Home latest Salary : ತನ್ನ ಪತ್ನಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದ ವ್ಯಕ್ತಿಯ ಸೊಂಟ ಮುರಿಯುವೆ...

Salary : ತನ್ನ ಪತ್ನಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದ ವ್ಯಕ್ತಿಯ ಸೊಂಟ ಮುರಿಯುವೆ ಎಂದ ಸಚಿವ !

Hindu neighbor gifts plot of land

Hindu neighbour gifts land to Muslim journalist

ಮಧ್ಯಪ್ರದೇಶ : ತನ್ನ ಪತ್ನಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದ ವ್ಯಕ್ತಿಯ ಸೊಂಟ ಮುರಿಯುವೆ ಎಂದು ಮಧ್ಯ ಪ್ರದೇಶದ ಅರಣ್ಯ ಸಚಿವ ಸಾರ್ವಜನಿಕ ಕಾರ್ಯಕ್ರಮದಲ್ಲೇ ಬೆದರಿಸಿದ ಘಟನೆ ನಡೆದಿದೆ.

ಮಧ್ಯ ಪ್ರದೇಶದ ಅರಣ್ಯ ಸಚಿವ ವಿಜಯ್‌ ಶಾ ಅವರು ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಖಾಂಡ್ವಾ ಜಿಲ್ಲೆಗೆ ಆಗಮಿಸಿದ್ದಾಗ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಕಳೆದ ಆರು ತಿಂಗಳಿಂದ ಅವಳಿಗೆ ಸಂಬಳ ಬಂದಿಲ್ಲ ಎಂದು ಆರೋಪಿಸಿದ್ದಾನೆ.

ಆತನ ಈ ಆರೋಪಕ್ಕೆ ಉರಿದು ಬಿದ್ದ ಸಚಿವರು ಅವನನ್ನು ಕುಡುಕ ಎಂದು ನಿಂದಿಸಿದ್ದಲ್ಲದೆ ಸೊಂಟ ಮುರಿಯುವೆ ಎಂದು ಬೆದರಿಕೆ ಹಾಕಿದ್ದಲ್ಲದೆ ಪೋಲಿಸರನ್ನು ಕರೆಸಿ ಆತನನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದ್ದಾರೆ.

ಅದೂ ಅಲ್ಲದೇ, ಕಾಂಗ್ರೆಸ್‌ ಮೇಲೆ ಆರೋಪ ಹೊರಿಸಿದ ಸಚಿವರು, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೇ ವಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಆ ವ್ಯಕ್ತಿಯನ್ನು ಕಾಂಗ್ರೆಸ್‌ನವರು ಕಳುಹಿಸಿದ್ದಾರೆ. ನನಗೆ ಅವನನ್ನು ಯಾರು ಕಳುಹಿಸಿದ್ದಾರೆ ಎಂದು ತಿಳಿದಿದೆ ಎಂದೂ ಹೇಳಿದ್ದಾರೆ. ಆ ಬಳಿಕ ಆ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವುದಕ್ಕೂ ಶಾ ಪೋಲಿಸರಿಗೆ ಸೂಚನೆ ನೀಡಿದ್ದಾರೆ.

ಅರಣ್ಯ ಸಚಿವರ ದರ್ಪವನ್ನು ಹಲವರು ಟೀಕಿಸಿದ್ದು ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆ ವ್ಯಕ್ತವಾಗಿದೆ.