SmartPhone : ಈ ಫೋನ್‌ಗಳು ಎಷ್ಟೊಂದು ಟಫ್‌ ಗೊತ್ತಾ? ಯಾವೆಲ್ಲ ಫೋನ್‌ಗಳು, ಇಲ್ಲಿದೆ ನೋಡಿ!

ಸದ್ಯ ಸ್ಮಾರ್ಟ್ ಫೋನ್(smartphone )ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಅಲ್ಲದೇ ಬಹುತೇಕ ಜನರು ಅವರ ಬಳಕೆ ಹಾಗೂ ಜಿವನಶೈಲಿಗೆ ಸರಿಹೊಂದುವ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ. ವಿಶೇಷ ಅಂದ್ರೆ, ಬಜೆಟ್‌ ದರದಲ್ಲಿ ಕೆಲವು ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಹೌದು ಈ ಕೆಳಗಿನ ಫೋನ್ ಗಳು ಜಿವನಶೈಲಿಗೆ (lifestyle )ಸರಿಹೊಂದುವ ಸ್ಮಾರ್ಟ್‌ಫೋನ್‌ಗಳಾಗಿವೆ :

• Ulefone Armor 7 ಸ್ಮಾರ್ಟ್‌ಫೋನ್‌:
ಈ ಸ್ಮಾರ್ಟ್‌ಫೋನ್‌ ರಫ್‌ ಆಂಡ್‌ ಟಫ್‌ ಡಿಸೈನ್‌ ಪಡೆದಿದ್ದು, ಜೊತೆಗೆ ಉತ್ತಮ ಫೀಚರ್ಸ್‌ ಆಯ್ಕೆ ಹೊಂದಿದೆ. ಈ ಫೋನ್ 6.3 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P90 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದರೊಂದಿಗೆ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

• Ulefone Armor 3T ಸ್ಮಾರ್ಟ್‌ಫೋನ್‌:
ಈ ರಫ್‌ ಆಂಡ್‌ ಟಫ್‌ ಸ್ಮಾರ್ಟ್‌ಫೋನ್ 5.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P23 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಸಿಂಗಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಅದು 21 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ 10300mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

• Doogee S95 Pro ಸ್ಮಾರ್ಟ್‌ಫೋನ್‌:
ಇದು ಸಹ ರಫ್‌ ಆಂಡ್‌ ಟಫ್‌ ಡಿಸೈನ್‌ ಪಡೆದಿದೆ. ಅಲ್ಲದೇ ಈ ಫೋನ್ 6.3 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P90 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,1500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 24W ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

• Blackview BV9500 ಸ್ಮಾರ್ಟ್‌ಫೋನ್‌:
ಈ ಸ್ಮಾರ್ಟ್‌ಫೋನ್‌ ರಗಡ್‌ ಲುಕ್‌ ಜೊತೆಗೆ 10000 mAh ಸಾಮರ್ಥ್ಯದ ಜಬರ್ದಸ್ತ್‌ ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದಿದೆ. ಈ ಫೋನ್ 5.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಿದ್ದು, ಮೀಡಿಯಾ ಟೆಕ್‌ P23 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಜೊತೆಗೆ ಟೈಪ್‌ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಈ ಮೇಲಿನ ಸ್ಮಾರ್ಟ್ ಫೋನ್ ಗಳು ಇತರೆ ಸ್ಮಾರ್ಟ್‌ಫೋನ್‌ಗಳಂತೆ ಅತ್ಯುತ್ತಮ ಡಿಸ್‌ಪ್ಲೇ, ವೇಗದ ಪ್ರೊಸೆಸರ್‌, ಬೆಸ್ಟ್ ಕ್ಯಾಮೆರಾ ಆಯ್ಕೆ ಹಾಗೂ ಬಿಗ್ ಬ್ಯಾಟರಿ ಆಯ್ಕೆಗಳನ್ನು ಒಳಗೊಂಡಿವೆ.

Leave A Reply

Your email address will not be published.