Home Breaking Entertainment News Kannada ಏರ್ ಪೋರ್ಟ್ ನಲ್ಲಿ ಜಿಮ್ ಬೇಕು- ಏನಿದು ಕಿರಿಕ್ ರಶ್ಮಿಕಾ ಮಂದಣ್ಣ ಹೊಸ ವರಸೆ!!!

ಏರ್ ಪೋರ್ಟ್ ನಲ್ಲಿ ಜಿಮ್ ಬೇಕು- ಏನಿದು ಕಿರಿಕ್ ರಶ್ಮಿಕಾ ಮಂದಣ್ಣ ಹೊಸ ವರಸೆ!!!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಈ ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ.
ಹೌದು ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಇನ್ನೊಂದು ಸುದ್ದಿ ನೆಟ್ಟಿಗರ ಟ್ರೊಲ್ ಗೆ ಸಿಕ್ಕಿದೆ.

ವಿಶೇಷವೆಂದರೆ ‘ಯಾಕೆ ವಿಮಾನ ನಿಲ್ದಾಣಗಳಲ್ಲಿ ಜಿಮ್‌ ಇಲ್ಲ? ಸುಮಾರು ಎರಡುವರೆ ಗಂಟೆಗಳ ಕಾಲ ವಿಮಾನಕ್ಕೆ ಕಾಯುವ ವ್ಯಕ್ತಿ ನಾನು’ ಎಂದು ರಶ್ಮಿಕಾ ಸಾರಾ ಲೀವೈನ್‌ ಎಂಬ ಖಾತೆಯಲ್ಲಿ ಅಪ್ಲೋಡ್ ಆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

‘ಫ್ಲೈಟ್‌ ಏರಲು ಎಷ್ಟೆಲ್ಲಾ ಸಿದ್ಧತೆ ಮಾಡಿಕೊಂಡು ನಾನು ಬಂದಿರುವೆ ಆದರೆ ಸುಮ್ಮನೆ ಒಂದು ಜಾಗದಲ್ಲಿ ಕುಳಿತುಕೊಂಡು ಏನು ಯೋಚನೆ ಮಾಡಬೇಕು?’ ಎಂದು ಬರೆಯಲಾಗಿದೆ.

ಈ ಫೋಸ್ಟ್‌ಗೆ ‘ಈ ಪೋಸ್ಟ್‌ನಲ್ಲಿರುವುದು ಸತ್ಯ ಅಲ್ಲವೇ? ಒಂದು ವೇಳೆ ಜಿಮ್ ನಿರ್ಮಾಣ ಮಾಡಿದ್ದರೆ ನನಗೆ ತುಂಬಾ ಉಪಯೋಗವಾಗುತ್ತದೆ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್‌ನ ನಟಿ ಕಾಜಲ್ ಅಗರ್ವಾಲ್ ಶೇರ್ ಮಾಡಿಕೊಂಡು ‘ನಾನು ಕೂಡ ಇದೇ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದೆ. ನನ್ನ ಹೆಚ್ಚಿನ ಸಮಯ ವೇಟಿಂಗ್‌ನಲ್ಲಿ ಹೋಗುತ್ತದೆ’ ಎಂದು ಬರೆದಿದ್ದಾರೆ.

‘ಎಲ್ಲರಿಗೂ ಇದೇ ಅಭಿಪ್ರಾಯವಿದ್ದರೆ ಖಂಡಿತ ಜಿಮ್ ನಿರ್ಮಾಣ ಮಾಡುತ್ತಾರೆ’ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಈ ಹೇಳಿಕೆಯಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಕುರಿತಂತೆ ಬಾಲಿವುಡ್ ಸಿನಿಮಾ ಸಹಿ ಮಾಡಿದ ಮೇಲೆ ನೀವು ಫಿಟ್ನೆಸ್‌ ಫ್ರೀಕ್ ಆಗಿದ್ದು ಅಲ್ಲಿವರೆಗೂ ವಿಜಯ್ ದೇವರಕೊಂಡ ಹಿಂದೆ ಇದ್ದವರು ಎಂದು ಕಾಮೆಂಟ್ ಮಾಡಿ ನಂತರ ನಗೆ ಪಾಟಲಿಯಾಗಿ ಸುಮ್ಮನೆ ಡವ್ ಮಾಡಬೇಡ ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಜಿಮ್ ಬಗ್ಗೆ ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ಅವರ ಇತ್ತೀಚಿನ ಸಂಭಾಷಣೆಯು ಅವರಿಬ್ಬರೂ ಫಿಟ್ನೆಸ್ ಫ್ರೀಕ್ಸ್ ಎಂದು ಸಾಬೀತುಪಡಿಸುತ್ತದೆ.