Fake Potato : ಬಂದಿದೆ ಮಾರುಕಟ್ಟೆಗೆ ನಕಲಿ ಆಲೂಗಡ್ಡೆ, ಗುರುತಿಸುವುದು ಹೇಗೆ?
ಇತ್ತೀಚಿಗೆ ಮಾರುಕಟ್ಟೆಯಲ್ಲಿ (Market) ನಕಲಿ ಆಲೂಗಡ್ಡೆಗಳ ಕಾಟ ಹೆಚ್ಚುತ್ತಿದ್ದು, ಅಸಲಿ ಆಲೂಗಡ್ಡೆಯ ಬದಲಿಗೆ ಆಲೂಗಡ್ಡೆಯಲ್ಲಿ ನಕಲಿ ಆಲೂಗಡ್ಡೆಯನ್ನು ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಗ್ರಾಹಕರನ್ನು ಮೋಸಗೊಳಿಸಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಕಡಿಮೆ ಬೆಲೆಯಲ್ಲಿ ದೊರೆಯುವ ಈ ತರಕಾರಿ ಪ್ರತಿಯೊಂದು ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಆಲೂಗಡ್ಡೆ (potato )ಬಳಸಿ ಮಾಡುವ ಪ್ರತಿಯೊಂದು ಖಾದ್ಯವು ಇನ್ನಷ್ಟು ರುಚಿಯನ್ನು ಪಡೆದುಕೊಳ್ಳುತ್ತದೆ. ಆದರೆ ಆಲೂಗಡ್ಡೆಯಲ್ಲಿ ವಿಧವಿಧವಾದ ಬಗೆಗಳಿದ್ದು ಅದರಲ್ಲಿ ಚಂದ್ರಮುಖಿ (chandramukhi potato ), ಹೇಮಾಂಗಿನಿ (hemangini potato ), ಜ್ಯೋತಿ ಹೀಗೆ ನಾನಾ ವಿಧಗಳಿವೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ. ನಕಲಿ ಆಲೂಗಡ್ಡೆ (fake potato)ಹೇಮಾಂಗಿನಿ ಆಲೂಗಡ್ಡೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ತಿಳಿಯುವುದಿಲ್ಲ.
ಎಲ್ಲಾ ಮಾರುಕಟ್ಟೆಗೆ (market)ನಕಲಿ ಆಲೂಗಡ್ಡೆ ಕಾಲಿಟ್ಟಿದ್ದು ಅಸಲಿ ಆಲೂಗಡ್ಡೆಯೊಂದಿಗೆ ಇದನ್ನೂ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಆಲೂಗಡ್ಡೆಯ ರುಚಿಯೇ ಬೇರೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ಗುರುತಿಸುವುದು ಅಷ್ಟು ಸುಲಭವಲ್ಲ. ಚಂದ್ರಮುಖಿ ಆಲೂಗಡ್ಡೆ ಕೆಜಿಗೆ 20ರಿಂದ 27 ರೂ.ಗೆ ಮಾರಾಟವಾಗುತ್ತದ್ದರೆ, ಹೇಮಾಂಗಿನಿ ಆಲೂಗೆಡ್ಡೆ ಕೆಜಿಗೆ 10ರಿಂದ 15 ರೂ.ಗೆ ಮಾರಲಾಗುತ್ತಿದೆ.
ಹೇಮಾಂಗಿನಿ ಆಲೂಗೆಡ್ಡೆ ಮೂಲತಃ ಮಿಶ್ರ ವಿಧದ ಆಲೂಗಡ್ಡೆ ಎನ್ನಲಾಗುತ್ತಿದೆ. ಈ ಆಲೂಗಡ್ಡೆಯನ್ನು ಪಂಜಾಬ್ ಮತ್ತು ಜಲಂಧರ್‌ನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆಲೂಗೆಡ್ಡೆಯ ಈ ಕೃಷಿಯಲ್ಲಿ ಇಳುವರಿ ಹೆಚ್ಚು. ಒಂದು ಇಳುವರಿಯಲ್ಲಿ ಚಂದ್ರಮುಖಿ ಆಲೂಗೆಡ್ಡೆ 50 ರಿಂದ 60 ಚೀಲ ಉತ್ಪಾದನೆಯಾಗುತ್ತದೆ.
ಹೇಮಾಂಗಿನಿ ಆಲೂಗೆಡ್ಡೆ ಉತ್ಪಾದನೆ ಸುಮಾರು 90 ರಿಂದ 95 ಚೀಲಗಳಷ್ಟಾಗಿರುತ್ತದೆ. ಈ ಆಲೂಗೆಡ್ಡೆಯ ಉತ್ಪಾದನೆ ಪ್ರಮಾಣ ಹೆಚ್ಚಿದ್ದರೂ, ಬೇಡಿಕೆ ತೀರಾ ಕಡಿಮೆ. ಈ ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಈ ಆಲೂಗಡ್ಡೆಗಳ ರುಚಿ ಕೂಡಾ ಉತ್ತಮವಾಗಿಲ್ಲ.
ಚಂದ್ರಮುಖಿ ಆಲೂಗೆಡ್ಡೆಯೊಂದಿಗೆ ಕ್ರಾಸ್ ಬ್ರೀಡಿಂಗ್ ಮೂಲಕ ಹೇಮಾಂಗಿನಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಈ ಆಲೂಗೆಡ್ಡೆ ಹೈಬ್ರಿಡ್ ಆಗಿರುವುದರಿಂದ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದು ಸಾಧ್ಯ. ಚಂದ್ರಮುಖಿ ಆಲೂಗಡ್ಡೆ ಬೆಳೆಯಲು ಮೂರ್ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಈ ಹೈಬ್ರಿಡ್ ಆಲೂಗಡ್ಡೆಗಳು ಒಂದೂವರೆ ಎರಡು ತಿಂಗಳೊಳಗೆ ಇಳುವರಿ ನೀಡುತ್ತದೆ.
ಹೇಮಾಂಗಿನಿ ಆಲೂಗಡ್ಡೆ ಮತ್ತು ಚಂದ್ರಮುಖಿ ಆಲೂಗಡ್ಡೆಯನ್ನು ಆಲೂಗಡ್ಡೆಯನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದಾಗಿ, ಎರಡು ರೀತಿಯ ಆಲೂಗಡ್ಡೆಗಳನ್ನು ಸಿಪ್ಪೆ ಸುಲಿದ ನಂತರ, ಒಳಗೆ ಬಣ್ಣಗಳು ವಿಭಿನ್ನವಾಗಿವೆ. ಚಂದ್ರಮುಖಿ ಆಲೂಗೆಡ್ಡೆಯ ಒಳಭಾಗವು ಮಂದ ಹಳದಿ ಬಣ್ಣದ್ದಾಗಿದ್ದರೆ ಹೇಮಾಂಗಿನಿ ಆಲೂಗಡ್ಡೆಯ ಒಳಭಾಗವು ಬಿಳಿಯಾಗಿರುತ್ತದೆ. ಎರಡನೆಯದಾಗಿ, ಯಾವ ಆಲೂಗೆಡ್ಡೆ ಎನ್ನುವುದನ್ನು ರುಚಿ ನೋಡುವ ಮೂಲಕ ಅರ್ಥಮಾಡಿಕೊಳ್ಳಬಹುದು.
ಹೇಮಾಂಗಿನಿ ಆಲೂಗಡ್ಡೆ ಮತ್ತು ಚಂದ್ರಮುಖಿ ಆಲೂಗಡ್ಡೆಯನ್ನು ಹೊರಗಿನಿಂದ ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಸದ್ಯ ಇನ್ನು ಮುಂದೆ ಗ್ರಾಹಕರು ಆಲೂಗಡ್ಡೆಯನ್ನು ಖರೀದಿಸುವಾಗ ಸ್ವಲ್ಪ ಎಚ್ಚರದಿಂದ ಇರುವುದು ಸೂಕ್ತ.