Car Sales in January 2023 : 3.5 ಲಕ್ಷ ಬೆಲೆಬಾಳುವ ಈ ಕಾರಿನ ಮಾರಾಟದಲ್ಲಿ ಭಾರೀ ಹೆಚ್ಚಳ!

ಭಾರತದಲ್ಲಿ ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದ್ದು, ಕಳೆದ ವರ್ಷ 2022ರಲ್ಲಿ ಪ್ರಮುಖ ಕಾರು ಕಂಪನಿಗಳು ಭರ್ಜರಿ ಬೇಡಿಕೆ ದಾಖಲಿಸಿವೆ. ತನ್ನ ವಿಭಿನ್ನ ವೈಶಿಷ್ಟ್ಯ, ಸ್ಮಾರ್ಟ್ ಲುಕ್, ವಿಶೇಷ ಫೀಚರ್ (feature) ಗಳಿಂದಾಗಿ ಕೆಲವೊಂದು ಕಾರುಗಳು ದಾಖಲೆ ಬರೆದಿವೆ. ಇದೀಗ ಟಾಪ್ 10 ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಅವುಗಳಲ್ಲಿ ನಿರಂತರವಾಗಿ ಸ್ಥಾನ ಕಾಯ್ದುಕೊಳ್ಳುವುದು ಕೆಲವೇ ಕಾರುಗಳು ಮಾತ್ರ. ದೇಶೀಯ ಮಾರುಕಟ್ಟೆಯಲ್ಲಿ ದೈತ್ಯ ಕಾರು ತಯಾರಕರಾದ ಮಾರುತಿ ಸುಜುಕಿ ( Maruti Suzuki) ಯವರ ಈ ಎರಡು ಕಾರುಗಳು ಟಾಪ್ ಲೀಸ್ಟ್’ನಲ್ಲಿದೆ. ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ.

 

ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಅಂಕಿಅಂಶಗಳಿಂದಾಗಿ, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರು ಮಾರುತಿ ಸುಜುಕಿ ಬಲೆನೊ (Maruti Suzuki Baleno)  ಎಂದೆನಿಸಿಕೊಂಡಿತ್ತು. ಆದರೆ ಈ ಹೊಸವರ್ಷದ, ಜನವರಿ ತಿಂಗಳಲ್ಲಿ ಅಂಕಿಅಂಶಗಳು ಸ್ವಲ್ಪ ಬದಲಾವಣೆಗೊಂಡಿದೆ. ಮಾರುತಿ ಸುಜುಕಿಯ ಕೈಗೆಟುಕುವ ದರದಲ್ಲಿ ಲಭ್ಯವಿದ್ದ ಎರಡು ಕಾರುಗಳು, ಮಾರಾಟದಲ್ಲಿ ದೊಡ್ಡ ಪ್ರಗತಿಯನ್ನೇ ಕಂಡಿದೆ. ಈ ಎರಡು ಕಾರುಗಳು ಒಂದು ತಿಂಗಳ ಹಿಂದೆ ಮಾರಾಟ ವಿಭಾಗದಲ್ಲಿ ಅಷ್ಟೇನೂ ಹೇಳಿಕೊಳ್ಳುವಂಥಹ ಸೌಂಡ್  ಮಾಡಿರಲಿಲ್ಲ. ಆದರೆ ಈ ಬಾರಿ ಅವುಗಳು ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಗ್ರಸ್ಥಾನಕ್ಕೆ ಸೇರಿಸಿವೆ.

 

ನಾವಿಂದು ಹೇಳಲಿರುವ ಆ ಎರಡು ಕಾರುಗಳು ಯಾವುದು ಗೊತ್ತಾ? ಮಾರುತಿ ಸುಜುಕಿ ಆಲ್ಟೊ ಮತ್ತು ಮಾರುತಿ ಸುಜುಕಿ ವ್ಯಾಗನಾರ್. ಈ ಎರಡೂ ಕಾರುಗಳು ಜನವರಿ 2023 ರಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಕಾರುಗಳು ಎನ್ನುವ  ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದೆ. ವಿಶೇಷವೆಂಬಂತೆ ಡಿಸೆಂಬರ್ ತಿಂಗಳಿಗಿಂತಲೂ ಜನವರಿ ತಿಂಗಳಲ್ಲಿ ಕಾರು ಮಾರಾಟವು ಹೆಚ್ಚಾಗಿದ್ದು, ಅಂಕಿ ಅಂಶಗಳಲ್ಲಿ ಹೇಳುವುದಾದರೆ 2 ರಿಂದ 2.5 ಪಟ್ಟು ಹೆಚ್ಚಾಗಿದೆ. ದಾಖಲೆ ಬರೆದ ಈ ಕಾರುಗಳ ಫೀಚರ್, ಬೆಲೆ ಬಣ್ಣಗಳ ಬಗ್ಗೆ ನೋಡೋಣ ಬನ್ನಿ.

 

ಮಾರುತಿ ಸುಜುಕಿ ಆಲ್ಟೊ (Maruti Suzuki Alto) :- ಮಾರುತಿ ಸುಜುಕಿಯ ಆಲ್ಟೊ ಕಳೆದ ತಿಂಗಳು 21,411 ಯುನಿಟ್‌ಗಳಷ್ಟು  ಮಾರಾಟಗೊಂಡಿದ್ದು, ಹೆಚ್ಚು ಮಾರಾಟವಾದ ಕಾರು ಎಂಬ ಪ್ರಾಮುಖ್ಯತೆ ಪಡೆದಿದೆ. ಕಳೆದ ತಿಂಗಳಿನಲ್ಲಿ ಡಿಸೆಂಬರ್ 2022 ರಲ್ಲಿ, ಈ ಕಾರಿನ ಕೇವಲ 8,648 ಯುನಿಟ್‌ಗಳಷ್ಟು ಮಾತ್ರ ಮಾರಾಟವಾಗಿತ್ತು. ಹೀಗಾಗಿ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಆಲ್ಟೊ ಮಾರಾಟದಲ್ಲಿ ಶೇ.147.58ರಷ್ಟು ಏರಿಕೆಯಾಗಿದೆ. ಮಾರುತಿ ಆಲ್ಟೊ ಎರಡು ಮಾದರಿಗಳಲ್ಲಿ ಆಲ್ಟೊ 800 (Maruti Suzuki Alto 800)ಮತ್ತು ಆಲ್ಟೊ ಕೆ10 (Maruti Suzuki Alto K 10) ಕಾರು ಬಿಡುಗಡೆಯಾಗಿದೆ. ಆಲ್ಟೊ 800 ನ ಆರಂಭಿಕ ಬೆಲೆಯು 3.53 ಲಕ್ಷ ರೂಪಾಯಿಯಾಗಿದೆ.

 

ಮಾರುತಿ ಸುಜುಕಿ ವ್ಯಾಗನಾರ್ (Maruti Suzuki Wagon R) :

ಮಾರುತಿ ವ್ಯಾಗನ್ಆರ್ 20,466 ಯುನಿಟ್‌ಗಳ ಭರ್ಜರಿ ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿನ ವರ್ಷ ಅಂದರೆ, ಡಿಸೆಂಬರ್ 2022 ರಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಕೇವಲ 10,181 ಯುನಿಟ್‌ಗಳನ್ನು  ಮಾರಾಟ ಮಾಡಲು ಸಾಧ್ಯವಾಯಿತು. ಆದರೆ, ಜನವರಿಯಲ್ಲಿ ಈ ಕಾರಿನ ಮಾರಾಟದಲ್ಲಿ 101.02 ಶೇಕಡಾ ಹೆಚ್ಚಳ ದಾಖಲಾಗಿದೆ.  ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆಯು 5.53 ಲಕ್ಷದಿಂದ ಪ್ರಾರಂಭವಾಗಿ 7.41 ಲಕ್ಷದವರೆಗೂ ಇರುತ್ತದೆ.

Leave A Reply

Your email address will not be published.