ಟಾಟಾ ನೆಕ್ಸಾನ್ ಗೆ ಟಕ್ಕರ್ ಕೊಡಲು ಮುಂದಾದ ‘ಮಹೀಂದ್ರಾ XUV400’ ಇವಿ!

ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವ XUV400 ಕಾರುಗಳ ಬಿಡುಗಡೆಗೆ ಆಗಿದ್ದು ಈಗಾಗಲೇ ರೂ. 21,000ಕ್ಕೆ ಬುಕಿಂಗ್ ಆರಂಭವಾಗಿದೆ. ಇದೀಗ ಡೀಲರ್‌ಶಿಪ್‌ಗಳಲ್ಲಿ ಈ ಕಾರಿನ ಮಾದರಿಯನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಮುಂದಿನ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. ಹೌದು ಮಹೀಂದ್ರಾ, ಈ ಎಸ್‌ಯುವಿಯನ್ನು ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಪರಿಚಯಿಸಿದೆ. ಅವುಗಳೆಂದರೆ, ಇಸಿ ಮತ್ತು ಇಎಲ್. ಆರಂಭಿಕ ರೂಪಾಂತರ ಇಸಿ ರೂ.15.99 ಲಕ್ಷ ಬೆಲೆಯಲ್ಲಿ ಗ್ರಾಹರಿಗೆ ಖರೀದಿಗೆ ದೊರೆತರೆ, ಟಾಪ್ ಎಂಡ್ ರೂಪಾಂತರ ಇಎಲ್ ರೂ.18.99 ಲಕ್ಷ ದರದಲ್ಲಿ ಸಿಗಲಿದೆ. ಆದರೆ, ಈ ಬೆಲೆಗಳು ಮೊದಲ 5,000 ಬುಕಿಂಗ್ ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಮಹೀಂದ್ರಾ XUV400 ವಿಶೇಷತೆ :

  • ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
  • 34.5kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, ಸಂಪೂರ್ಣ ಚಾರ್ಜ್ ನಲ್ಲಿ 375 km ರೇಂಜ್ ನೀಡಲಿದ್ದು, 39.4kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 456 km ರೇಂಜ್ ಕೊಡಲಿದೆ.
  • ಇದರಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್ 150hp ಪವರ್ 310Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 8.3 ಸೆಕೆಂಡುಗಳಲ್ಲಿ 0-100kph ವೇಗವನ್ನು ಪಡೆಯಲಿದ್ದು,150 kph ಟಾಪ್ ಸ್ವೀಡ್ ಹೊಂದಿದೆ.
  • ಈ ಕಾರಿನ ಡ್ರೇವಿಂಗ್ ಮೋಡ್ ಹಾಗೂ ಚಾರ್ಜಿಂಗ್ ಆಯ್ಕೆಯಾಗಿ ಫನ್, ಫಾಸ್ಟ್ ಹಾಗೂ ಫಿಯರ್‌ಲೆಸ್ ಎಂಬ ಮೂರು ಡ್ರೇವಿಂಗ್ ಮೋಡ್ ಗಳನ್ನು ಒಳಗೊಂಡಿದೆ.
  • ಮಹೀಂದ್ರಾ XUV400 ಬ್ಯಾಟರಿ, 50kW DC ಫಾಸ್ಟ್ ಚಾರ್ಜರ್ ನಲ್ಲಿ ಕೇವಲ 50 ನಿಮಿಷದಲ್ಲಿ ಶೇಕಡ 0-80% ಚಾರ್ಜ್ ಆಗಲಿದೆ. 7.2kW ಚಾರ್ಜರ್‌ನಲ್ಲಿ ಶೇಕಡ 0-100% ಚಾರ್ಜ್ 6 ಗಂಟೆ 30 ನಿಮಿಷ ಬೇಕಾಗಿದ್ದು, 3.3kW AC ಚಾರ್ಜರ್‌ನಲ್ಲಿ ಬರೋಬ್ಬರಿ 13 ಗಂಟೆ ತೆಗೆದುಕೊಳುತ್ತದೆ.
  • ಇದು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಕರ್ಷಕ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಅಡ್ಜಸ್ಟ್ಏಬಲ್ ORVM ಗಳು, ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹಲವಾರು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
  • ಇಷ್ಟೇಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್ಸ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಇನ್ನು ಮಹೀಂದ್ರಾ XUV400ಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿರುವ ಟಾಟಾ ನೆಕ್ಸಾನ್ ಇವಿಯು ರೂ.14.49 ಲಕ್ಷದಿಂದ ರೂ.16.99 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಮೂರು ರೂಪಾಂತರಗಳಲ್ಲಿ ಸಿಗಲಿದೆ. ಇದು 30.2 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 129 PS ಗರಿಷ್ಠ ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 312 km ರೇಂಜ್ ನೀಡಲಿದೆ. 3.3kW ಎಸಿ ಚಾರ್ಜರ್ ನಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು 8.5 ಗಂಟೆ ತೆಗೆದುಕೊಳುತ್ತದೆ.

ಟಾಟಾ ನೆಕ್ಸಾನ್ ಇವಿ ವೈಶಿಷ್ಟ್ಯಗಳು :

  • 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಟೋ ಎಸಿ, ಆಕರ್ಷಕ ಸನ್ ರೋಫ್ ಸೇರಿದಂತೆ ಹತ್ತಾರು ನೂತನ ವೈಶಿಷ್ಟ್ಯಗಳನ್ನು ಪಡೆದಿರಲಿದೆ.
  • ಸುರಕ್ಷತಾ ದೃಷ್ಟಿಯಿಂದ ಮುಂಭಾಗದಲ್ಲಿ ಡ್ಯೂಯೆಲ್ ಏರ್ ಬಾಗ್ಸ್, ಎಬಿಎಸ್, ಇಬಿಡಿ ಹಾಗೂ ಟಿಪಿಎಂಎಸ್ (ಟೈರ್ ಒತ್ತಡ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಈ ಮೇಲಿನ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಬಹುದು. ಇನ್ನು ಈ ಕಾರು ಇನ್ಫಿನಿಟಿ ಬ್ಲೂ, ಆರ್ಕ್ಟಿಕ್ ಬ್ಲೂ, ಗ್ಯಾಲಕ್ಸಿ ಗ್ರೇ ಹಾಗೂ ಎವರೆಸ್ಟ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಅದಲ್ಲದೆ ನೋಡಲು ಈ ಕಾರು ಸಾಕಷ್ಟು ಆಕರ್ಷಣೀಯವಾಗಿದೆ.

Leave A Reply

Your email address will not be published.