Home Breaking Entertainment News Kannada ‘ಓಂ’ ಮೇಲೆ ಕಾಲಿಟ್ಟು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರ ನಟ ಶ್ರೇಯಸ್? ಹಿಂದೂ ಪರ...

‘ಓಂ’ ಮೇಲೆ ಕಾಲಿಟ್ಟು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರ ನಟ ಶ್ರೇಯಸ್? ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ!

Hindu neighbor gifts plot of land

Hindu neighbour gifts land to Muslim journalist

ದೇಶದಲ್ಲಿ ಹಿಂದುತ್ವ ವಿಚಾರವಾಗಿ ಈ ಸಿನಿಮಾ ನಟ,
-ನಟಿಯರು, ನಿರ್ಮಾಪಕ- ನಿರ್ದೇಶಕರು ಆಗಾಗ ಏನಾದರು ಹೇಳಿಕೆ ನೀಡಿ ಅಥವಾ ಹಿಂದುತ್ವಕ್ಕೆ ವಿರುದ್ಧವಾದ ತತ್ವಗಳೊಂದಿಗೆ ಸಿನಿಮಾ ನಿರ್ಮಿಸಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಇಂತಹ ಪ್ರಕರಣ ಮುನ್ನಲೆಗೆ ಬಂದಿದ್ದು, ನಿರ್ಮಾಪಕ ಕಮ್ ನಿರ್ದೇಶಕ ಶ್ರೇಯಸ್ ತಲ್ಪಾಡೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

2012ರಲ್ಲಿ ಬಿಡುಗಡೆ ಕಂಡ ಶ್ರೇಯಸ್ ಅಭಿನಯದ ಕಮಾಲ್ ಧಮಾಲ್ ಮಲಾಮಾಲ್ ಚಿತ್ರದ 30 ಸೆಕೆಂಡ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಕ್ರಿಶ್ಚಿಯನ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಲಾರಿಯನ್ನು ನಿಲ್ಲಿಸಲು ತಮ್ಮ ಕಾಲನ್ನು ‘ಓಂ’ ಮೇಲೆ ಇಡುತ್ತಾರೆ. ಲಾರಿ ನಿಲ್ಲಿಸಿದ್ದು ತಪ್ಪಲ್ಲ ಆದರೆ ಅದರ ಮೇಲಿರುವ ಚಿನ್ನೆ ಮೇಲೆ ಕಾಲಿಟ್ಟಿರುವುದು ತಪ್ಪು ಎಂದು ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಗೊತ್ತಿಲ್ಲದೆ ಈ ರೀತಿ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ಇದು ಗೊತ್ತಿದ್ದು ಮಾಡಿರುವುದು. ಹಾಗಾಗಿ ನಟ ಕ್ಷಮೆ ಕೇಳಬೇಕು ಎಂದು ಹಿಂದೂ ವಾದಿಗಳು ಆಗ್ರಹಿಸಿದ್ದಾರೆ.

ಪ್ರಿಯಾ ದರ್ಶನ್ ನಿರ್ದೇಶನ ಮಾಡಿರುವ ಕಮಾಲ್ ಧಮಾಲ್ ಮಲಾಮಾಲ್ ಚಿತ್ರದಲ್ಲಿ 30 ಸೆಕೆಂಡ್ ದೃಶ್ಯದಲ್ಲಿ ಶ್ರೇಯಸ್‌ ಲಾರಿ ನಿಲ್ಲಿಸಲು ತಮ್ಮ ಕಾಲನ್ನು ಲಾರಿ ಗಾಜಿನ ಮೇಲೆ ಇಡುತ್ತಾರೆ ಆ ಜಾಗದಲ್ಲಿ ‘ಓಂ’ ಎಂದು ಸ್ಟಿಕರ್ ಹಾಕಲಾಗಿರುತ್ತದೆ. ಓಂ ಮೇಲೆ ಕಾಲಿಡುವ ಮೂಲಕ ಹಿಂದು ಭಾವನೆಗೆ ದಕ್ಕೆಯಾಗಿದೆ ಎನ್ನಲಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಶ್ರೇಯಸ್ ‘ಸಿನಿಮಾ ಶೂಟಿಂಗ್ ಮಾಡುವಾಗ ಹಲವಾರು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಆ ಸಮಯದಲ್ಲಿ ವ್ಯಕ್ತಿಯ ಮನಸ್ಥಿತಿ ಅದರಲ್ಲೂ ಆಕ್ಷನ್ ಸೀನ್‌ ಮಾಡುವಾಗ ಇಂತಹ ವಿಚಾರಗಳು ತುಂಬಾ ಮುಖ್ಯವಾಗುತ್ತದೆ. ನಿರ್ದೇಶಕರ ನಿರೀಕ್ಷೆ, ಸಮಯ ಪ್ರಜ್ಞೆ ಸೇರಿದಂತೆ ಹಲವು ವಿಚಾರಗಳು ಇರುತ್ತದೆ. ಆದರೆ ನಾನಿಲ್ಲಿ ಹಿಂದೆ ನಡೆದ ಘಟನೆಯನ್ನು ವಿವರಿಸುತ್ತಿಲ್ಲ ಅಥವಾ ಮಾಡಿದ ತಪ್ಪಿಗೆ ಸಮಜಾಯಿಷಿ ಕೊಡುತ್ತಿಲ್ಲ. ವಿಡಿಯೋದಲ್ಲಿ ನೋಡಿರುವುದು ಸತ್ಯ. ಆದರೆ ಅದು ಬೇಕೆಂದು ಮಾಡಿರುವುದಲ್ಲ. ಹೀಗಾಗಿ ನಾನು ದಯವಿಟ್ಟು ಕ್ಷಮೆ ಕೇಳುತ್ತೇನೆ. ಈ ವಿಚಾರವನ್ನು ನಾನು ನೋಡಿ ನಿರ್ದೇಶಕರ ಗಮನಕ್ಕೆ ತರಬೇಕಿತ್ತು. ಮತ್ತೊಬ್ಬರಿಗೆ ನೋವು ಮಾಡಬೇಕು ಅನ್ನೋದು ನನ್ನ ಉದ್ದೇಶವಿಲ್ಲ ಈ ರೀತಿ ಮತ್ತೆ ಮಾಡಬಾರದು ಅಂದುಕೊಂಡಿರುವೆ.’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮರಾಠಿ ಧಾರಾವಾಹಿ ಮೂಲಕ 1998ರಲ್ಲಿ ಶ್ರೀಯಸ್‌ ಬಣ್ಣದ ಜರ್ನಿ ಆರಂಭಿಸಿದ್ದರು. ಸೀರಿಯಲ್‌ನಲ್ಲಿ ಲೀಡ್‌ ಪಾತ್ರ ಪಡೆದುಕೊಂಡಿದ ಕಾರಣ ನಾಗೇಶ್‌ ನಿರ್ದೇಶನ ಮಾಡಿರುವ Iqbal ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಕ್ರಿಕೆಟರ್‌ ಆಗಬೇಕು ಎಂದು ಕನಸು ಕಂಡಿರುವ ಅಂದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್‌ ಜೊತೆ ಓಂ ಶಾಂತಿ ಓಂನಲ್ಲಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಶ್ರೀಯಶ್‌ ಕೈ ತುಂಬಾ ಆಫರ್‌ಗಳು ಸೇರಿತ್ತು.