Home latest Second Marriage : ಗಂಡನೊಬ್ಬ ಪತ್ನಿ ಆಸೆಯಂತೆ ಆಕೆಯ ಸ್ನೇಹಿತೆಯನ್ನು ವರಿಸಿದ, ಆ ಆಸೆ ಏನು...

Second Marriage : ಗಂಡನೊಬ್ಬ ಪತ್ನಿ ಆಸೆಯಂತೆ ಆಕೆಯ ಸ್ನೇಹಿತೆಯನ್ನು ವರಿಸಿದ, ಆ ಆಸೆ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆದ ಮೇಲೆ ಒಬ್ಬಳನ್ನೆ ಸಂಭಾಳಿಸೋದು ಕಷ್ಟ. ಇನ್ನು ಇಬ್ಬರನ್ನೂ ಮದುವೆಯಾದರೆ ಪರಿಸ್ಥಿತಿಯನ್ನು ಬಣ್ಣಿಸಬೇಕಾಗಿಲ್ಲ. ಅಲ್ಲಿ ಇಬ್ಬರು ಪತ್ನಿಯರ ನಡುವೆ ಮಾರಾಮಾರಿ ಫಿಕ್ಸ್ ಅಂತಾನೇ ಲೆಕ್ಕ. ಇವರಿಬ್ಬರ ಅವಸ್ಥೆಯಲ್ಲಿ ಗಂಡ ಪೇಚಿಗೆ ಸಿಲುಕಿ ಎಣ್ಣೆಗಾಯಿ ನೀರುಗಾಯಿ ಆದರೂ ಅಚ್ಚರಿಯಿಲ್ಲ. ಆದರೆ ನಾವು ಹೇಳ ಹೊರಟ ವಿಚಾರ ಕೇಳಿದರೆ ನಿಮಗೂ ಶಾಕ್ ಆಗೋದು ಪಕ್ಕಾ!!

 

ಅಷ್ಟಕ್ಕೂ ಏನಪ್ಪಾ ಕಹಾನಿ ಅಂತೀರಾ?? ಮೊದಲ ಹೆಂಡತಿ ಬದುಕಿದ್ದು ಗಂಡ ಎರಡನೇ ಮದುವೆಯಾದರೆ ಮನೆ ರಣರಂಗ ಆಗೋದರಲ್ಲಿ ಡೌಟೆ ಇಲ್ಲ. ಆದರೆ, ಇಲ್ಲಿ ಮಹಿಳೆಯೊಬ್ಬಳು ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆಗೆ ಎರಡನೇ ಮದುವೆಗೆ ಮಾಡಿಸಿದ್ದಾಳೆ. ಪತಿರಾಯ ಮೊದಲ ಪತ್ನಿಯ ಬಯಕೆಯ ಅನುಸಾರ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಇನ್ನೊಂದೆಡೆ ಪತ್ನಿಯನ್ನು ಖುಷಿಯಾಗಿರಿಸಲು ಸ್ನೇಹಿತೆಯನ್ನು ಎರಡನೆ ಮದುವೆಯಾಗಿದ್ದಾಗಿ ಆತ ಹೇಳಿಕೊಂಡಿದ್ದು, ಸದ್ಯ, ಈ ಕುರಿತ ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಇಬ್ಬರು ಹೆಂಡಿರ ಜೊತೆಗೆ ಮುದ್ದಿನ ಗಂಡನ ಸಂಭಾಷಣೆ ಎಲ್ಲರ ಗಮನ ಸೆಳೆದಿದೆ.

 

ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿರುವ ವ್ಯಕ್ತಿ , ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯನ್ನು ಪರಿಚಯಿಸಿ, ಆಕೆಯ ಬಯಕೆಯ ಬಗ್ಗೆ ಕೇಳುತ್ತಾನೆ. ಇದಕ್ಕೆ ಮೊದಲ ಪತ್ನಿ ತನ್ನ ಗೆಳತಿಯ ಜೊತೆಗೆ ನೀನು ಹೆಚ್ಚಿನ ಸಮಯವನ್ನು ಕಳೆಯಬೇಕೆಂದು ಜೊತೆಗೆ ತನ್ನ ಬಯಕೆಯನ್ನು ನೀನು ಪೂರೈ ಸಿದ್ದಿಯ ಎಂದು ಮೊದಲ ಪತ್ನಿ ಹೇಳುವುದು ವೀಡಿಯೊದಲ್ಲಿ ರೆಕಾರ್ಡ್ ಆಗಿದೆ.

 

ಇದಾದ ಬಳಿಕ, ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತ ಎರಡನೇ ಪತ್ನಿಯನ್ನು ತೋರಿಸಿ, ಈಕೆ ನನ್ನ ಮೊದಲ ಪತ್ನಿಯ ಸ್ನೇಹಿತೆ ಸಕಿನಾತ್ ಎಂದು ಪರಿಚಯಿಸುತ್ತಾನೆ. ಈ ವೇಳೆ ಮೊದಲ ಪತ್ನಿ ಜವಿಮ್​ ಅದು ನಾನಲ್ಲ ಎಂದು ಹೇಳಿದಾಗ ಸುಮ್ಮನಿರುವಂತೆ ಗಂಡ ಗದರುವ ವೀಡಿಯೋ ಕಂಡುಬರುತ್ತದೆ. ಅಂತಿಮವಾಗಿ, ಕ್ಯಾಮೆರಾವನ್ನು ಎರಡನೇ ಪತ್ನಿಯ ಕಡೆ ತಿರುಗಿಸಿ, ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್​ ಎಂದು ಗಂಡ ಹೇಳಿದ್ದು, ಈ ಸಂದರ್ಭ ಎರಡನೇ ಪತ್ನಿ ನಾಚಿ ನೀರಾಗಿದ್ದು ಗುಡ್​ಬೈ ಹೇಳುವ ಮೂಲಕ ವಿಡಿಯೋ ಮುಗಿಯುತ್ತದೆ.

 

ಸದ್ಯ, ಈ ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಶೇರ್​ ಆಗಿದ್ದು, ಈವರೆಗೂ 10 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋ ನೋಡಿದ್ದು, ನಿಜಕ್ಕೂ ಇದು ಹಾಸ್ಯಕ್ಕಾಗಿ ಮಾಡಿರುವ ವಿಡಿಯೋ ತುಣುಕುಗಳೇ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಈ ವೀಡಿಯೊ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದು, ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಹಿಂದಿನ ಅಸಲಿ ಕಹಾನಿ ಏನು ಎಂಬ ಮಾಹಿತಿ ಇನ್ನೂ ಬಯಲಾಗಿಲ್ಲ. ಆದರೂ ಕೂಡ ವಿಡಿಯೋ ಮಾತ್ರ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.