Xiaomi Offer: ರೆಡ್‌ಮಿ 11 ಪ್ರೈಮ್ ಫೋನ್ ಬೆಲೆ ಈಗ ತೀರ ಕಡಿಮೆ ! ಈಗಲೇ ಖರೀದಿಸಿ, ಕೆಲವು ದಿನಗಳವರೆಗೆ ಮಾತ್ರ
ಜನಪ್ರಿಯ ಸ್ಮಾರ್ಟ್‌ಫೋನ್ (smart phone) ಕಂಪೆನಿಗಳಲ್ಲಿ ಶಿಯೋಮಿ ಕಂಪೆನಿ ಸಹ ಒಂದಾಗಿದೆ. ಈ ಕಂಪೆನಿ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ವರ್ಷದಲ್ಲಿ ಶಿಯೋಮಿ ಕಂಪೆನಿಯಿಂದ ಹಲವಾರು ಮೊಬೈಲ್ಗಳು ಬಿಡುಗಡೆಯಾಗಿದ್ದು ಭಾರೀ ಬೇಡಿಕೆಯಲ್ಲಿದೆ. ಇದೀಗ ಇತ್ತೀಚೆಗೆ ಬಿಡುಗಡೆಯಾದ ರೆಡ್‌ಮಿ 11 ಪ್ರೈಮ್ ಸ್ಮಾರ್ಟ್‌ಫೋನ್ ಮೇಲೆ ಎಮ್ಐ ಸ್ಟೋರ್ ಮತ್ತು ಅಮೆಜಾನ್ನಲ್ಲಿ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ.
ಹೌದು ಕೇವಲ 11 ಸಾವಿರ ರೂಪಾಯಿಗೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಸದ್ಯ ಈ ಸ್ಮಾರ್ಟ್ ಫೋನಿನ ಬಗ್ಗೆ ಇಲ್ಲಿ ತಿಳಿಯಿರಿ :
• Redmi 11 ಪ್ರೈಮ್ ಸ್ಮಾರ್ಟ್‌ಫೋನ್ ದೊಡ್ಡ ಡಿಸ್ಪ್ಲೇ ಮತ್ತು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಹಿಂಬದಿಯ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಜನಪ್ರಿಯವಾಗಿದೆ.
• ಶಿಯೋಮಿ ಈ ಸ್ಮಾರ್ಟ್‌ಫೋನ್‌ನಲ್ಲಿ ಅದಿರೆ (Adire) ಡೀಲ್ ಅನ್ನು ಲಭ್ಯವಾಗುವಂತೆ ಮಾಡಿದೆ.
• ಇ-ಕಾಮರ್ಸ್ ಕಂಪನಿ ಅಮೆಜಾನ್ ಈ ಫೋನ್‌ನಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
• Amazon ನಿಂದ ಇದೇ Redmi 11 Prime ಮೂಲ ಮಾದರಿಯು 14,999 ರೂಪಾಯಿ ಬದಲಿಗೆ 11,999 ರೂಪಾಯಿಗಳಿ ಖರೀದಿ ಮಾಡಬಹುದು. ಹೆಚ್ಎಸ್ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಲಭ್ಯವಿರುತ್ತದೆ.
• ಎಂಐ ಸ್ಟೋರ್ ಮೂಲಕ ಗ್ರಾಹಕರು ಕೇವಲ 11 ರೂಪಾಯಿಗೆ ನೀವು ಈ Redmi 11 ಪ್ರೈಮ್ ಫೋನ್ ಅನ್ನು ಹೊಂದಬಹುದು. ಆದರೆ ಇದು ಇಎಮ್ಐ ರೀತಿಯಲ್ಲಿರುತ್ತದೆ. ಆದರೆ ಇಎಮ್ಐ ಹಣವನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ಸ್ಮಾರ್ಟ್ಫೋನ್ನ ಬೆಲೆ ಒಟ್ಟು 11,750 ರೂಪಾಯಿ ಆಗುತ್ತದೆ.
• ಅಲ್ಲದೆ ಮತ್ತೊಂದೆಡೆ ಭಾರೀ ರಿಯಾಯಿತಿ ಇದೆ. ವಿನಿಮಯ ಡೀಲ್ ಸಹ ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ನಿಮ್ಮ ಹಳೆಯ ಫೋನ್ ಕೊಟ್ಟು ಹೊಸ ಫೋನ್ ಖರೀದಿಸಿದರೆ ರೂ. 11,350 ರಿಯಾಯಿತಿ ಲಭ್ಯವಿದೆ. ಆದರೆ ನೀವು ಪಡೆಯುವ ವಿನಿಮಯ ಬೋನಸ್ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ.
• ಈ ಸ್ಮಾರ್ಟ್‌ಫೋನ್ 6.58 ಇಂಚಿನ ಡಿಸ್‌ಪ್ಲೇ, 90 Hz ಡಿಸ್‌ಪ್ಲೇ, ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್, MIUI 12 ಸಾಫ್ಟ್‌ವೇರ್, ಆಂಡ್ರಾಯ್ಡ್ 13 OS ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 6 ಜಿಬಿ ರ್‍ಯಾಮ್ ಮತ್ತು 128 ಜಿಬಿವರೆಗೆ ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.
• ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ವೈಶಿಷ್ಟ್ಯಗಳಿಗೆ ಬರುವುದಾದರೆ, ಇದು 50 ಮೆಗಾಪಿಕ್ಸೆಲ್ ಸೆನ್ಸಾರ್ನ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. 2 ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಇನ್ನು, ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 18 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಮೇಲಿನಂತೆ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಶಿಯೋಮಿ ಅದ್ಭುತ ಕೊಡುಗೆಯನ್ನು ತನ್ನ ಗ್ರಾಹಕರಿಗಾಗಿ ನೀಡಿದ್ದು ಸದ್ಯ ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಇರುತ್ತದೆ.