Home Breaking Entertainment News Kannada ತುಪ್ಪದ ಬೆಡಗಿ ನೀಡಿದ್ರು ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌!

ತುಪ್ಪದ ಬೆಡಗಿ ನೀಡಿದ್ರು ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌!

Hindu neighbor gifts plot of land

Hindu neighbour gifts land to Muslim journalist

ಪಡ್ಡೆ ಹುಡುಗರ ಹೃದಯದಲ್ಲಿ ಥಕಥೈ ಎಂದು ನಿದ್ದೆಗೆಡಿಸಿದ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದ ರಾಗಿಣಿ ದ್ವಿವೇದಿ ಕೆಲ ಕಾಲ ಬಣ್ಣದ ಲೋಕದಿಂದ ದೂರ ಉಳಿದು ಮತ್ತೆ ಕಮ್ ಬ್ಯಾಕ್ ಆಗಿ ಮತ್ತೆ ಬಣ್ಣ ಹಚ್ಚಿ ಅಭಿಮಾನಿಗಳ ಮನದಲ್ಲಿ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಇದೀಗ, ರಾಗಿಣಿ ದ್ವಿವೇದಿ ಅಭಿಮಾನಿಗಳಲ್ಲಿ ನಟಿಯ ಮದುವೆ ಯಾವಾಗ ಎಂಬ ಕುತೂಹಲ ಮನೆ ಮಾಡಿದೆ.ಸ್ಯಾಂಡಲ್‌ವುಡ್‌ ನಟಿ ರಾಗಿಣಿ ತುಪ್ಪ ಬೇಕಾ ತುಪ್ಪ ಎಂಬ ಸಾಂಗ್ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದ ಬೆಡಗಿ. ಎಲ್ಲ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೂ ತಪ್ಪಾಗಲಾರದು. ಈ ನಡುವೆ ಇದ್ದಕ್ಕಿದ್ದಂತೆ ದಪ್ಪ ಆಗಿದ್ದ ತುಪ್ಪದ ಬೆಡಗಿ ಕೆಲ ಕಾಲ ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡು ಸದ್ಯ ತಮ್ಮ ತೂಕ ಇಳಿಸಿಕೊಂಡು ಬಣ್ಣ ಹಚ್ಚಿ ತೆರೆ ಮೇಲೆ ರಂಜಿಸಲು ರೆಡಿ ಆಗಿದ್ದು, ನೋಡೋಕೆ ನೀವು ರೆಡಿನಾ ಅನ್ನೋ ಹಾಗೆ ಸದ್ಯ, ರಾಗಿಣಿ ದ್ವಿವೇದಿ ಮೊದಲಿನಂತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಈಗ ಪರಭಾಷೆ ಚಿತ್ರಗಳಲ್ಲಿ ಕೂಡಾ ಅವರಿಗೆ ಆಫರ್‌ಗಳು ಅರಸಿಕೊಂಡು ಬರುತ್ತಿದ್ದು ಬಾಲಿವುಡ್ನಲ್ಲಿ ಕೂಡ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಡುವೆ ಅಭಿಮಾನಿಗಳಲ್ಲಿ ರಾಗಿಣಿ ಹಸೆಮಣೆ ಏರುವ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದ್ದು, ಯಾವಾಗ ನಟಿ ನಮಗೆ ಶುಭ ಸುದ್ದಿ ನೀಡುತ್ತಾರೋ ಎಂದು ಎದುರು ನೋಡುತ್ತಿದ್ದಾರೆ.

ರಾಗಿಣಿ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಹೆಚ್ಚಿನ ಆಸಕ್ತಿ ತೋರೋದು ಗೊತ್ತಿರುವ ವಿಚಾರವೇ!! ಇದರ ನಡುವೆ ಸಮಾಜಮುಖಿ ಕಾರ್ಯಗಳ ಮೂಲಕ ಹೆಚ್ಚು ತೊಡಗಿಸಿಕೊಂಡು ಎಷ್ಟೋ ಜನರ ಪಾಲಿಗೆ ಬಾಳಿನ ಜ್ಯೋತಿ ಯಾಗಿದ್ದಾರೆ. ಅಷ್ಟೆ ಅಲ್ಲದೇ, ಮಂಗಳ ಮುಖಿಯರು ಎಂದರೇ ಸಾಕು ಅವರ ಬಗ್ಗೆ ಅಸಡ್ಡೆ ತೋರುವವರೆ ಹೆಚ್ಚು. ಆದರೆ, ತುಪ್ಪದ ಬೆಡಗಿ ಅವರ ಏಳಿಗೆಗು ನೆರವಾಗುತ್ತಿದ್ದು, ಒಟ್ಟಿನಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿರುವ ನಟಿ ಸಮಾಜಕ್ಕೆ ಜೊತೆಗೆ ಬಡವರಿಗೆ ನೆರವಾಗಬೇಕೆಂದು ಸದಾ ಅವರ ಮನ ತುಡಿಯುತ್ತಿರುತ್ತದೆ.

ಇದೆಲ್ಲದರ ನಡುವೆ ರಾಜಕೀಯ ರಣರಂಗಕ್ಕೂ ರಾಗಿಣಿ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಇದು ನಿಜವಾಗಿದ್ದರೆ ಅಭಿಮಾನಿಗಳಿಗೆ ನಿರಾಶೆಯಾಗೋದು ಫಿಕ್ಸ್.ಅರೇ, ಯಾಕಪ್ಪಾ ಅಂತೀರಾ?? ತುಪ್ಪದ ಬೆಡಗಿ ಮದ್ವೆ ಬಗ್ಗೆ ಆಲೋಚನೆ ಮಾಡಿರುವಂತೆ ಸದ್ಯಕ್ಕಂತೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಪಾಪ!! ಹೀಗಾಗಿ, ರಾಗಿಣಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ರಾಗಿಣಿ ಮದ್ವೆ ಆಗ್ತಾರಾ ಇಲ್ವಾ ಎಂಬ ಗೊಂದಲದಲ್ಲಿದ್ದಾರೆ. ಈ ಪ್ರಶ್ನೆಗೆ ತುಪ್ಪದ ಬೆಡಗಿಯ ಉತ್ತರ ಏನಾಗಿರಲಿದೆ ಎಂದು ಕಾತುರದಿಂದ ಎದುರು ನೋಡಬೇಕಾಗಿದೆ.