Home latest ಫೆ.14-ಫೆ.15 : ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಜ್ಯಪಾಲ ಗೆಹ್ಲೋಟ್‌ ಭೇಟಿ

ಫೆ.14-ಫೆ.15 : ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಜ್ಯಪಾಲ ಗೆಹ್ಲೋಟ್‌ ಭೇಟಿ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮಂಗಳವಾರ ಮತ್ತು ಬುಧವಾರ ಕರಾವಳಿಯ ತೀರ್ಥಕ್ಷೇತ್ರಗಳ ದರ್ಶನ ಮಾಡಲಿದ್ದಾರೆ.

ಫೆ.14ಮಂಗಳವಾರ ಪೂರ್ವಾಹ್ನ 8ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 1 ಗಂಟೆಗೆ ಮೂಡಿಗೆರೆ ಅತಿಥಿ ಗೃಹಕ್ಕೆ ಬರುವರು.

ಅಪರಾಹ್ನ 3.30ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬಂದು ದೇವರ ದರ್ಶನದ ಬಳಿಕ ಸಂಜೆ 5ಕ್ಕೆ ಧರ್ಮಸ್ಥಳ ತಲುಪುವರು. ರಾತ್ರಿ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವರು. ಫೆ.15 ಬುಧವಾರ ಬೆಳಗ್ಗೆ ದೇವರ ದರ್ಶನದ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನವಜೀವನ ಸಮಾವೇಶದಲ್ಲಿ ಭಾಗವಹಿಸುವರು. ಅಪರಾಹ್ನ 3 ಗಂಟೆಗೆ ಧರ್ಮಸ್ಥಳದಿಂದ ಹೊರಟು ರಾತ್ರಿ ಕುದುರೆಮುಖದಲ್ಲಿ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ತಂಗುವರು ಎಂದು ಪ್ರಕಟನೆ ತಿಳಿಸಿದೆ.