳೆ ಹುಡುಕಿ ಕೊಟ್ಟರೆ ನಿಮಗೆ ಕೈ ತುಂಬಾ ದುಡ್ಡು ಕೊಡ್ತಾರೆ! ಯಾಕೆ ಗೊತ್ತಾ?

Viral news: if you find out mosquito in the village of Maharashtra then you can grab huge amount

Viral News: ಸಂಜೆಯಾಗುತ್ತಿದ್ದಂತೆ ತನ್ನ ಅಸ್ತಿತ್ವವನ್ನು ಖಾತ್ರಿ ಪಡಿಸಲು ಶಬ್ದ ಮಾಡುತ್ತಾ ಗೊಯ್ ಎಂದು ರಾತ್ರಿ ಮಲಗುವಾಗ ನಿಮ್ಮ ನಿದ್ರಾಭಂಗಕ್ಕೆ ಕಾರಣವಾದ ಸೊಳ್ಳೆ ಕಂಡರೆ ಸಾಯಿಸಿಬಿಡಬೇಕು ಅನ್ನುವಷ್ಟು ಕೋಪ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತೆ. ಈ ಸೊಳ್ಳೆಯಿಂದ ಆಗೋ ಅವಾಂತರಗಳು ಅಷ್ಟಿಷ್ಟಲ್ಲ. ಅಷ್ಟೇ ಏಕೆ ಸದ್ದಿಲ್ಲದೆ ಕಚ್ಚಿ ಹೋಗಿ, ಅದೆಷ್ಟೋ ರೋಗಗಳಿಗೆ ಎಡೆ ಮಾಡಿಕೊಡೋದು ಕೂಡ ಇದೆ ಸೊಳ್ಳೆ. ಆದರೆ, ಈ ಸೊಳ್ಳೆಗೂ ಕೂಡ ಏನು ಡಿಮ್ಯಾಂಡ್ ಅಂತೀರಾ??

ನಿಮಗೆ ಕೇಳಿದಾಗ ಅಚ್ಚರಿ( Viral News) ಎನಿಸಿದರೂ ನಿಜ!! ಈ ಜನರು ಸೊಳ್ಳೆ ಹುಡುಕಿ ಕೊಟ್ಟರೆ ದುಡ್ಡು ಕೊಡ್ತಾರಂತೆ. ಅರೇ, ಈ ಆಫರ್ ಎಲ್ಲಿಂತ ಹೇಳಿ?? ನಾವು ರೆಡಿ ಅಂತ ಹೆಚ್ಚಿನವರು ಮನಸಲ್ಲಿ ಅಂದುಕೊಂಡಿರುತ್ತಿರಾ ಅಲ್ವಾ!!

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ (village of Maharastra)ಈ ಹೊಸ ಯೋಜನೆ ಶುರುವಾಗಿದೆ. ಇಲ್ಲಿಯ ಜನರು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಕಾಗಿ ಹೋಗಿದ್ದಾರಂತೆ. ಹೀಗಾಗಿ, ಗ್ರಾಮಸ್ಥರು ಬಂಪರ್ ಆಫರ್ ನೀಡಿದ್ದು, ಒಂದು ವೇಳೆ ಯಾರಾದರೂ ಸೊಳ್ಳೆ ಹುಡುಕಿ ಕೊಟ್ಟರೆ ಅವರಿಗೆ ಹಣ ಕೊಡಲು ರೆಡಿಯಾಗಿದ್ದಾರೆ.

ಮಹಾರಾಷ್ಟ್ರದ ಹಳ್ಳಿಯಾದ ( Maharashtra) ಹಿವ್ರೆ ಬಜಾರ್ (hiware bazar) ನಲ್ಲಿ ವಾಸಿಸುವ ಹಳ್ಳಿಯ ಕಹಾನಿ ಕೇಳಿದರೆ, ಅರೇ, ಹೀಗೂ ಉಂಟೇ ಎಂದೆನಿಸಿದರೂ ಅಚ್ಚರಿಯಿಲ್ಲ. ಈ ಗ್ರಾಮದಲ್ಲಿ ಬರೋಬ್ಬರಿ 305 ಕುಟುಂಬಗಳು ನೆಲೆಸಿದ್ದಾರಂತೆ. ಒಂದು ಹಳ್ಳಿ ಎಂದರೆ ಎಷ್ಟು ಜನ ಶ್ರೀಮಂತರಿರಬಹುದು?? ಊಹಿಸಿ ನೋಡೋಣ!!!ಅಬ್ಬಬ್ಬಾ ಅಂದರೆ , 10 ಇಲ್ಲವೇ 20 ಎಂದು ನೀವು ಊಹಿಸಿರ ಬಹುದು. ಆದರೆ, ಈ ಹಳ್ಳಿಯಲ್ಲಿ 80 ಜನರು ಕೋಟ್ಯಾಧಿಪತಿ (Billionaires) ಇದ್ದಾರಂತೆ. ಅಷ್ಟೆ ಅಲ್ಲದೇ, ಇಲ್ಲಿ ವಾಸಿಸುವ ಜನರಿಗೆ ವಿದ್ಯುತ್​, ನೀರು ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ಮಿಲಿಯನೇರ್​ಗಳು ವಾಸಿಸುವ ಈ ಗ್ರಾಮದಲ್ಲಿ ಒಂದೇ ಒಂದು ಸೊಳ್ಳೆ ಇಲ್ಲ ಕೂಡ ಕಾಣಲು ಸಿಗೋದಿಲ್ಲವಂತೆ. ಕೇಳಲು ಅಚ್ಚರಿ ಎನಿಸಿದರೂ ನಿಜ ಕಣ್ರೀ!! ಹೀಗಾಗಿ, ಇಲ್ಲಿನ ಜನರು ಯಾರಾದರೂ ಒಂದು ಸೊಳ್ಳೆಯನ್ನು ತೋರಿಸಿದರು ಕೂಡ ಅವರಿಗೆ 400 ರೂಪಾಯಿಗಳನ್ನು ಬಹುಮಾನವಾಗಿ ನೀಡುವ ಆಫರ್ ನೀಡಿದ್ದಾರೆ. ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಸೊಳ್ಳೆ ಹುಡುಕಿ ಕೊಟ್ರೆ ನಿಮಗೂ ಸುಲಭವಾಗಿ 400 ರೂಪಾಯಿ ಬಹುಮಾನ ಗೆಲ್ಲಬಹುದು. ಆದರೆ, ಇದಕ್ಕಾಗಿ ನೀವು ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತೆ!! ನೋಡಿ ನೀವು ರೆಡಿ ಇದ್ದರೆ, ಒಂದು ಚಾನ್ಸ್ ಟ್ರೈ ಮಾಡಿ!

80- 90 ರ ದಶಕದಲ್ಲಿ, ಇಲ್ಲಿನ ಜನರು ತೀವ್ರ ಬರಗಾಲದಿಂದ(drought) ಕಂಗಾಲಾಗಿದ್ದರಂತೆ. ಹೀಗಾಗಿ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಲಸೆ ಹೋಗಬೇಕಾಗಿ ಬಂದಿದೆ.90ರ ದಶಕದ ಸುಮಾರಿಗೆ ಜಂಟಿ ಅರಣ್ಯ ನಿರ್ವಹಣಾ ಸಮಿತಿ’ ರಚನೆಯಾದ ಬಳಿಕ, ಈ ಸ್ಥಳದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಈ ಹಳ್ಳಿಯ ಜನರ ಸಮಸ್ಯೆಗಳನ್ನು ಕಂಡು, ಅವರ ಏಳಿಗೆಗಾಗಿ, ಇಲ್ಲಿನ ರಾಜ್ಯ ಸರ್ಕಾರವು ಹಣವನ್ನು ನೀಡಿದ್ದು, ಈ ಗ್ರಾಮದಲ್ಲಿ ಸುಮಾರು 340 ಬಾವಿಗಳನ್ನು ಜನರೇ ನಿರ್ಮಿಸಿದ್ದಾರಂತೆ. ಇಲ್ಲಿನ ಕೋಟ್ಯಾಧಿಪತಿಗಳ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತಲೂ ಕೂಡ ಜಾಸ್ತಿ ಇದೆ ಅನ್ನೋದು ಅಲ್ಲಿನವರ ಲೆಕ್ಕಾಚಾರ. ಗ್ರಾಮದಲ್ಲಿ 3 ಕುಟುಂಬಗಳ ಆದಾಯವು 10 ಸಾವಿರಕ್ಕಿಂತ ಕಡಿಮೆಯಿದೆಯಂತೆ. ಏನೇ ಹೇಳಿ, ಸೊಳ್ಳೆ ಕಂಡರೆ ದುಡ್ಡು ಕೊಡೋ ವಿಶೇಷ ಊರು ಇದೆ ಇರಬಹುದೇನೋ?

ಇದನ್ನೂ ಓದಿ: Mosquitoes: ಈ ಊರಿಗೆ ಬಂದರೆ ಖಂಡಿತಾ ನಿಮಗೆ ಸೊಳ್ಳೆಗಳು ಕಚ್ಚುವುದೇ ಇಲ್ಲ | ಡೆಂಗ್ಯೂ, ಮಲೇರಿಯಾ ಹಾಗೆಂದರೇನು ಎಂದೇ ಇಲ್ಲಿನ ಜನರಿಗೆ ತಿಳಿದೇ ಇಲ್ಲ

Comments are closed.