Upcoming cng cars in india: ತೀರಾ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ ಮೂರು ಮಾರುತಿ ಕಾರು! ಸಿಎನ್ ಜಿ ರೂಪಾಂತರದಲ್ಲಿ, ಅತೀ ಕಡಿಮೆ ಬೆಲೆಯಲ್ಲಿ ಕೂಡಾ!

ಪೆಟ್ರೋಲ್ (petrol), ಡೀಸೆಲ್(Diesel) ಗಳ ಬೆಲೆ ಕೇಳಿದರೇನೆ ತಲೆ ತಿರುಗುವಂತಾಗುತ್ತೆ. ಈ ಟೈಮ್’ನಲ್ಲಿ ಜನರು ವಾಹನಗಳ ಖರೀದಿಯನ್ನು ಮಾಡಲು ಸ್ವಲ್ಪ ಹಿಂದೆ ಮುಂದೆ ನೋಡುತ್ತಾರೆ. ಗಗನಕ್ಕೇರಿರುವ ಈ ಇಂಧನಗಳ ಬೆಲೆಯಿಂದ ಮುಕ್ತಿ ಕೊಡಲೆಂದು ವಾಹನ ತಯಾರಕರು ಎಲೆಕ್ಟ್ರಿಕ್ (electric) ಮಾದರಿ ಕಾರನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಇದು ಕೈಗೆಟಕುವ ಬೆಳೆಯಲ್ಲಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ CNG ಕಾರುಗಳತ್ತ ಖರೀದಿದಾರರು ಮುಖ ಮಾಡಿದ್ದಾರೆ. ಇದೀಗ CNG ಆಯ್ಕೆಯೊಂದಿಗೆ ಕೈಗೆಟುಕುವ ದರದಲ್ಲಿ ಮೂರು SUVಗಳು ಭಾರತೀಯ ಮಾರುಕಟ್ಟೆಯತ್ತ ಲಗ್ಗೆಯಿಟ್ಟಿದೆ. ಹಾಗಾದ್ರೆ ಬನ್ನಿ ಅವುಗಳ ಬೆಲೆ, ಲಭ್ಯತೆ, ಫೀಚರ್’ಗಳ ಮಾಹಿತಿಯನ್ನು ನೋಡೋಣ ಬನ್ನಿ.

ಮಾರುತಿ ಫ್ರಾಂಕ್ಸ್ ಸಿಎನ್‌ಜಿ (Maruti FRONX CNG) : ಮಾರುತಿ ಸುಜುಕಿ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಇದು CNG ಆವೃತ್ತಿಯಲ್ಲಿಯೂ ಬರಲಿದೆ. ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿರುವ ನಾಲ್ಕನೇ ನೆಕ್ಸಾ ಕಾರು ಇದಾಗಿರಲಿದೆ. ಫ್ರಾಂಕ್ಸ್ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಕಾರು ಪೆಟ್ರೋಲ್ ಮೋಡ್‌ನಲ್ಲಿ 90 ಎಚ್‌ಪಿ ಮತ್ತು 113 ಎನ್‌ಎಂ ಮತ್ತು ಸಿಎನ್‌ಜಿ ಮೋಡ್‌ನಲ್ಲಿ 77 ಎಚ್‌ಪಿ ಮತ್ತು 98.5 ಎನ್‌ಎಂ ಅನ್ನು ಡೆವೆಲಪ್ ಮಾಡಲಿದೆ. ಇದನ್ನು ಐದು- ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಜೋಡಿಸಬಹುದು. ಇದರ ಬೆಲೆಯು ಪೆಟ್ರೋಲ್ ಮಾದರಿಗಿಂತ ಸುಮಾರು 1 ಲಕ್ಷ ರೂ. ಹೆಚ್ಚಳವಿದೆಂದು ಎನ್ನಲಾಗಿದೆ.

ಮಾರುತಿ ಸುಜುಕಿ ಬ್ರೆಝಾ CNG( Maruti Suzuki Brezza CNG) : ಭಾರತದ ದೈತ್ಯ ಕಾರು ತಯಾರಕ ಕಂಪನಿಯಾಗಿರುವ ಮಾರುತಿಯು ಬಿಡುಗಡೆ ಮಾಡಿರುವ ಮಾರುತಿ ಬ್ರೆಝಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿ ಸುಜುಕಿಯ ಬ್ರೆಝಾ ಶೀಘ್ರದಲ್ಲೇ CNG ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. ಇದನ್ನು 2023 ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ್ದಾರೆ. ಇದರ ಫೀಚರ್ ನೋಡುವುದಾದರೆ 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಮಾತ್ರ ಲಭ್ಯವಿರುತ್ತದೆ.

ಟಾಟಾ ಪಂಚ್ ಸಿಎನ್‌ಜಿ(Tata Punch CNG): ಭಾರತದ ಜನಪ್ರಿಯ ಕಾರು ಕಂಪನಿಯಾದ ಟಾಟಾ ಪರಿಚಯಿಸಿರುವ ಟಾಟಾ ಪಂಚ್ ಸಿಎನ್‌ಜಿಯನ್ನು ಕಳೆದ ತಿಂಗಳು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ. ಪಂಚ್ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಕಾರಿನ ಇನ್ನೊಂದು ಬಹು ದೊಡ್ಡ ವೈಶಿಷ್ಟ್ಯವೆಂದರೆ, ಟ್ವಿನ್ ಸಿಲಿಂಡರ್ ತಂತ್ರಜ್ಞಾನವನ್ನು ಇದರಲ್ಲಿ ನೀಡಿದ್ದಾರೆ. ಇದರಲ್ಲಿ, 60 ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

Leave A Reply

Your email address will not be published.