Renouncing Indian citizenship : 2022 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ ಎಷ್ಟು ಗೊತ್ತಾ ? ನೀವು ಶಾಕ್ ಆಗೋದು ಖಂಡಿತ!!

ಭಾರತೀಯ ಪೌರತ್ವವನ್ನು ತ್ಯಜಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೌರತ್ವ ಪಡೆಯುವವರು ಸಾಕಷ್ಟು ಜನ ಇದ್ದಾರೆ. ಸದ್ಯ ಈ ಬಗ್ಗೆ ಸಮೀಕ್ಷೆ ನಡೆಸಿದ್ದು, 2022 ರಲ್ಲಿ ಎಷ್ಟು ಜನ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಎಷ್ಟು ಗೊತ್ತಾ? ಭಾರತೀಯ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ ತಿಳಿದರೆ ನೀವೂ ಶಾಕ್ ಆಗೋದು ಖಂಡಿತ!!.

2022 ರಲ್ಲಿ 2,25,620 ಸೇರಿದಂತೆ 2011 ರಿಂದ 16 ಲಕ್ಷಕ್ಕೂ ಅಧಿಕ ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಇದು ಈ ಎಲ್ಲಾ ಅವಧಿಯಲ್ಲಿ ಅತಿ ಹೆಚ್ಚಿನ ಭಾರತೀಯ ಪೌರತ್ವವನ್ನು ತ್ಯಜಿಸಿದ ಸಂಖ್ಯೆಯಾಗಿದೆ. 2020 ರಲ್ಲಿ 85,256 ಮಂದಿ ತ್ಯಜಿಸಿದ್ದರು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

2011 ರಿಂದ ಭಾರತೀಯ ಪೌರತ್ವವನ್ನು ತ್ಯಜಿಸಿದ ಒಟ್ಟು ಭಾರತೀಯರ ಸಂಖ್ಯೆ 16,63,440 ಆಗಿದ್ದು, 2015 ರಲ್ಲಿ 1,31,489 ಭಾರತೀಯರು ಪೌರತ್ವವನ್ನು ತ್ಯಜಿಸಿದ್ದಾರೆ. ಹಾಗೇ 2016 ರಲ್ಲಿ 1,41,603 ಮತ್ತು 2017 ರಲ್ಲಿ 1,33,049 ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.

2018 ರಲ್ಲಿ ಈ ಸಂಖ್ಯೆ ಸ್ವಲ್ಪ ಏರಿಕೆ ಕಂಡಿದ್ದು, 1,34,561 ಆಗಿದ್ದಾರೆ. ಇನ್ನು 2019 ರಲ್ಲಿ ಸುಮಾರು 1,44,017 ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ. 2020 ರಲ್ಲಿ 85,256 ಹಾಗೂ 2021 ರಲ್ಲಿ 1,63,370 ಜನರು ತ್ಯಜಿದ್ದರೆ, 2022 ರಲ್ಲಿ ಬರೋಬ್ಬರಿ 2,25,620 ಜನ ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2022 ರಲ್ಲಿ ಈ ಮೊದಲಿಗಿಂತ ಅಧಿಕ ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ.

2011 ರ ಡೇಟಾದ ಪ್ರಕಾರ 1,22,819 ಆಗಿದ್ದರೆ, 2012 ರಲ್ಲಿ 1,20,923 ತ್ಯಜಿಸಿದ್ದು, 2013 ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಆಗಿತ್ತು. ಕಳೆದ ಮೂರು ವರ್ಷಗಳಲ್ಲಿ ಐದು ಭಾರತೀಯ ಪ್ರಜೆಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೌರತ್ವವನ್ನು ಪಡೆದಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ತಿಳಿಸಿದ್ದು, ಜೈಶಂಕರ್ ಅವರು ಭಾರತೀಯರು ಪೌರತ್ವ ಪಡೆದ 135 ದೇಶಗಳ ಪಟ್ಟಿಯನ್ನು ಸಹ ಒದಗಿಸಿದ್ದಾರೆ.

Leave A Reply

Your email address will not be published.