Passport : ಪಾಸ್‌ಪೋರ್ಟ್‌ ಪಡೆಯುವವರಿಗೆ ಸಿಹಿ ಸುದ್ದಿ!

ಆಧುನಿಕ ಯುಗದಲ್ಲಿ ಎಲ್ಲವೂ ಕ್ಷಣ ಮಾತ್ರದಲ್ಲಿ ಕೈಸೇರುತ್ತದೆ. ತಂತ್ರಜ್ಞಾನ ಬದಲಾದಂತೆ ಎಲ್ಲವೂ ಬದಲಾಗುತ್ತಿವೆ. ದಿನೇ ದಿನೇ ಹಲವು ವಿಚಾರಗಳಲ್ಲಿ ಬದಲಾವಣೆ ಆಗುತ್ತಿವೆ. ಸದ್ಯ ಪಾಸ್ಪೋರ್ಟ್ ಪಡೆಯುವಲ್ಲಿಯೂ ಕೆಲವು ಬದಲಾವಣೆಗಳು ಆಗಿವೆ. ವಿದೇಶಕ್ಕೆ ಪ್ರಯಾಣಿಸಬೇಕು ಅಂದ್ರೆ ಪಾಸ್ ಪೋರ್ಟ್ ಅಗತ್ಯವಾಗಿದೆ. ಈ ಹಿಂದೆ ಪಾಸ್ ಪೋರ್ಟ್ ಪಡೆಯಲು ಸಾಕಷ್ಟು ಕಷ್ಟಬೇಕಿತ್ತು. ಹಲವು ವಿಧಾನಗಳ ಮೋರೆ ಹೋಗಬೇಕಿತ್ತು. ಆನಂತರ ತಂತ್ರಜ್ಞಾನ ಬದಲಾದಂತೆ ಈ ಪ್ರಕ್ರಿಯೆ ಇನ್ನಷ್ಟು ಸರಳವಾಯಿತು. ಇನ್ಮುಂದೆ ಇನ್ನೂ ಸುಲಭವಾಗಲಿದೆ. ಹೇಗೆ? ಅಂದ್ರೆ ಇನ್ಮುಂದೆ ಪಾಸ್‌ಪೋರ್ಟ್‌ ಪರಿಶೀಲನೆ ಸೌಲಭ್ಯ ಸಂಪೂರ್ಣ ಸ್ವಯಂಚಾಲಿತವಾಗಲಿದೆ.

ಇದರಿಂದ ಪಾಸ್‌ಪೋರ್ಟ್ ಪಡೆಯಲು ಅಧಿಕ ಸಮಯ ಕಾಯುವ ಅಗತ್ಯವಿಲ್ಲ. 15 ದಿನಗಳ ಬದಲಾಗಿ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್‌ ನಿಮ್ಮ ಕೈಸೇರಲಿದೆ. ಹೆಚ್ಚಿದ್ದ ಸಮಯ ಕಡಿಮೆ ಆಗಿದ್ದು, ವಿದೇಶಕ್ಕೆ ತೆರಳುವವರಿಗೆ ಇದು ಸಿಹಿ ಸುದ್ದಿಯೇ ಸರಿ. ಈ ಪಾಸ್‌ಪೋರ್ಟ್ ಪರಿಶೀಲನೆಯು ಪ್ರಸ್ತುತ ದೆಹಲಿಯಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿದೆ.

ನೀವು ಭಾರತೀಯ ಪ್ರಜೆಯಾಗಿದ್ದು, ಪಾಸ್‌ಪೋರ್ಟ್ ಪಡೆಯಲು ಬಯಸಿದರೆ, ಇದಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪಾಸ್‌ಪೋರ್ಟ್‌ ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

• ಮೊದಲು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.
• ಇದಾದ ನಂತರ ಪೋರ್ಟಲ್‌ನಲ್ಲಿ ಲಾಗಿನ್ ಆಗಿರಿ.
• GEP ಲಿಂಕ್‌ಗಾಗಿ ಹಿನ್ನೆಲೆ ಪರಿಶೀಲನೆಗೆ ಅಪ್ಸ್ ಅನ್ನು ಕ್ಲಿಕ್ ಮಾಡಿ.
• ಫಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಸಬ್ಮಿಟ್ ಮಾಡಿ.
• ಅಲ್ಲಿ ಪೇ ಮತ್ತು ಶೆಡ್ಯೂಲ್ ನೇಮಕಾತಿಯ ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಬಯಸುವ ಸ್ಥಳವನ್ನು ಆಯ್ಕೆಮಾಡಿರಿ ಹಾಗೂ ಆನ್‌ಲೈನ್ ಪಾವತಿ ಮಾಡಿರಿ.
• ನಂತರ ಪ್ರಿಂಟ್ ಅಪ್ಲಿಕೇಶನ್ ರಶೀದಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆಗ ಪ್ರಿಂಟರ್‌ನಿಂದ ಅಪ್ಲಿಕೇಶನ್‌ನ ಪ್ರಿಂಟ್ ಸಿಗುತ್ತದೆ.
• ಮೊಬೈಲ್‌ಗೆ ಅಪಾಯಿಂಟ್‌ಮೆಂಟ್ ಸಂದೇಶ ಬರುತ್ತದೆ. ಅದನ್ನು ಸೇವ್ ಮಾಡಿರಿ.

Leave A Reply

Your email address will not be published.