honeymoon destinations in India: ಕಡಿಮೆ ವೆಚ್ಚದಲ್ಲಿ ಹನಿಮೂನ್‌ ; ಭಾರತದಲ್ಲಿದೆ ನೋಡಿ ಈ ಬೆಸ್ಟ್‌ ಸ್ಥಳಗಳು!

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ನವಜೋಡಿಗಳು ಹನಿಮೂನ್ ಹೋಗೋದು ಇತ್ತೀಚಿಗೆ ಹೆಚ್ಚಾಗಿ ಕಾಣಬಹುದು. ಅದರಲ್ಲೂ ವಿದೇಶಕ್ಕೆ ಹನಿಮೂನ್ ಸಮಯ ಕಳೆಯಲು ಹೆಚ್ಚಾಗಿ ಬಯಸುತ್ತಾರೆ. ಯಾವುದೇ ಜೋಡಿ (Couple) ಇರಲಿ ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life) ಪರ್ಯಂತ ನೆನಪಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಸ್ಥಳದ ಆಯ್ಕೆ (Honeymoon Place Selection) ಸೇರಿದಂತೆ ಹಲವು ಪ್ಲಾನ್ ಗಳನ್ನು ಮಾಡಿಕೊಂಡಿರುತ್ತಾರೆ. ಹನಿಮೂನ್ ನಲ್ಲಿ ಕಳೆಯುವ ಪ್ರತಿ ಕ್ಷಣವೂ ರೊಮ್ಯಾಂಟಿಕ್ (Romantic) ಆಗಿರಬೇಕು ಅಂತೆಲ್ಲ ಕನಸು ಕಾಣುತ್ತಾರೆ.ಆದರೆ ಹಣದ ಕೊರತೆಯಿಂದ ಅನೇಕರಿಗೆ ವಿದೇಶಿ ಹನಿಮೂನ್ ಪ್ರವಾಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ಕೆಲವು ಸ್ಥಳಗಳ ಬಗ್ಗೆ ತಿಳಿಸಲಾಗಿದೆ. ಅಲ್ಲಿ ನಿಮ್ಮ ಹನಿಮೂನ್ ಕಡಿಮೆ ವೆಚ್ಚದಲ್ಲಿ ಬಹಳ ರೊಮ್ಯಾಂಟಿಕ್ ಮತ್ತು ಪ್ರತಿಕ್ಷಣ ಆನಂದಿಸಬಹುದಾಗಿದೆ.

ಕಡಿಮೆ ವೆಚ್ಚದಲ್ಲಿ, ಸುಂದರವಾದ ಅನೇಕ ಸ್ಥಳಗಳು ಭಾರತದಲ್ಲಿವೆ:

• ಹನಿಮೂನ್‍ಗೆ ಮತ್ತೊಂದು ಸುಂದರವಾದ ತಾಣವೆಂದರೆ ಅದು ಕೇರಳದ ಮುನ್ನಾರ್. ಇಲ್ಲಿ ಸುಂದರವಾದ ಕಾಫಿ ತೋಟಗಳು, ಪರ್ವತಗಳು ಮತ್ತು ಸರೋವರಗಳು ಮನಸ್ಸಿಗೆ ಮುದ ನೀಡುತ್ತದೆ. ಕೇರಳದ ಮೋಡಿ ನಿಮಗೆ ಮತ್ತಷ್ಟು ಸಂತೋಷವನ್ನು ಉಂಟು ಮಾಡುತ್ತದೆ. ಇಲ್ಲಿ ದೋಣಿಯ ಮೂಲಕ ತೆರಳುವ ಸುಖವನ್ನು ಅನುಭವಿಸಬಹುದು. ಮುನ್ನಾರ್ ಮೂರು ಪರ್ವತದ ತೊರೆಗಳಾದ ಮುದುಪುಳ, ನಲ್ಲತನ್ನಿ ಮತ್ತು ಕೂಡಲ ಸಂಗಮ. ಇಲ್ಲಿ ಒಂದು ಸುಂದರವಾದ ಅರಣ್ಯ ಪ್ರದೇಶವಿದೆ. ಇಲ್ಲಿ ಮಟ್ಟುಪೆಟ್ಟಿ ಡ್ಯಾಮ್, ಕುಂದಲ ಸರೋವರ, ಟಾಪ್ ಸ್ಟೇಷನ್, ಏಕೋ ಪಾಯಿಂಟ್, ರಾಜಾ ಮಾಲಯಿ, ಟೀ ಮ್ಯೂಸಿಯಂ, ಇನ್ನೂ ಹಲವಾರು ಸುಂದರವಾದ ಪ್ರದೇಶಗಳಿಗೆ ನಿಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬಹುದಾಗಿದೆ.

• ನೀವು ನೋಯ್ಡಾದ ಬಳಿ ವಾಸಿಸುತ್ತಿದ್ದರೆ, ಮಶೋಬ್ರಾ ನಿಮಗೆ ಉತ್ತಮ ಸ್ಥಳವೆಂದು ಸಾಬೀತುಪಡಿಸಬಹುದು. ಇಲ್ಲಿ ನೀವು ರಾಯಲ್ ಬೆಂಗಾಲ್ ಟೈಗರ್ ಸೇರಿದಂತೆ ಅನೇಕ ಸುಂದರ ಜೀವಿಗಳನ್ನು ನೋಡಬಹುದು. ಮಶೋಬ್ರಾದ ನೋಟಗಳು ತುಂಬಾ ಸುಂದರವಾಗಿರುತ್ತವೆ.

• ಖಜ್ಜಿಯಾರ್ ಡಾಲ್ಹೌಸಿ ಹಿಲ್ಸ್ ನಿಲ್ದಾಣದ ಮುಂಭಾಗದಲ್ಲಿರುವ ಅತ್ಯಂತ ಸುಂದರವಾದ ಸ್ಥಳವಾಗಿದೆ. ಇದನ್ನು ಭಾರತದ ಸ್ವಿಟ್ಜರ್ಲೆಂಡ್ ಎಂದೂ ಕರೆಯುತ್ತಾರೆ. ಇಲ್ಲಿ ಹಣ ಉಳಿತಾಯದ ಜೊತೆಗೆ, ಪ್ರತಿ ಕ್ಷಣವನ್ನು ಜೋಡಿಗಳು ಖುಷಿಯಾಗಿ ಕಳೆಯಬಹುದು.

• ಹನಿಮೂನ್ ತಾಣಗಳಿಗಾಗಿ ನೀವು ಮೋರ್ನಿ ಹಿಲ್ಸ್ ಅನ್ನು ಆಯ್ಕೆ ಮಾಡಬಹುದು. ಹರಿಯಾಣದಲ್ಲಿರುವ ಮೋರ್ನಿ ಹಿಲ್ಸ್ ತುಂಬಾ ಸುಂದರವಾದ ಸ್ಥಳವಾಗಿದೆ. ಅಲ್ಲಿ ನೀವು ವರ್ಣರಂಜಿತ ಪಕ್ಷಿಗಳನ್ನು ಮಾತ್ರವಲ್ಲದೆ ಸುಂದರವಾದ ಪ್ರಕೃತಿಯನ್ನೂ ನೋಡಬಹುದು. ಮೋರ್ನಿ ಹಿಲ್ಸ್ ದೆಹಲಿಯಿಂದ ಸುಮಾರು 220 ಕಿಲೋಮೀಟರ್ ದೂರದಲ್ಲಿದೆ. ನೋಯ್ಡಾದ ಜನರಿಗೆ, ಈ ಸ್ಥಳವು ಮಧುಚಂದ್ರಕ್ಕೆ ಅತ್ಯುತ್ತಮ ಮತ್ತು ಅಗ್ಗದ ಸ್ಥಳವಾಗಿದೆ.

• ಆಂಧ್ರ ಪ್ರದೇಶ ನಮ್ಮ ಕರ್ನಾಟಕಕ್ಕೆ ಹತ್ತಿರವಾಗಿರುವ ರಾಜ್ಯ. ಇಲ್ಲಿಯೂ ಕೂಡ ಅತ್ಯಂತ ಸುಂದರವಾದ ರೋಮ್ಯಾಂಟಿಕ್ ವಾತಾವರಣವಿದೆ. ವಿಶಾಖ ಪಟ್ಟಣವನ್ನು ವೈಜಾಗ್ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ. ವಿಶಾಖ ಪಟ್ಟಣವು ಆಂಧ್ರ ಪ್ರದೇಶದ ಅತಿ ದೊಡ್ಡ ರಾಜ್ಯವಾಗಿದೆ. ವೈಜಾಗ್‍ನಲ್ಲಿ ಒಂದು ಸುಂದರವಾದ ಪಟ್ಟಣವಾಗಿದ್ದು, ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಇಲ್ಲಿ ಕೂಡ ಅತ್ಯಂತ ಸುಂದರವಾದ ಬೀಚ್‍ಗಳನ್ನು ಹೊಂದಿದೆ. ಇಲ್ಲಿ ಹಲವಾರು ದೇಶ ವಿದೇಶಗಳಿಂದಲೂ ಕೂಡ ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮವಾದ ಸ್ಥಳಗಳಲ್ಲಿ ಇದೂ ಕೂಡ ಒಂದು.

ಈ ಎಲ್ಲಾ ಸ್ಥಳಗಳು ಭಾರತದಲ್ಲಿನ ಅತ್ಯುತ್ತಮ ಹನಿಮೂನ್ ತಾಣಗಳಾಗಿದೆ ಇದು ಮದುವೆಯ ನಂತರ ನಿಮ್ಮ ಚಿಕ್ಕ ಸಮಯವನ್ನು ಸಾಧ್ಯವಾದಷ್ಟು ಸ್ಮರಣೀಯವಾಗಿಸುತ್ತದೆ.

Leave A Reply

Your email address will not be published.