ಅತೀ ವೇಗದ ಎಲೆಕ್ಟ್ರಿಕ್​ ಸ್ಕೂಟರ್ ಗಳಿವು | ಇವುಗಳ ಸಂಪೂರ್ಣ ವಿವರ ಇಲ್ಲಿದೆ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಗಳು ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಜನರು ಇವುಗಳ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಸದ್ಯ ಅತೀ ವೇಗದ ಎಲೆಕ್ಟ್ರಿಕ್​ ಸ್ಕೂಟರ್ ಗಳ ವಿವರ ಇಲ್ಲಿ ನೀಡಲಾಗಿದೆ.

ಓಲಾ ಎಲೆಕ್ಟ್ರಿಕ್ : ಈ ಸ್ಕೂಟರ್ ನಲ್ಲಿ, Ola S1 Pro ಮಾದರಿಯು 116 kmph ವೇಗವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. 1,29,999 ಆಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 181 ಕಿ.ಮೀ. ದೂರ ಪ್ರಯಾಣಿಸಬಹುದು. ಇದು ವೇಗದ ಸ್ಕೂಟರ್​ಗಳಲ್ಲಿ ಒಂದಾಗಿದೆ.

ಬಜಾಜ್ ಚೇತಕ್ : ಇದರ ಬೆಲೆ 1.47 ಲಕ್ಷ ರೂಪಾಯಿ ಆಗಿದ್ದು,
ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 95 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದ್ದು, ಇದು 4.2 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ.

ಟಿವಿಎಸ್ ಐಕ್ಯೂಬ್ : ಈ ಎಲೆಕ್ಟ್ರಿಕ್ ಸ್ಕೂಟರ್ ವೇಗದ ಸ್ಕೂಟರ್ ಆಗಿದ್ದು, ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಚಲಿಸುತ್ತದೆ. ಗರಿಷ್ಠ ವೇಗ ಗಂಟೆಗೆ 78 ಕಿಲೋಮೀಟರ್ ಆಗಿದ್ದು, 4.5 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ. ಇದರ ಬೆಲೆ ರೂ. 1.65 ಲಕ್ಷ ಆಗಿದೆ.

Ola S1 ಏರ್ : ಈ ಮಾದರಿಯು ವೇಗದ ಸ್ಕೂಟರ್ ಆಗಿದ್ದು, ಇದರ ವೇಗವು 101 ಕಿಲೋಮೀಟರ್ ಆಗಿದ್ದು, ಗರಿಷ್ಠ ವೇಗದ ಗಂಟೆಗೆ 90 ಕಿಲೋಮೀಟರ್ ಆಗಿದೆ. ಇದರ ಬೆಲೆ ರೂ. 79,999 ಆಗಿದೆ. Ola S1 ಏರ್ ಸ್ಕೂಟರ್ 4.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ.

ಈಥರ್ 450X : ಈ ಎಲೆಕ್ಟ್ರಿಕ್ ಸ್ಕೂಟರ್ 7 ಇಂಚಿನ ಡ್ಯಾಶ್‌ಬೋರ್ಡ್ ಹೊಂದಿದೆ. ಇದರ ವೇಗವು ಒಟ್ಟು 146 ಕಿಲೋಮೀಟರ್. ಹಾಗೆಯೇ ಇದು 3.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ಆಗಿದ್ದು, ಈ ಸ್ಕೂಟರ್ ನ ಬೆಲೆ ರೂ. 1.5 ಲಕ್ಷ ಇರಲಿದೆ.

ಫಾಸ್ಟ್ ಎಫ್ : Okaya EV ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಆರಂಭಿಕ ಬೆಲೆ 99,999 ರೂಪಾಯಿ ಆಗಿದೆ. ಇದರ ವೇಗವು ಒಟ್ಟು 125 ಕಿಲೋಮೀಟರ್ ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದೆ. ಇವು ಅತಿ ವೇಗ ಇರುವ ಸ್ಕೂಟರ್ ಆಗಿದೆ.

Leave A Reply

Your email address will not be published.