ಹೊಸ ಕಾರು ಖರೀದಿಸುವವರಿಗೆ 50 ಸಾವಿರ ರಿಯಾಯಿತಿ!

ಹೊಸ ಕಾರು ಖರೀದಿಸಲು ಇದು ಸುವರ್ಣ ಅವಕಾಶ. ಹೌದು ನೀವು ಕಾರು ಖರೀದಿಸಿದರೆ, ಒಟ್ಟು ರೂ. 1.5 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದು. ಹಾಗಾಗಿಯೇ ಕಾರು ಖರೀದಿದಾರರಿಗೆ ಇದೊಂದು ಉತ್ತಮ ಅವಕಾಶ ಎಂದೇ ಹೇಳಬಹುದು.ಹೌದು ನಾವು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹುಂಡೈ ಮೋಟಾರ್ಸ್ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಇಂಡಿಯಾ ತನ್ನ ಮಾದರಿಗಳ ಮೇಲೆ ಭಾರಿ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಫೆಬ್ರುವರಿ ತಿಂಗಳವರೆಗೆ ಈ ಆಫರ್‌ಗಳು ಲಭ್ಯವಿರುತ್ತವೆ ಎಂದು ಮಾಹಿತಿ ಇದೆ.

ಬನ್ನಿ ಕಾರಿನ ಮೇಲಿನ ರಿಯಾಯಿತಿ ವಿವರ ತಿಳಿಯೋಣ :

• i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮೇಲೆ ನಗದು ರಿಯಾಯಿತಿ ರೂ. 10 ಸಾವಿರದವರೆಗೂ ಇದೆ. ವಿನಿಮಯ ಬೋನಸ್ ಕೂಡ ರೂ. 10 ಸಾವಿರ ಲಭ್ಯವಿದೆ. ಅಂದರೆ ಈ ಕಾರಿನ ಮೇಲೆ ರೂ. 20 ಸಾವಿರದವರೆಗೆ ರಿಯಾಯಿತಿಯ ಲಾಭಗಳು ಲಭ್ಯವಿದೆ.

  • Kona EV 2022 ಮಾದರಿಯಲ್ಲಿ ರೂ. 1.5 ಲಕ್ಷದವರೆಗೆ ನಗದು ರಿಯಾಯಿತಿ ಲಭ್ಯವಿದೆ. ಕ್ರೆಟಾ, ವೆನ್ಯೂ, ವೆನ್ಯೂ ಎನ್ ಲೈನ್, ಐ20 ಎನ್ ಲೈನ್, ಅಲ್ಕಾಜರ್, ವೆರ್ನಾ, ಟಸ್ಕಾನ್ ಮುಂತಾದ ಮಾದರಿಗಳಲ್ಲಿ ಯಾವುದೇ ಕೊಡುಗೆಗಳಿಲ್ಲ
  • ಇನ್ನು ಹುಂಡೈ i20 2022 ಮಾದರಿಯಲ್ಲಿ ರೂ. 20 ಸಾವಿರ ನಗದು ರಿಯಾಯಿತಿ. ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಮತ್ತಷ್ಟು ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ. ಒಟ್ಟು ರೂ. 33 ಸಾವಿರದವರೆಗೆ ರಿಯಾಯಿತಿ ಪ್ರಯೋಜನಗಳಿವೆ.
  • ಹುಂಡೈ ಔರಾ ಮಾದರಿಯಲ್ಲಿ ರೂ. 30 ಸಾವಿರದವರೆಗೆ ನಗದು ರಿಯಾಯಿತಿ ಇದೆ. ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ. ಹಾಗಾಗಿ ಕಾರಿನ ಮೇಲೆ ರೂ. 43 ಸಾವಿರ ರಿಯಾಯಿತಿ ದೊರೆಯಲಿದೆ.
  • 2022 My Grand i10 Neos ಮಾದರಿಯಲ್ಲಿ ರೂ. 50 ಸಾವಿರದವರೆಗೆ ನಗದು ರಿಯಾಯಿತಿ ಇದೆ. ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರದವರೆಗೂ ಇದೆ. ಅಂದರೆ ಒಟ್ಟು ರೂ. 63 ಸಾವಿರ ಕಡಿಮೆಯಾಗಲಿದೆ.
  • ಹುಂಡೈ Aura 2023 ಮಾದರಿಯಲ್ಲಿ, ನಗದು ರಿಯಾಯಿತಿ ರೂ. 20 ಸಾವಿರದವರೆಗೂ ಇದೆ. ಹಾಗೆಯೇ ವಿನಿಮಯ ಬೋನಸ್ ರೂ. 10 ಸಾವಿರ ಬರಲಿದೆ. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ. ಇದರೊಂದಿಗೆ ಒಟ್ಟು ರೂ. 33 ಸಾವಿರದವರೆಗೆ ರಿಯಾಯಿತಿ ಇದೆ.
  • ಜೊತೆಗೆ ಗ್ರಾಂಡ್ ಐ10 ನಿಯೋಸ್ ಮಾದರಿಯಲ್ಲೂ ಆಫರ್ ಇದೆ. ಆದರೆ ಇದರ ಮೇಲೆ ಎಕ್ಸ್ ಚೇಂಜ್ ಆಫರ್ ಕಡಿಮೆ. ಎಕ್ಸ್ ಚೇಂಜ್ ಬೋನಸ್ ಅಡಿಯಲ್ಲಿ ರೂ.10 ಸಾವಿರ ರಿಯಾಯಿತಿ ನೀಡಲಾಗುವುದು. ಅಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ. 3 ಸಾವಿರ ಇದೆ.

ಈ ಮೇಲಿನಂತೆ ನೀವು ಉತ್ತಮ ರಿಯಾಯಿತಿ ಪಡೆದು ಕಾರನ್ನು ಕೊಂದುಕೊಳ್ಳಬಹುದು. ಆದರೆ ಕಾರಿನ ಮೇಲಿನ ರಿಯಾಯಿತಿ ಪ್ರದೇಶ ಮತ್ತು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾಗುತ್ತವೆ. ಹಾಗಾಗಿ ಕಾರು ಖರೀದಿಸುವಾಗ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಬೇಕು.

Leave A Reply

Your email address will not be published.