Senior Citizens FD : ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್‌ಗಳಿವು | ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಬೆಸ್ಟ್ !
ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಆದರೆ ಹಿರಿಯ ನಾಗರೀಕರ ಎಫ್‌ಡಿಗೆ ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್‌ಗಳ ಲಿಸ್ಟ್ ಇಲ್ಲಿ ನೀಡಲಾಗಿದೆ. ಇವುಗಳು ಸುರಕ್ಷಿತ ಮತ್ತು ಉತ್ತಮ ಬಡ್ಡಿದರವನ್ನೂ ನೀಡುತ್ತವೆ.
ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಉತ್ತಮ ಆಯ್ಕೆಯಾಗಿದ್ದು, ತುರ್ತು ಫಂಡ್ ನಿರ್ವಹಣೆ ಮಾಡಲು ಬಯಸುವವರಿಗೆ ಈ ಎಫ್‌ಡಿ ಉತ್ತಮ ಹೂಡಿಕೆ ಆಯ್ಕೆ ಆಗಿದೆ. ಇದು ತೆರಿಗೆ ಹೊರೆ ಕಡಿಮೆಯಾಗಿಸುತ್ತದೆ. ಹಾಗೇ ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ್ದು, ಇದರ ಬೆನ್ನಲ್ಲೇ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸುತ್ತಿದೆ. ಜೊತೆಗೆ ಸಾಲದ ಬಡ್ಡಿದರ ಕೂಡ ಏರಿಕೆ ಆಗುತ್ತಿದೆ. ಹಾಗಾಗಿ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರ ಉತ್ತಮ ಆಯ್ಕೆಯಾಗಿದೆ.
ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಈ ಬಡ್ಡಿದರ ಸಾಮಾನ್ಯ ನಾಗರಿಕರಿಗಿಂತ ಶೇ. 50 ರಷ್ಟು ಅಧಿಕ ಇರುತ್ತದೆ. ಎಫ್‌ಡಿಯಲ್ಲಿ ಡೆಪಾಸಿಟ್ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ 5 ಲಕ್ಷ ರೂಪಾಯಿ ಆಗಿದೆ.
ಬಂಧನ್ ಬ್ಯಾಂಕ್ 1 ವರ್ಷ, 7 ತಿಂಗಳು, 22 ದಿನಗಳ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇ. 8.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೇ ಆಕ್ಸಿಸ್ ಬ್ಯಾಂಕ್ 2 ವರ್ಷ 30 ತಿಂಗಳ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಬಡ್ಡಿದರ ನೀಡುತ್ತದೆ. ಯೆಸ್ ಬ್ಯಾಂಕ್ 35 ತಿಂಗಳ ಮತ್ತು 25 ತಿಂಗಳ ಎಫ್‌ಡಿ ಮೇಲೆ ಕ್ರಮವಾಗಿ ಶೇಕಡ 8.25 ಮತ್ತು ಶೇಕಡ 8.00ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗಯೇ ಐಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 3 ವರ್ಷ 18 ತಿಂಗಳು 1 ದಿನ ಎಫ್‌ಡಿ ಮೇಲೆ ಶೇ. 8.00ರಷ್ಟು ಬಡ್ಡಿದರ ನೀಡುತ್ತದೆ.
ಇಂಡಸ್‌ಇಂಡ್ ಬ್ಯಾಂಕ್ ಅವಧಿ ಆಧರಿಸಿ ಬಡ್ಡಿದರ ನೀಡಲಿದ್ದು, ಶೇಕಡ 8.25ರಿಂದ ಶೇಕಡ 8.00ರವರೆಗೆ ಬಡ್ಡಿದರವನ್ನು ನೀಡುತ್ತದೆ. ಅಲ್ಲದೆ, ಸೂರ್ಯೋದಯ ಬ್ಯಾಂಕ್ 1 ವರ್ಷ 6 ತಿಂಗಳಿನಿಂದ 2 ವರ್ಷದ ಎಫ್‌ಡಿ ಮೇಲೆ ಶೇಕಡ 8.51ರಷ್ಟು ಬಡ್ಡಿದರ ನೀಡುತ್ತದೆ. ಆರ್‌ಬಿಎಲ್ ಬ್ಯಾಂಕ್ 15 ತಿಂಗಳ ಎಫ್‌ಡಿ ಮೇಲೆ ಶೇಕಡ 8.30ರಷ್ಟು ಬಡ್ಡಿದರ ನೀಡುತ್ತದೆ.
ಇನ್ನು ಡಿಸಿಬಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಅವಧಿ ಆಧರಿಸಿ ಎಫ್‌ಡಿ ಬಡ್ಡಿದರ ನೀಡಲಿದ್ದು, ಶೇಕಡ 8.00ರಿಂದ ಶೇಕಡ 8.35ರಷ್ಟು ಬಡ್ಡಿದರವನ್ನು 18 ತಿಂಗಳಿನಿಂದ 120 ತಿಂಗಳ ಎಫ್‌ಡಿ ಮೇಲೆ ನೀಡುತ್ತದೆ. ಹಾಗೆಯೇ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 888 ದಿನಗಳ ಎಫ್‌ಡಿ ಮೇಲೆ ಶೇಕಡ 8.5ರಷ್ಟು ಬಡ್ಡಿದರ ನೀಡುತ್ತದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 80 ವಾರಗಳ ಎಫ್‌ಡಿ ಮೇಲೆ ಶೇಕಡ 8.75ರಷ್ಟು ಬಡ್ಡಿದರ ನೀಡುತ್ತದೆ. ಇವುಗಳು ಹಿರಿಯ ನಾಗರೀಕರಿಗೆ ಹೂಡಿಕೆ ಮಾಡಲು ಇರುವ ಉತ್ತಮ ಬ್ಯಾಂಕ್ ಗಳಾಗಿವೆ.