ಕೂದಲು ಸರಿಯಾಗಿ ಬಾಚಿದರೆ ದೊರಕುತ್ತೆ ಈ ಐದು ಲಾಭ!
ಕೂದಲು ಒಳಚರ್ಮ ಅಥವಾ ಚರ್ಮದಲ್ಲಿ ಕಂಡುಬರುವ ಕೋಶಕಗಳಿಂದ ಬೆಳೆಯುವ ಒಂದು ಪ್ರೋಟೀನ್ ಎಳೆ. ಕೂದಲು ಸಸ್ತನಿಗಳ ನಿರ್ಧಾರಕ ಗುಣಲಕ್ಷಣಗಳಲ್ಲೊಂದು. ಮಾನವ ಶರೀರವು, ರೋಮರಹಿತ ಚರ್ಮ ಪ್ರದೇಶಗಳನ್ನು ಹೊರತುಪಡಿಸಿ, ದಪ್ಪನೆಯ ಅಂತ್ಯ ಹಾಗೂ ನಯವಾದ ವೆಲಸ್ ರೋಮವನ್ನು ಉತ್ಪಾದಿಸುವ ಕೋಶಕಗಳಿಂದ ಮುಚ್ಚಲ್ಪಟ್ಟಿರುತ್ತದೆ.
ಸದ್ಯ ಮನೆಯಲ್ಲಿಯೇ ಕುಳಿತು ಕೆಲವು ಸರಳವಾದ ಕೂದಲಿನ ದಿನಚರಿಯನ್ನು ಮಾಡುವ ಮೂಲಕ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿ ಮಾಡಬಹುದು. ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಮೃದು ಮತ್ತು ಸ್ಟ್ರಾಂಗ್ ಆಗುತ್ತದೆ. ಇದಕ್ಕೆ ಸಾಕಷ್ಟು ಅಲಂಕಾರಿಕ ಉತ್ಪನ್ನಗಳ ಅಗತ್ಯವಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಹಾಗಲ್ಲ, ಮನೆಯಲ್ಲಿ ಸುಲಭವಾಗಿ ದೊರೆಯುವ ಎಣ್ಣೆಯ ಸಹಾಯದಿಂದ ಮಾತ್ರ ನಿಮ್ಮ ಕೂದಲನ್ನು ಗಟ್ಟಿಯಾಗಿ ಮತ್ತು ಹೊಳೆಯುವಂತೆ ಮಾಡಬಹುದು. ಜೊತೆಗೆ ಕೂದಲಿನ ಬಾಚುವ ವಿಧಾನ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು.
ಅದಲ್ಲದೆ ಬೇಸಿಗೆಯಲ್ಲಿ ಅನೇಕರು ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ. ಆದರೆ, ಅಪ್ಪಿತಪ್ಪಿಯೂ ಇಂತಹ ತಪ್ಪು ಮಾಡಬೇಡಿ. ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಅತ್ಯಗತ್ಯ. ಇದರೊಂದಿಗೆ ಕನಿಷ್ಠ 20 ನಿಮಿಷಗಳ ಕಾಲ ಕೂದಲನ್ನು ಮಸಾಜ್ ಮಾಡಿ. ನಿಮ್ಮ ಕೂದಲಿಗೆ ಅನುಗುಣವಾಗಿ ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಇತ್ಯಾದಿ ಯಾವುದೇ ಎಣ್ಣೆಯನ್ನು ನೀವು ಆಯ್ಕೆ ಮಾಡಬಹುದು.
ಕೆಲವರು ಸೋಮಾರಿತನ ಅಥವಾ ಸಮಯದ ಅಭಾವದಿಂದ ಕೂದಲು ಬಾಚಿಕೊಳ್ಳದ ಮಹಿಳೆಯರು ನಮ್ಮಲ್ಲಿ ಹಲವರಿದ್ದಾರೆ. ಇದರಿಂದ ಕೂದಲು ಅಸ್ತವ್ಯಸ್ತವಾಗಿ ಕಾಣುತ್ತದೆ ಮತ್ತು ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು ಕೂದಲಿಗೆ ಬಾಚಣಿಗೆ ಏಕೆ ಅಗತ್ಯ, ಇದು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಕೂದಲು ನೆತ್ತಿಯಿಂದಲೇ ಪೋಷಕಾಂಶಗಳನ್ನು ಪಡೆಯುತ್ತದೆ. ಇದರೊಂದಿಗೆ, ತಲೆಯಲ್ಲಿ ಉತ್ತಮ ರಕ್ತ ಪರಿಚಲನೆಯು ತುಂಬಾ ಮುಖ್ಯವಾಗಿದೆ, ಇದು ಕೂದಲಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ನೆತ್ತಿಯಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೆ, ಕೂದಲಿನ ಕಿರುಚೀಲಗಳು ಮುಚ್ಚಿಹೋಗುತ್ತವೆ ಮತ್ತು ಈ ಸ್ಥಿತಿಯು ನೆತ್ತಿಯಲ್ಲಿ ನೋವಿಗೆ ಕಾರಣವಾಗುತ್ತದೆ.
ಅಲ್ಲದೆ ಬಹಳ ದಿನಗಳಿಂದ ಕೂದಲನ್ನು ತೊಳೆಯದೇ ಇರುವಾಗ ಅಥವಾ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಿಕೊಳ್ಳದೇ ಇರುವಾಗ ಅಥವಾ ಕೂದಲು ಬಾಚಿಕೊಳ್ಳದೇ ಇರುವಾಗ ನಿಮ್ಮ ಕೂದಲಿಗೆ ಬೆರಳು ಹಾಕಿದಾಗ ನೋವಾಗುವುದನ್ನು ನೀವು ಹಲವು ಬಾರಿ ಗಮನಿಸಿರಬಹುದು. ರಕ್ತ ಪರಿಚಲನೆಯು ಸುಗಮವಾಗಿರದಿದ್ದಾಗ ಇದು ಸಂಭವಿಸುತ್ತದೆ.
ಮುಖ್ಯವಾಗಿ ರಾತ್ರಿ ಮಲಗುವ ಮುನ್ನ ಕೂದಲು ಬಾಚಿಕೊಂಡರೆ ತೊಂದರೆ ಇಲ್ಲ. ಆದರೆ ರಾತ್ರಿ ಮಲಗುವ ಮುನ್ನ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ರಕ್ತಸಂಚಾರ ಸರಿಯಾಗಿಲ್ಲದ ಕಾರಣ ತಲೆನೋವು ಕೂಡ ಉಂಟಾಗುತ್ತದೆ. ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟುವುದರಿಂದ ಬೇರುಗಳಿಂದ ಕೂದಲು ದುರ್ಬಲಗೊಳ್ಳಬಹುದು.
ನಿಮ್ಮ ಕೂದಲು ಒದ್ದೆಯಾಗಿದ್ದರೆ, ಅದು 90 ಪ್ರತಿಶತ ಒಣಗುವವರೆಗೆ ಬಾಚಿಕೊಳ್ಳಬೇಡಿ. ಒದ್ದೆ ಕೂದಲನ್ನು ಬಾಚಿಕೊಳ್ಳುವುದರಿಂದ ಒಡೆಯಬಹುದು.ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿದ ನಂತರ ಬಾಚಿಕೊಳ್ಳುವುದರಿಂದ ಕೂದಲಿನ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಕೂದಲನ್ನು ಬಲಪಡಿಸುವುದರ ಜೊತೆಗೆ, ಕೂದಲು ಆಳವಾಗಿ ಗಟ್ಟಿಯಾಗಿರುತ್ತದೆ.
ಈ ಮೇಲಿನನಂತೆ ಕೂದಲು ಬಾಚುವಿಕೆ ಜೊತೆಗೆ ಎಣ್ಣೆ ಮಸಾಜ್ ನಿಂದಾಗಿ ನಿಮ್ಮ ಕೂದಲಿಗೆ ಅನೇಕ ಪೋಷಕಾಂಶಗಳು ಲಭ್ಯವಾಗುತ್ತದೆ. ಕೆಲವು ನಿಮಿಷ ಕೂದಲಿನ ಮಸಾಜ್ ಮಾಡುವುದರಿಂದ ಕೂದಲಿನ ಆರೋಗ್ಯದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣುವುದಕ್ಕೆ ಸಾಧ್ಯವಾಗುತ್ತದೆ.