ಮ್ಯಾಗ್ನೈಟ್ ಕಾರಿಗೆ 82 ಸಾವಿರ ರೂ ರಿಯಾಯಿತಿ ಘೋಷಿಸಿದ ನಿಸಾನ್!

Share the Article

ಕುಟುಂಬಕ್ಕೆ ಆರಾಮದಾಯಕ ಮತ್ತು ವಿಶಾಲವಾದ ಕಾರನ್ನು ಬಯಸುವವರಿಗೆ ಎಸ್​ಯುವಿ ಕಾರು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ ಕೈಗೆಟುಕುವ ಬೆಲೆಯ SUV ಕಾರುಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದ್ದು ಭಾರತದಲ್ಲಿ ಎಸ್​ಯುವಿ ಕಾರುಗಳು ಅತೀ ಹೆಚ್ಚು ಮಾರಾಟವಾಗುತ್ತಿದೆ.

ಇದೀಗ ಭಾರತದಲ್ಲಿ ಕಡಿಮೆ ಬೆಲೆಯ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಮೊದಲ ಸ್ಥಾನದಲ್ಲಿದೆ. ಎರಡೂ ಕಾರುಗಳು ಕೈಗೆಟುಕವ ದರದಲ್ಲಿ ಕಾರು ನೀಡುತ್ತಿದೆ. ಇದೀಗ ನಿಸಾನ್ ಮ್ಯಾಗ್ನೈಟ್ ಮತ್ತಷ್ಟು ಡಿಸ್ಕೌಂಟ್ ಆಫರ್ ನೀಡುವ ಮೂಲಕ ಹೊಸ ಅಧ್ಯಾಯ ಆರಂಭಿಸಲು ಮುಂದಾಗಿದೆ.

ಹೌದು ಸಬ್ ಕಾಂಪಾಕ್ಚ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಕೈಗೆಟುಕವ ದರದಲ್ಲಿ ಲಭ್ಯವಿರುವ SUV ಕಾರಾಗಿದೆ. ಮ್ಯಾಗ್ನೈಟ್ ಕಾರಿನ ಬೆಲೆ 5.97 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ನಿಸಾನ್ ಮ್ಯಾಗ್ನೈಟ್ ಬರೋಬ್ಬರಿ 82,000 ರೂಪಾಯಿ ಆಫರ್ ಹಾಗೂ ಬೆನಿಫಿಟ್ ಘೋಷಿಸಿದೆ. ಇದರ ಜೊತೆಗೆ 2022ರ ಮಾಡೆಲ್ ಕಾರಿಗೆ 3 ವರ್ಷದ ಗೋಲ್ಡ್ ಪ್ಯಾಕ್ ಸರ್ವೀಸ್ ನೀಡಿದರೆ 2023ರ ಮಾಡೆಲ್ ಕಾರಿಗೆ 2 ವರ್ಷದ ಗೋಲ್ಡ್ ಪ್ಯಾಕ್ ಸರ್ವೀಸ್ ಆಫರ್ ಘೋಷಿಸಿದೆ.

ಅದಲ್ಲದೆ ನಿಸಾನ್ ಡಿಸ್ಕೌಂಟ್ ಹಾಗೂ ಬೆನಿಫಿಟ್ ಆಫರ್‌ನಲ್ಲಿ 20,000 ರೂಪಾಯಿ ಎಕ್ಸ್‌ಜೇಂಚ್ ಬೋನಸ್ ಒಳಗೊಂಡಿದೆ. ಇದರ ಜೊತೆಗೆ 12,000 ರೂಪಾಯಿ ಆ್ಯಕ್ಸಸರಿ ಆಫರ್, ಕಾರ್ಪೋರೇಟ್ ಉದ್ಯೋಗಿಗಳಿಗೆ 15,000 ರೂಪಾಯಿ ಹೆಚ್ಚುವರಿ ಡಿಸ್ಕೌಂಟ್ ಆಫರ್, ಇದರ ಜೊತೆಗೆ ಲಾಯಲ್ಟಿ ಬೋನಸ್ 10,000 ರೂಪಾಯಿ ಒಳಗೊಂಡಿದೆ. ಇದರ ಜೊತೆಗೆ 2 ವರ್ಷದ ಅವಧಿಗೆ ಶೇಕಡಾ 6.99ರ ಬಡ್ಡಿ ದರದಲ್ಲಿ ಕಾರು ಸಾಲ ಸೌಲಭ್ಯ ಕೂಡ ಒದಗಿಸಿದೆ.

ನಿಸಾನ್ ಮ್ಯಾಗ್ನೈಟ್ ಫೀಚರ್ಸ್ ಇಂತಿವೆ :

  • ಎಕ್ಸ್‌-ಟ್ರಾನಿಕ್‌ ಸಿವಿಟಿ, ಕ್ರೂಸ್‌ ಕಂಟ್ರೋಲ್‌, 360 ಡಿಗ್ರಿ ಅರೌಂಡ್‌ ವ್ಯೂವ್‌ ಮಾನಿಟರ್‌ ಮತ್ತು ನಿಸಾನ್‌ ಕನೆಕ್ಟ್ ನಂತಹ ಫೀಚರ್‌ಗಳಿವೆ. ವೆಬ್‌ಸೈಟ್‌ ಮೂಲಕ ವರ್ಚುವಲ್‌ ಟೆಸ್ಟ್‌ ಡ್ರೈವ್‌ ಮಾಡುವ ಅವಕಾಶವೂ ಇದೆ.
  • ಬೋಲ್ಡ್‌, ಬ್ಯೂಟಿಫುಲ್‌ ಲುಕ್‌ನ ಎಸ್‌ಯುವಿ ಇದಾಗಿದೆ. 18.75 ಕಿಮೀ ಮೈಲೇಜ್‌ ನೀಡಲಿದ್ದು, 999 ಸಿಸಿ ಎಂಜಿನ್‌ ಹೊಂದಿದೆ. ಮ್ಯಾನ್ಯುವಲ್‌ ಟ್ರಾನ್ಸ್‌ಮಿಶನ್‌ನ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರಿನಲ್ಲಿ 5 ಮಂದಿ ಆರಾಮಾಗಿ ಪ್ರಯಾಣಿಸಬಹುದಾಗಿದೆ. 1.0 ಲೀಟರ್‌ ಎಂಜಿನ್‌ ಹೊಂದಿದೆ.
  • ಇನ್‌ಫೋಟೇನ್‌ಮೆಂಟ್‌ 8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕಣ್ಣಿಗೂ ಬಳಕೆಗೂ ಹಿತಕರವಾಗಿದೆ. 360 ಡಿಗ್ರಿ ಕ್ಯಾಮೆರಾ ಹೊಂದಿದೆ. 1.0 ಲೀ ಸಾಮರ್ಥ್ಯದ ಟರ್ಬೋ ಇಂಜಿನ್‌ ಪರ್ಫಾಮೆನ್ಸ್ ಉತ್ತಮವಾಗಿದೆ.
  • 205 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿರುವ ಈ ಕಾರು ನೈಜ SUV ಡ್ರೈವ್ ಅನುಭವ ನೀಡಲಿದೆ. ಜಪಾನ್‌ನಲ್ಲಿ ಈ ಕಾರಿನ ವಿನ್ಯಾಸ ಮಾಡಲಾಗಿದೆ.

ಒಟ್ಟಿನಲ್ಲಿ ನಿಸಾನ್ ಮ್ಯಾಗ್ನೈಟ್ ಕಾರಿನ ಪಿಕಪ್‌ ಉತ್ತಮವಾಗಿದ್ದು, ಈ ಕಾರಿನ ಮೇಲೆ ನಿಗದಿಸಲಾದ ಆಫರ್ ಡೀಲರ್‌ನಿಂದ ಡೀಲರ್‌ಗೆ, ನಗರದಿಂದ ನಗರಕ್ಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆದ್ದರಿಂದ ಹತ್ತಿರದ ಡೀಲರ್ ಬಳಿ ಆಫರ್ ಕುರಿತು ಖಚಿತಪಡಿಸಿಕೊಳ್ಳಬಹುದು.

Leave A Reply