Google Pay : ಗೂಗಲ್ ಪೇ ನಲ್ಲಿ ಎಷ್ಟು ಬ್ಯಾಂಕ್ ಖಾತೆ ಸೇರಿಸಬಹುದು? ಕಂಪ್ಲೀಟ್ ವಿವರ ಇಲ್ಲಿದೆ

ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿ ಬಿಟ್ಟಿದೆ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.

ಗೂಗಲ್ ಪೇ (Google Pay) ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್‌ ಅನ್ನೋ ವಿಚಾರ ಗೊತ್ತಿರದೆ ಇರುವವರೇ ವಿರಳ. ಈ ಅಪ್ಲಿಕೇಷನ್ ಅತೀ ಸುಲಭ ಹಾಗೂ ಸುರಕ್ಷಿತ ಪಾವತಿ ವಿಧಾನವನ್ನು ಹೊಂದಿದ್ದು, ಹಣ ಪಾವತಿ ಮಾಡಲು ಜೊತೆಗೆ ಹಣ ವರ್ಗಾವಣೆಗಾಗಿ ಒಂದಕ್ಕಿಂತ ಹೆಚ್ಚು ವಿಭಿನ್ನ ಬ್ಯಾಂಕ್ ಖಾತೆಗಳನ್ನು ಹೊಂದಬಹುದಾಗಿದೆ. ಹೀಗಾಗಿ, ಮನೆಯ ದಿನನಿತ್ಯದ ವೆಚ್ಚ ಹಾಗೂ ಸ್ವಂತ ವೆಚ್ಚಗಳನ್ನು ಭರಿಸಲು ನೆರವಾಗುತ್ತದೆ.

ಗೂಗಲ್ ಪೇ ಬಳಕೆದಾರರು ಒಂದಕ್ಕಿಂತ ಹೆಚ್ಚು ವಿಭಿನ್ನ ಬ್ಯಾಂಕ್ ಖಾತೆ ಹೊಂದಿದ್ದರೆ, ಲಿಂಕ್ ಮಾಡಿರುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಲು ಅವಕಾಶವಿದ್ದು ಹೀಗಾಗಿ, ಸರಳವಾಗಿ ಹಣ ವರ್ಗಾವಣೆ, ಸ್ವೀಕಾರ ಮಾಡುವ ಪ್ರಕ್ರಿಯೆ ಮಾಡಲು ಡೀಫಾಲ್ಟ್ ಆಗಿ ಬಳಕೆ ಮಾಡಬಹುದು. ಇದರ ಜೊತೆಗೆ ಬ್ಯಾಲೆನ್ಸ್ ಚೆಕ್ ಮಾಡುವ ಜೊತೆಗೆ UPI ಐಡಿಯನ್ನು ಬದಲಾವಣೆ ಮಾಡಬಹುದು. ಇದಲ್ಲದೆ, ಬ್ಯಾಂಕ್ ಖಾತೆಯನ್ನು ತೆಗೆದುಹಾಕುವುದಲ್ಲದೆ ಬಳಕೆದಾರರು UPI ಪಿನ್ ಅನ್ನು ಬದಲಾಯಿಸುವ ಹಾಗೂ ಮರುಹೊಂದಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನಿಮ್ಮ ಬ್ಯಾಂಕ್ ನೋಂದಾಯಿತ ಮೊಬೈಲ್ ಸಂಖ್ಯೆ ಒಂದೇ ಆಗಿರಬೇಕು. ಹೀಗಿದ್ದಾಗ ಮಾತ್ರ, ಗೂಗಲ್ ಪೇನಲ್ಲಿ ಎರಡು ಇಲ್ಲವೇ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಬಹುದಾಗಿದೆ. ಒಂದು ವೇಳೆ, ಎರಡು ಬ್ಯಾಂಕ್ ಖಾತೆಗಳಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ವಿಭಿನ್ನವಾಗಿದೆ ಎಂದಾದರೆ, ನೀವು ಗೂಗಲ್ ಪೇ ಮೂಲಕ ಎರಡೂ ಖಾತೆಗಳನ್ನು ಹೊಂದಲು ಸಾಧ್ಯವಾಗದು.

ಗೂಗಲ್ ಪೇನಲ್ಲಿ ಬಹು ಬ್ಯಾಂಕ್ ಖಾತೆಯನ್ನು ಸೇರಿಸುವ ವಿಧಾನ ಹೀಗಿದೆ.

ಮೊದಲಿಗೆ, ಮೊಬೈಲ್ ನಲ್ಲಿ ಗೂಗಲ್ ಪೇ ತೆರೆದು, ಆ ಬಳಿಕ,
ಮೇಲಿನ ಬಲ ಭಾಗದಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿಕೊಂಡು ಹೊಸ ಪುಟ ತೆರೆದುಕೊಂಡು ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ. ಆ ಬಳಿಕ, ಪಾವತಿ ವಿಧಾನಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ. ಆಗ, ಪಾವತಿ ವಿಧಾನದ ಪುಟ ತೆರೆದುಕೊಳ್ಳುತ್ತದೆ. ಈ ವೇಳೆ, ಬ್ಯಾಂಕ್ ಖಾತೆಯನ್ನು ಸೇರಿಸಿ ಟ್ಯಾಪ್ ಮಾಡಿಕೊಂಡು ಪಟ್ಟಿಯಲ್ಲಿ ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು.

ಈ ಸಂದರ್ಭದಲ್ಲಿ ಪಾಪ್-ಅಪ್ ನಿಮಗೆ ಕಂಡುಬರುತ್ತದೆ. ಇದಲ್ಲದೆ, ಪರಿಶೀಲನೆ ಸಲುವಾಗಿ ಮೆಸ್ಸೇಜ್ ರವಾನೆ ಮಾಡಲು ಸೂಚನೆ ಬರಲಿದೆ. ಆಗ SMS ಕಳುಹಿಸು ಎಂದು ಟ್ಯಾಪ್ ಮಾಡಬೇಕಾಗಿದ್ದು, ಪರಿಶೀಲನೆ ನಡೆಸಿದ ಬಳಿಕ, ನಿಮ್ಮ ಲಿಂಕ್ ಮಾಡಲಾಗಿರುವ ಖಾತೆಯು ನಿಮಗೆ ಕಾಣಿಸುತ್ತದೆ. ಆಗ,ಮುಂದುವರಿಸಿ ಎಂದು ಟ್ಯಾಪ್ ಮಾಡಿಕೊಳ್ಳುವ ಮೂಲಕ ಗೂಗಲ್ ಪೇನಲ್ಲಿ ಈಗಿರುವ ಖಾತೆಯ ಜೊತೆಗೆ ಮತ್ತೊಂದು ಬ್ಯಾಂಕ್ ಖಾತೆ ಸೇರ್ಪಡೆಯಾಗುತ್ತದೆ. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ, ಡಿಜಿಟಲ್ ಟ್ರಾನ್ಸ್ಯಾಕ್ಷನ್ ನಡೆಸಿ, ಆನ್ಲೈನ್ ಮೂಲಕ ಸರಳವಾಗಿ ಸುಲಭವಾಗಿ ಹಣ ಪಾವತಿ, ವರ್ಗಾವಣೆ ಮಾಡಬಹುದು.

Leave A Reply

Your email address will not be published.