ಆನ್ಲೈನ್‌ ಎಡವಟ್ಟು, ಬ್ರೆಡ್‌ ಆರ್ಡರ್‌ ಮಾಡಿದರೆ ಜೊತೆಗೆ ಇಲಿ ಕೂಡಾ ಬಂತು ! ಕಂಪ್ಲೇಂಟ್‌ ಮಾಡಿದರೆ, ಕಂಪನಿ ಕೊಟ್ಟ ಉತ್ತರ ಏನು ಗೊತ್ತಾ?

ಅನೇಕ ಜನರು ಇತ್ತೀಚೆಗೆ ಆನ್‌ಲೈನ್‌ ಮೂಲಕವೇ ಫುಡ್‌ ಆರ್ಡರ್‌ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ. ಈ ಫುಡ್‌ ಡೆಲಿವರಿ ಮಾಡಲೆಂದೇ ಅನೇಕ ಕಂಪನಿಗಳು ಇವೆ. ಇವು ಸಮಯದ ಉಳಿತಾಯವನ್ನು ನಮಗೆ ಮಾಡಿ ಕೊಡುತ್ತದೆ. ಏಕೆಂದರೆ ಒಂದು ಕ್ಲಿಕ್‌ ನಲ್ಲಿ ನಮ್ಮ ಮನೆಯ ಮುಂದೆ ಎಲ್ಲಾ ಫುಡ್‌ ಆರ್ಡರ್‌ಗಳು ಬರುತ್ತವೆ. ತಂತ್ರಜ್ಞಾನ ಅಷ್ಟು ಮುಂದುವರಿದಿದೆ. ಈ ತಂತ್ರಜ್ಞಾನದಿಂದ ಎಷ್ಟು ಉಪಯೋಗವಿದೆಯೋ ಹಾಗೆನೇ ಅಷ್ಟೇ ಅಪಕಾರ ಕೂಡಾ ಇದೆ. ಯಾಕೆಂದು ಮುಂದೆ ಹೇಳ್ತೀವಿ. ನೋಡಿ.

ದಿನಸಿ ಅಥವಾ ಇತರ ಸರಕುಗಳನ್ನು ಆರ್ಡರ್ ಮಾಡಲು ಅನೇಕ ಜನರು Swiggy, Big Basket ಮತ್ತು Blinkit ನಂತಹ ಡೆಲಿವರಿ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಈ ಅಪ್ಲಿಕೇಶನ್‌ಗಳು ಅನೇಕ ಜನರಿಗೆ ಜೀವನವನ್ನು ಸುಲಭಗೊಳಿಸಿವೆ. ಇದರಿಂದ ಎಲ್ಲ ಸಮಸ್ಯೆಗಳೂ ದೂರವಾಗಿವೆ. ಮಾರುಕಟ್ಟೆಗೆ ಹೋಗುವ ಗೊಡವೆಯಾಗಲಿ ಯಾವುದೂ ಇರಲ್ಲ.. ನಿಮ್ಮ ಸರಕುಗಳು ಮನೆಗೆ ಬರುತ್ತವೆ ಮತ್ತು ಆನ್‌ಲೈನ್ ಪಾವತಿಯ ಸೌಲಭ್ಯವೂ ಇದೆ. ಆದರೆ, ಇಲ್ಲೊಬ್ಬ ವ್ಯಕ್ತಿಯೊಬ್ಬರು ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಹಾಕಿದ್ದು ನಿಜಕ್ಕೂ ಗಾಬರಿ ಹುಟ್ಟಿಸುವಂತಹುದು. ಈ ವ್ಯಕ್ತಿ ಬ್ಲಿಂಕಿಟ್‌ನಿಂದ ಬ್ರೆಡ್ ಪ್ಯಾಕೆಟ್ ಅನ್ನು ಆರ್ಡರ್ ಮಾಡಿದ್ದಾರೆ, ಆದರೆ ಬ್ರೆಡ್‌ ಜೊತೆ ಇಲಿ ಕೂಡಾ ಇದೆ.

ಈ ವೈರಲ್ ವೀಡಿಯೊವನ್ನು ನಿತಿನ್ ಅರೋರಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ @NitinA14261863 ಮೂಲಕ ಹಂಚಿಕೊಂಡಿದ್ದಾರೆ. ವೀಡಿಯೊ ಮತ್ತು ಫೋಟೋದಲ್ಲಿ, ಬ್ರೆಡ್ ಪ್ಯಾಕೆಟ್‌ನೊಳಗೆ ಜೀವಂತ ಇಲಿ ತಿರುಗುತ್ತಿರುವುದನ್ನು ನೀವು ನೋಡಬಹುದು.

ಈ ಟ್ವೀಟ್‌ಗೆ ಕಂಪನಿ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ. Blinkit ಈ ವರ್ತನೆಗಾಗಿ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇವೆ. ನಾವು ಅದನ್ನು ಗಮನಿಸಿದ್ದೇವೆ ಮತ್ತು ಅದನ್ನು ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇವೆ. ಭವಿಷ್ಯದಲ್ಲಿ ಇಂತಹ ಅನುಭವ ಯಾರಿಗೂ ಆಗಬಾರದು ಎಂದು ನಾವು ಬಯಸುತ್ತೇವೆ. ಕಂಪನಿಯು ನಿತಿನ್ ಅವರ ಫೋನ್ ಸಂಖ್ಯೆ ಮತ್ತು ಆರ್ಡರ್ ಸಂಖ್ಯೆಯನ್ನು ಹಂಚಿಕೊಳ್ಳಲು ಕೇಳಿದೆ, ಇದರಿಂದ ಹೆಚ್ಚಿನ ತನಿಖೆ ಮಾಡಬಹುದು.

ನಿತಿನ್ ಪೋಸ್ಟ್ ಮಾಡಿದ ನಂತರ ಈ ಟ್ವೀಟ್ ವೈರಲ್ ಆಗಿದೆ. ಇದನ್ನು 15 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ.

Leave A Reply

Your email address will not be published.