Home Interesting ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ...

ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ ಉತ್ತರ!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನ ಭದ್ರಾಪುರ ಗ್ರಾಮದಲ್ಲಿನ ಬೀದಿಬದಿಯಲ್ಲಿ ಅಮಿತಾಬ್, ಶಾರುಖ್, ಸಲ್ಮಾನ್ ಅಡ್ಡಾದಿಡ್ಡಿ ಓಡಾಡುತ್ತಾರಂತೆ. ಅಬ್ಬಾ!! ನಿಜಾನಾ? ಇದು. ಹೌದು, ಅಮಿತಾಬ್, ಶಾರುಖ್, ಸಲ್ಮಾನ್ ಇವರಷ್ಟೇ ಅಲ್ಲ, ಈ ಗ್ರಾಮದಲ್ಲಿ ಪ್ರಸಿದ್ಧ ಆಟಗಾರರು, ರಾಜಕಾರಣಿಗಳೂ ಓಡಾಡುತ್ತಾರೆ. ಏನಪ್ಪಾ ಇದು, ಆಶ್ಚರ್ಯವಾಗಿದೆ ಅಲ್ವಾ!!. ಹಾಗಿದ್ರೆ ಇದರ ಅಸಲಿಯತ್ತೇನು? ಎಂದು ನೋಡೋಣ.

ಬೆಂಗಳೂರಿನ ಈ ಗ್ರಾಮದಲ್ಲಿ ಹಕ್ಕಿ-ಪಿಕ್ಕಿ ಎಂಬ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ. ಈ ಬುಡಕಟ್ಟಿನ ಜನರು ಮೂಲತಃ ಕಾಡುಗಳಲ್ಲಿ ವಾಸಿಸುತ್ತಿದ್ದರು. ಆದರೆ 1970 ರ ದಶಕದಲ್ಲಿ, ಕರ್ನಾಟಕ ಸರ್ಕಾರವು ಈ ಜನರನ್ನು ಮುಖ್ಯವಾಹಿನಿಗೆ ಸೇರಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿತು. ಹಾಗಾಗಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಇಲ್ಲಿನ ಜನರ ಹೆಸರು ಏನು ಅಂದ್ರೆ ಹಣ್ಣು ಮತ್ತು ಪ್ರಾಣಿಗಳ ಹೆಸರೇ ಇವರ ಹೆಸರುಗಳು. ಕಾಡಿನಲ್ಲಿದ್ದ ಕಾರಣ ಅಲ್ಲಿಗೆ ಸಂಬಂಧಿಸಿದ ಹೆಸರನ್ನು ಆಯ್ಕೆ ಮಾಡಿ ಇಟ್ಟುಕೊಂಡಿದ್ದರು. ಕ್ರಮೇಣ ಪ್ರಪಂಚದ ಜ್ಞಾನ ತಿಳಿದು ಹಾಗೇ ಈ ಜನರು ತಮ್ಮ ಮಕ್ಕಳಿಗೆ ಪ್ರಸಿದ್ಧ ವಿಷಯಗಳು ಮತ್ತು ವ್ಯಕ್ತಿತ್ವಗಳ ಹೆಸರನ್ನು ಇಡಲು ಪ್ರಾರಂಭಿಸಿದರು. ಹಾಗಾಗಿ ತಮ್ಮ ಮಕ್ಕಳಿಗೆ ಸೆಲೆಬ್ರಿಟಿಗಳ ಹೆಸರನ್ನು ಇಟ್ಟಿದ್ದು, ಅಮಿತಾಬ್, ಸಲ್ಮಾನ್, ಶಾರುಖ್ ಮತ್ತು ಅಮೀರ್ ಎಂದೆಲ್ಲಾ ಹೆಸರಿಟ್ಟಿದ್ದಾರೆ. ಈ ಮಕ್ಕಳೆಲ್ಲಾ ಸೆಲೆಬ್ರಿಟಿಗಳ ಹೆಸರನ್ನು ಇಟ್ಟುಕೊಂಡು ಬೀದಿಗಳಲ್ಲಿ ಓಡಾಡುತ್ತಾರೆ.

ಸೆಲೆಬ್ರಿಟಿಗಳ ಹೆಸರು ಮಾತ್ರವಲ್ಲದೆ, ಈ ಗ್ರಾಮದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್, ಗೂಗಲ್, ಒಬಾಮಾ ಮತ್ತು ಕಾಂಗ್ರೆಸ್ ಎಂಬ ಹೆಸರಿನ ಮಕ್ಕಳೂ ಇದ್ದಾರೆ. ನಗರಕ್ಕೆ ಬಂದು ನಂತರ ಅಲ್ಲಿನ ಜನರು ಈ ಹೆಸರನ್ನು ಇಡಲು ಪ್ರಾರಂಭಿಸಿದ್ದು, ಕ್ರೀಡಾಪಟುಗಳ ಬಗ್ಗೆ ತಿಳಿದು ಅವರು ಹೆಸರಿಟ್ಟರು ಹಾಗೇ ರಾಜಕಾರಣಿಗಳ ಹೆಸರು ತಿಳಿದು ಹೆಸರಾಂತ ರಾಜಕಾರಣಿಗಳ ಹೆಸರಿಡಲು ಆರಂಭಿಸಿದ್ದಾರೆ.

ಇದಿಷ್ಟೇ ಅಲ್ಲ, ನೀವಿಂತಹ ಹೆಸರು ಮನುಷ್ಯರಿಗಿರೋದು ಕೇಳಿರೋದೇ ಇಲ್ಲಾ. ಅಂತಹ‌ ಹೆಸರಿಡುತ್ತಾರೆ. ಯಾವುದು ಗೊತ್ತಾ ಆ ಹೆಸರು? ಅದುವೇ ವಿದೇಶಿ ಕಂಪನಿಗಳ ಹೆಸರು, ಎಲಿಜಬೆತ್, ಕಾಫಿ ಮತ್ತು ಮೈಸೂರ್ ಪಾರ್ಕ್, ಅಮೇರಿಕಾ, ಜಪಾನ್ ಮತ್ತು ರಷ್ಯಾ ಇವೆಲ್ಲಾ ಹೆಸರಿನ ಮಕ್ಕಳು ಇಲ್ಲಿದ್ದಾರೆ.