Latest Movies Free: ಹೆಚ್ಚುವರಿ ಹಣ ಖರ್ಚು ಮಾಡದೆ ಓಟಿಟಿ ಸಿನಿಮಾ ಆನಂದಿಸಿ !

ನೀವು OTT ಪ್ಲಾಟ್ಫಾರ್ಮ್ನಲ್ಲಿ (Netflix, Prime Video, Disney+ Hotstar) ಹೆಚ್ಚುವರಿ ಹಣ ಖರ್ಚು ಮಾಡದೆ, ಸಿನಿಮಾಗಳನ್ನು ವೀಕ್ಷಿಸಲು ಟ್ರಿಕ್ಸ್ ಇಲ್ಲಿದೆ. ಇದರಿಂದ ನೀವು ಕಡಿಮೆ ಖರ್ಚಿನಲ್ಲಿ ನಿಮ್ಮ ಮೊಬೈಲ್ ಫೋನ್ನಲ್ಲೇ ನ್ಯೂಸ್, ಕ್ರಿಕೆಟ್ ಚಲನಚಿತ್ರಗಳನ್ನು ವೀಕ್ಷಿಸಬಹುದು. ನೀವು ರೀಚಾರ್ಜ್ ಮಾಡುವ ಯೋಜನೆಯಲ್ಲೇ ಈ ಸೌಲಭ್ಯ ಲಭ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

500 ರೂ ಗಿಂತ ಕಡಿಮೆ ಬೆಲೆಯ ಜಿಯೋ ಯೋಜನೆಗಳು :
ನೀವು 500 ರೂ. ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳೊಂದಿಗೆ ಉಚಿತವಾಗಿ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇದನ್ನು ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ನೊಂದಿಗೆ ಅಗ್ಗದ ಪ್ಯಾಕೇಜ್ ನ ಮೂಲಕ ನೀಡಲಾಗುತ್ತದೆ. ಅಲ್ಲದೆ, ಈ ಯೋಜನೆ ಅಮೆಜಾನ್ ಪ್ರೈಮ್ (Amazon prime) ಚಂದಾದಾರಿಕೆಯನ್ನು ಕೂಡ ಒಳಗೊಂಡಿದೆ.

ಜಿಯೋದ ರೂ. 399 ಯೋಜನೆ :
ಜಿಯೋ ಬಳಕೆದಾರರಿಗೆ ರೂ. 399 ರ ಪೋಸ್ಟ್ಪೇಯ್ಡ್ ಯೋಜನೆಯಲ್ಲಿ ರೀಚಾರ್ಜ್ ಮಾಡುವ ಆಯ್ಕೆ ಇದ್ದು, 28 ದಿನಗಳ ಅವಧಿಯ ಈ ಯೋಜನೆ ಎಲ್ಲಾ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಒದಗಿಸುತ್ತದೆ. ಜೊತೆಗೆ ಪ್ರತಿ ದಿನ 100 SMS ಹಾಗೂ 75 GB ಡೇಟಾವನ್ನು ಹೊಂದಿದ್ದು, ಅದರ ನಂತರ ಪ್ರತಿ GB ಗೆ 10 ರೂ ಪಾವತಿಸಬೇಕಿದೆ. ಇದಿಷ್ಟೇ ಅಲ್ಲದೆ ಆ ತಿಂಗಳಲ್ಲಿ ಉಳಿದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲಾಗುತ್ತದೆ. ಅರ್ಹ ಸದಸ್ಯರಿಗೆ ಅನ್ಲಿಮಿಟೆಡ್ 5G ಡೇಟಾವನ್ನು ಬಳಸುವ ಅವಕಾಶವನ್ನು ನೀಡಲಾಗುತ್ತದೆ.

ಜಿಯೋ ಪೋಸ್ಟ್ಪೇಯ್ಡ್ ಯೋಜನೆಗಳಿಗೆ ಪ್ರತ್ಯೇಕವಾಗಿ GST ಶುಲ್ಕ :
ಈ ಯೋಜನೆಯಲ್ಲಿ ನೆಟ್ಫ್ಲಿಕ್ಸ್ (Netflix)ಪ್ಲಾನ್ ಚಂದಾದಾರಿಕೆಯ ಜೊತೆಗೆ ಅಮೆಜಾನ್ ಪ್ರೈಮ್ ಗೂ ಒಂದು ವರ್ಷದ ಸದಸ್ಯತ್ವವನ್ನು ನೀಡಲಾಗುತ್ತದೆ. ಬಳಕೆದಾರರು ಜಿಯೋ(jio) ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೆ ಯಾವುದೇ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳಲ್ಲಿ 18% GST ಪಾವತಿಯ ಅಗತ್ಯವಿರುತ್ತದೆ. ಈ ರೀತಿ ನೀವು ಹೆಚ್ಚುವರಿ ಹಣ ಖರ್ಚು ಮಾಡದೆ ಓಟಿಟಿ ಸಿನಿಮಾ ಆನಂದಿಸಬಹುದು.

Leave A Reply

Your email address will not be published.