Home News Jio Valentines Day offer : ಜಿಯೋ ಬಳಕೆದಾರರಿಗೆ ಬಂಪರ್ ಆಫರ್ | ಉಚಿತ 87GB...

Jio Valentines Day offer : ಜಿಯೋ ಬಳಕೆದಾರರಿಗೆ ಬಂಪರ್ ಆಫರ್ | ಉಚಿತ 87GB ಡೇಟಾ ಜೊತೆಗೆ ಮೆಕ್‌ಡೊನಾಲ್ಡ್ಸ್‌ ಚಿಕನ್ ಕಬಾಬ್, ಬರ್ಗರ್ ಫ್ರೀ ಫ್ರೀ !!

Hindu neighbor gifts plot of land

Hindu neighbour gifts land to Muslim journalist

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಎಲ್ಲಾ ಕಂಪನಿಗಳು ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿವೆ. ಓಕಿನಾವಾ ಆಟೋಟೆಕ್ ಕಂಪನಿ ತನ್ನ ಗ್ರಾಹಕರಿಗೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಸ್ಕೂಟರ್ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ಇದೀಗ ಸ್ಮಾರ್ಟ್ ಫೋನ್ ಗಳ ಸರದಿ. ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೊಸ ವ್ಯಾಲೆಂಟೈನ್ಸ್ ಡೇ ಕೊಡುಗೆಯನ್ನು ಪರಿಚಯಿಸಿದೆ.

ಈ ಯೋಜನೆಯಲ್ಲಿ ಬಳಕೆದಾರರು 87GB ವರೆಗೆ ಉಚಿತ ಮೊಬೈಲ್ ಡೇಟಾ ಪಡೆಯಬಹುದಾಗಿದೆ. ಅಲ್ಲದೆ, ರಿಲಯನ್ಸ್ ಜಿಯೋ ಬಳಕೆದಾರರು ಮೆಕ್‌ಡೊನಾಲ್ಡ್ಸ್‌ನಲ್ಲಿ 199 ರೂ.ಗಿಂತ ಅಧಿಕ ಬೆಲೆಯ ಆಹಾರ ಖರೀದಿ ಮಾಡಿದ್ರೆ 105 ರೂ ಮೌಲ್ಯದ ಚಿಕನ್ ಕಬಾಬ್ ಅಥವಾ ಮ್ಯಾಕ್‌ಆಲೂ ಟಿಕ್ಕಿ ಬರ್ಗರ್ ಅನ್ನು ಉಚಿತವಾಗಿ ಕ್ಲೈಂ ಮಾಡಬಹುದು. ಈ ಆಫರ್ ಅನ್ನು ಅಪ್ಲಿಕೇಶನ್ ಬಳಸಿಕೊಂಡು ಕೂಪನ್ ಮೂಲಕ ಪಡೆದುಕೊಳ್ಳಬಹುದು. ಇದಕ್ಕಾಗಿ MyJio ಅಪ್ಲಿಕೇಶನ್‌ಗೆ ಹೋಗಿ ಮತ್ತು ‘ಕೂಪನ್ಸ್ & ವಿನ್’ ಗೆ ನ್ಯಾವಿಗೇಟ್ ಮಾಡಬೇಕು.

ಹಾಗೆಯೇ ಇಕ್ಸಿಗೋದಲ್ಲಿ 4,500 ರೂ ಅಥವಾ ಅದಕ್ಕಿಂತ ಹೆಚ್ಚಿನ ಫ್ಲೈಟ್ ಬುಕಿಂಗ್‌ ಮಾಡಿದರೆ 750 ರೂಪಾಯಿವರೆಗೆ ರಿಯಾಯಿತಿ ಸಿಗಲಿದೆ. ಇನ್ನು ಫರ್ನ್ಸ್ & ಪೆಟಲ್ಸ್ ಅಪ್ಲಿಕೇಶನ್‌ನಿಂದ ಕಡಿಮೆ ಅಂದ್ರೆ 799 ರೂಪಾಯಿವರೆಗಿನ ಆರ್ಡರ್ ಮಾಡಿದ್ರೆ 150 ವರೆಗೆ ರಿಯಾಯಿತಿ ಲಭ್ಯವಾಗಲಿದೆ.

ಜಿಯೋ ಪ್ರಿಪೇಯ್ಡ್ ಯೋಜನೆ :

• ಜಿಯೋ ನೀಡಿರುವ ಈ ಆಫರ್ ನಲ್ಲಿ 249, 349, 899 ಮತ್ತು 2,999 ರ ಪ್ರಿಪೇಯ್ಡ್ ಯೋಜನೆಗಳು ಲಭ್ಯವಾಗಲಿದೆ.
• ಜಿಯೋ ಪರಿಚಯಿಸಿರುವ 249 ರೂ ಯೋಜನೆಯಲ್ಲಿ 2GB ದೈನಂದಿನ ಡೇಟಾ ಲಭ್ಯವಿದ್ದು, ಇದು 23 ದಿನಗಳ ಅವಧಿಯನ್ನು ಹೊಂದಿದೆ.
• 349 ರ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 2.5GB ಡೇಟಾವನ್ನು ಪಡೆಯಬಹುದು. ಇದರ ಅವಧಿ 30 ದಿನಗಳು ಆಗಿದೆ.
• 899 ರೂ. ಯೋಜನೆಯಲ್ಲಿ 2.5GB ದೈನಂದಿನ ಡೇಟಾವು 90 ದಿನಗಳವರೆಗೆ ಲಭ್ಯವಿರಲಿದೆ.
• 2,999 ಯೋಜನೆಯು ಬಳಕೆದಾರರಿಗೆ 2.5GB ದೈನಂದಿನ ಡೇಟಾವನ್ನುನೀಡುತ್ತದೆ. ಈ ಪ್ರಯೋಜನ 388 ದಿನಗಳವರೆಗೆ ಇರಲಿದೆ. ಹಾಗೆಯೇ ಈ ಯೋಜನೆಯಲ್ಲಿ 87GB ಉಚಿತ ಡೇಟಾ ಲಭ್ಯವಿದ್ದು, ಅನಿಯಮಿತ ಕರೆ ಮತ್ತು SMS ಸೌಲಭ್ಯವಿದೆ.