Home News MG Air EV : ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಪುಟ್ಟದಾದ ಕಾರು | ಭಾರೀ...

MG Air EV : ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಪುಟ್ಟದಾದ ಕಾರು | ಭಾರೀ ಅಗ್ಗದ ಬೆಲೆಗೆ ಲಭ್ಯ ಈ ಎಲೆಕ್ಟ್ರಿಕ್ ಕಾರು !

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಪ್ರಮುಖ ಬ್ರಿಟಿಷ್ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ಸ್ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದರ ಹೆಸರು ಎಂಜಿ ಏರ್ (MG Air) ಎಂದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಈ ಕಾರನ್ನು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಎಂಜಿ ಏರ್ ಕಾರಿನ ವಿನ್ಯಾಸದ ಬಗ್ಗೆ ಹೇಳೋದಾದ್ರೆ, ಈ ಕಾರು ಪುಟ್ಟದಾಗಿದ್ದು, ಕೇವಲ 2.9ಮೀ ಉದ್ದವಿದ್ದು, ಮೂರು-ಬಾಗಿಲಿನ MG ಏರ್ EV ಚಿಕ್ಕ ನಾಲ್ಕು-ಚಕ್ರ ವಾಹನವಾಗಿದೆ. ಕಾರಿನ ಹೊರ ಹಾಗೂ ಒಳಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ ಹಾಗೂ ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಲೆಕ್ಟ್ರಿಕ್ ಕಾರಿನ ಶ್ರೇಣಿಯು ನೀವು ಯೋಚಿಸುವಷ್ಟು ಚಿಕ್ಕದಾಗಿರುವುದಿಲ್ಲ. ಇದು ಟಾಟಾ ಆಟೋಕಾಂಪ್‌ನಿಂದ ಪಡೆದ LFP-ಸೆಲ್ ಬ್ಯಾಟರಿಯನ್ನು ಬಳಸುತ್ತದೆ. ಇದರ ಸಾಮರ್ಥ್ಯವು ಸುಮಾರು 20-25kWh ಎಂದು ನಿರೀಕ್ಷಿಸಲಾಗಿದೆ. ಇದು MG ಏರ್ ಇವಿಗೆ ಸುಮಾರು 200 ರಿಂದ 300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು MG ಯ ಇತರ ಎಲೆಕ್ಟ್ರಿಕ್ ಕಾರ್ ZS EV ಯಂತೆ iCAT ನಿಂದ ಪ್ರಮಾಣೀಕರಿಸಲ್ಪಡುತ್ತದೆ.

ಕಾರಿನಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್ 40 hp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, ಗರಿಷ್ಠ 150 km ರೇಂಜ್ ನೀಡುತ್ತದೆ. ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಎರಡು ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ. ಕಂಪನಿಯು ವಾರ್ಷಿಕ 36,000 ಯುನಿಟ್ ಕಾರುಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದು, ಮುಂದಿನ ತಿಂಗಳು ಏರ್ ಇವಿಯ ಉತ್ಪಾದನೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ನೂತನ ಎಂಜಿ ಏರ್ ಇವಿ ರೂ.8 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ.