Home News iQOO Neo 7: ಟೆಕ್‌ ಪ್ರಿಯರ ನಿದ್ದೆಗೆಡಿಸಲಿದೆ ಐಕ್ಯೂ ನಿಯೋ 7, ಈ ಪೋನಿನ ಬೆಲೆ...

iQOO Neo 7: ಟೆಕ್‌ ಪ್ರಿಯರ ನಿದ್ದೆಗೆಡಿಸಲಿದೆ ಐಕ್ಯೂ ನಿಯೋ 7, ಈ ಪೋನಿನ ಬೆಲೆ ಎಷ್ಟು? ಫೀಚರ್ಸ್‌ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಐಕ್ಯೂ (iQOO) ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ (Smartphone) ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ವಿವೋ ಒಡೆತನದ ಐಕ್ಯೂ ಕಂಪನಿ ಭಾರತದ ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಹೊಸ ಫೋನ್​ನೊಂದಿಗೆ ಮತ್ತೆ ಬಂದಿದೆ. ಕಳೆದ ವರ್ಷ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಲಾಂಚ್ ಮಾಡಿ ಹವಾ ಸೃಷ್ಟಿಸೀದ ಕಂಪನಿ ಇದೀಗ ಇದರ ಮುಂದುವರಿದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ರಿಲೀಸ್ ಮಾಡಲು ತಯಾರಾಗಿ ನಿಂತಿದೆ. ತನ್ನ ಫಾಸ್ಟ್ ಚಾರ್ಜರ್​ನಿಂದ ಸ್ಮಾರ್ಟ್’ಫೋನ್ ಲವರ್’ಗಳ ನಿದ್ದೆಗೆಡಿಸಿರುವ ಈ ಫೋನ್​ನಲ್ಲಿ ಬಲಿಷ್ಠವಾದ ಪ್ರೊಸೆಸರ್, ಆಕರ್ಷಕ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ, ಲಭ್ಯತೆ, ಫೀಚರ್ ಗಳ ಹೆಚ್ಚಿನ ಮಾಹಿತಿ ಇಲ್ಲಿದೆ.

ಐಕ್ಯೂ ಕಂಪನಿ ಭಾರತದಲ್ಲಿ ಹೊಸ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್’ಫೋನ್ ನ ಮುಖ್ಯ ಆಕರ್ಷಕ ಫೀಚರ್ (feature) ಎಂದರೆ,ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಂದರೆ ಕೇವಲ 10 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಫುಲ್ ಆಗುತ್ತದೆ. ಇದರಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.

ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ HD+ ಪರದೆಯನ್ನು ಹೊಂದಿದ್ದು, 1080*2400 ಪಿಕ್ಸೆಲ್ (pixel) ರೆಸಲೂಷನ್ ಸಾಮರ್ಥ್ಯ ಪಡೆದಿದೆ. 120Hz ರಿಫ್ರೆಶ್ ರೇಟ್ (Refresh rate) ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪ್ರಮುಖ SoC 4nm ಪ್ರಕೃಯೆಯನ್ನು ಆಧರಿಸಿದೆ. ಅತ್ಯಂತ ವೇಗವನ್ನು ಪಡೆದುಕೊಂಡಿರುವುದರಿಂದ ಗೇಮಿಂಗ್​ ಪ್ರಿಯರಿಗೆ ಹೇಳಿ ಮಾಡಿಸಿದ್ದಾಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್​ನಲ್ಲಿ ರನ್‌ ಆಗಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ.

ಐಕ್ಯೂ ನಿಯೋ 7 ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್​ನ OIS ಕ್ಯಾಮೆರಾವನ್ನು ಹೊಂದಿದ್ದರೆ, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ನಿಂದ ಕೂಡಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದ್ದು 16 ಮೆಗಾಪಿಕ್ಸೆಲ್ (Mega pixel) ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೆ ಈ ಕ್ಯಾಮೆರಾದಲ್ಲಿ ಅನೇಕ ಮನಮೋಹಕ ಆಯ್ಕೆಗಳನ್ನು ನೀಡಲಾಗಿದೆ. ನೈಟ್ ಮೋಡ್ ಆನ್-ಆಫ್ ಆಯ್ಕೆ, ಇನ್​ಸ್ಟಾಗ್ರಾಮ್ ರೀಲ್ಸ್​ಗೆ ಸೈಲ್ ವಿಡಿಯೋ ಜೊತೆಗೆ ಹಿಂಭಾಗ ಮತ್ತು ಹಿಂಭಾಗ ಡ್ಯುಯೆಲ್ ವೀವ್ ರೆಕಾರ್ಡಿಂಗ್ ಆಯ್ಕೆಯನ್ನು ಅಳವಡಿಸಲಾಗಿದೆ.

ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB + 128GB ಸ್ಟೋರೇಜ್ ಮಾದರಿಗೆ 29,999ರೂ,ಬೆಲೆ ಹೊಂದಿದೆ. ಆದರೆ ಉನ್ನತ-ಮಟ್ಟದ 12GB + 256GB ರೂಪಾಂತರದ ಬೆಲೆ 33,999ರೂ ಆಗಿದೆ. ವಿಶೇಷ ಎಂದರೆ ಈ ಫೋನ್ ಇಂದಿನಿಂದಲೇ ಖರೀದಿಗೆ ಸಿಗುತ್ತಿದೆ. ಮದ್ಯಾಹ್ನ 1 ಗಂಟೆಯಿಂದ ಜನಪ್ರಿಯ ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಮೂಲಕ ಪಡೆದುಕೊಳ್ಳಬಹುದು. 1,500 ರೂ. ರಿಯಾಯಿತಿಯ ಬ್ಯಾಂಕ್ ಆಫರ್ (Bank offer) ಅನ್ನು ಕೂಡ ಕಂಪನಿಯು ಘೋಷಿಸಿದೆ.