ಎಂದಿಗೂ ಮಾಡದಿರಿ ಈ ತಪ್ಪು | ನಿಮ್ಮ ಸಮಸ್ಯೆಗಳನ್ನು ದೂರ ಮಾಡಲು ಪಾಲಿಸಿ ವಾಸ್ತು ಶಾಸ್ತ್ರದ ಟಿಪ್ಸ್

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು ಮಾಡುವುದೇ ಅಶುಭದ ಸಂಕೇತವಾಗಿದೆ.

ಹೌದು. ಹಿರಿಯರ ಪ್ರಕಾರ ಅಶುಭ ಎಂದೆನಿಸುವ ಕೆಲಸಗಳನ್ನು ಮಾಡಲೇಬಾರದು. ಆದ್ರೆ, ಇಂದಿನ ಕಾಲದಲ್ಲಿ ಕೆಲವೊಂದಷ್ಟು ಜನ ಮಾತ್ರ ಈ ನಂಬಿಕೆಗಳನ್ನು ನಂಬುತ್ತಾರೆ. ಇನ್ನೂ ಉಳಿದ ಜನ ಇದೆಲ್ಲ ಮೂಢನಂಬಿಕೆ ಎಂದು ತಮಗಿಷ್ಟ ಬಂದಂತೆ ಸಮಯವನ್ನು ನೋಡದೆ ಕೆಲಸಗಳನ್ನು ಮುಂದುವರಿಸುತ್ತಾರೆ.

ವಾಸ್ತು ಪ್ರಕಾರ ನೋಡುವುದಾದರೆ ಹಲವು ಕೆಲಸಗಳನ್ನು ಕೆಲವು ಸಮಯಗಳಲ್ಲಿ ಮಾಡಲೇಬಾರದು. ಅಂತಹ ಕಾರ್ಯಗಳಲ್ಲಿ ತೊಡಗಿಕೊಂಡ್ರೆ ನಿಮ್ಮ ಜೀವನ ಒಳ್ಳೆಯ ರೀತಿಲಿ ಸಾಗದೆ ಇರಬಹುದು. ಹಾಗಾಗಿ ಕೆಲವೊಂದು ಪಾಲಿಸಿದರೆ ನೀವು ಉತ್ತಮ ಆರೋಗ್ಯದ ಜೊತೆಗೆ ಒಳ್ಳೆಯ ಜೀವನ ಪಡೆಯಲು ಸಾಧ್ಯ. ಹಾಗಿದ್ರೆ ಬನ್ನಿ ಆ ಟಿಪ್ಸ್ ಗಳನ್ನು ತಿಳಿದುಕೊಳ್ಳೋಣ ಬನ್ನಿ.

*ಮನೆಯ ಈಶಾನ್ಯ ಮೂಲೆಯಲ್ಲಿ ಅಪ್ಪಿ ತಪ್ಪಿಯೂ ಶೌಚಾಲಯಗಳು ಅಥವಾ ಮೆಟ್ಟಿಲುಗಳನ್ನು ನಿರ್ಮಿಸಬೇಡಿ. ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ನೀವು ಶೌಚಾಲಯ ಹೊಂದಿದ್ದರೆ, ಈ ಕಾರಣದಿಂದಾಗಿ, ನೀವು ಕಳಪೆ ಆರೋಗ್ಯ ಮತ್ತು ಹಣದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

*ಅಧ್ಯಯನ ಮಾಡುವಾಗ ಅಥವಾ ಕೆಲಸ ಮಾಡುವಾಗ ಉದ್ವೇಗದಿಂದ ಮುಕ್ತವಾಗಿರಲು, ನಿಮ್ಮ ಮುಖವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹೆಚ್ಚು ಏಕಾಗ್ರತೆಯಿಂದ ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಸಾಧ್ಯವಾಗುತ್ತೆ.

*ಅನಗತ್ಯ ಚಿಂತೆಗಳು ಮತ್ತು ತೊಂದರೆಗಳನ್ನು ಕುಟುಂಬದಿಂದ ದೂರವಿರಿಸಲು ಮನೆಯ ತೋಟದಲ್ಲಿ ಸಣ್ಣ ತುಳಸಿ ಗಿಡವನ್ನು ನೆಡಿ. ಒಳಾಂಗಣ ಸಸ್ಯಗಳನ್ನು ನೆಡುವ ಮೂಲಕ, ಮನೆ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

*ಮನೆಯ ಈಶಾನ್ಯ ದಿಕ್ಕಿನಲ್ಲಿ ಮೇಣದ ಬತ್ತಿ ಅಥವಾ ದೀಪವನ್ನು ಯಾವಾಗಲೂ ಹಚ್ಚಿ ಇಡಬೇಕು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಸದಾ ಉಳಿಯುತ್ತದೆ.

*ಮಲಗುವಾಗ, ನೀವು ಯಾವಾಗಲೂ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದು ವಿಶ್ರಾಂತಿಯೊಂದಿಗೆ ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತೆ.

*ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಮತ್ತು ಸ್ನಾನಗೃಹದ ಗೋಡೆಗಳು ಪರಸ್ಪರ ಪಕ್ಕದಲ್ಲಿರಬಾರದು. ಇದರಿಂದ ನೆಗೆಟಿವಿಟಿ ಹೆಚ್ಚುತ್ತೆ. ನೈಋತ್ಯ ಮೂಲೆ ಅಡುಗೆಮನೆಯನ್ನು ತಯಾರಿಸಲು ಉತ್ತಮವಾಗಿರುತ್ತದೆ. ಒಲೆ ಪೂರ್ವ ದಿಕ್ಕಿನಲ್ಲಿರಬೇಕು. ಇಲ್ಲಿ ಆಹಾರ ತಯಾರಿಸಿ ತಿಂದರೆ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.

Leave A Reply

Your email address will not be published.