ಚುನಾವಣೆಯಲ್ಲಿ ಸ್ಪರ್ಧಿಸಲು ‘ಶಾಫಿ ಬೆಳ್ಳಾರೆಗೆ ಅವಕಾಶ ನೀಡಬಾರದು- ಪ್ರವೀಣ್ ನೆಟ್ಟಾರು ಪೋಷಕರ ಆಗ್ರಹ
ಪುತ್ತೂರು: ಶಾಫಿ ಬೆಳ್ಳಾರೆಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪ್ರವೀಣ್ ನೆಟ್ಟಾರು ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಆಗ್ರಹಿಸಿರುವುದಾಗಿ ವರದಿಯಾಗಿದೆ.
ಅನ್ಯಾಯವಾಗಿ ನಮ್ಮ ಮಗನನ್ನು ಕೊಂದ ಪಾಪಿ ಆತ. ಯಾವುದೇ ಅಧಿಕಾರ ಇಲ್ಲದ ಸಂದರ್ಭ ಆತ ನಮ್ಮ ಮಗನನ್ನು ಕೊಂದ. ನಾಳೆ ಅಧಿಕಾರ ಪಡೆದ ಬಳಿಕ ಎಲ್ಲರನ್ನೂ ಕೊಲ್ಲುತ್ತಾನೆ ಎಂದು ಅವರು ಭಯ ವ್ಯಕ್ತಪಡಿಸಿದ್ದಾರೆ.
ನಮಗೆ ಮನೆಯಿಂದ ಹೊರಗೆ ಹೋಗಲಾರದಂತ ಸ್ಥಿತಿಯನ್ನು ಶಾಫಿ ಬೆಳ್ಳಾರೆ ನಿರ್ಮಿಸಬಹುದು. ನಮಗೆ ಇದ್ದ ಒಬ್ಬನೇ ಮಗನನ್ನು ಮುಗಿಸಿದ ಪಾಪಿ ಆತ. ಈಗ ನಮಗೆ ಇಬ್ಬರಿಗೂ ಆರೋಗ್ಯ ಚೆನ್ನಾಗಿಲ್ಲ. ನನಗೆ ಮೂರು ಬಾರಿ ಹಾರ್ಟ್ ಆಪರೇಷನ್ ಆಗಿದೆ. ಕಣ್ಣು ಕಾಣುವುದಿಲ್ಲ, ಕಿವಿ ಕೇಳೋದಿಲ್ಲ. ನಮ್ಮನ್ನು ಈ ಸ್ಥಿತಿಗೆ ತಂದ ಆರೋಪಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲೇಬಾರದು ಎಂದು ಶೇಖರ ಪೂಜಾರಿ ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.