ಗೆಳೆಯ, ಗೆಳತಿಯರೊಂದಿಗೆ ಲಾಡ್ಜ್‌ನಲ್ಲಿದ್ದು ಸಿಕ್ಕಿ ಬಿದ್ರೆ, ನಿಮ್ಮನ್ನು ಅರೆಸ್ಟ್ ಮಾಡುವಂತಿಲ್ಲ! ಈ ಕುರಿತು ಕಾನೂನೊಂದು ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್!
ಇಂದು ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಈ ಪ್ರೇಮಿಗಳಲ್ಲಿ ಹೆಚ್ಚಿನವರು ಪ್ರೈವೆಸಿಯನ್ನು ಬಯಸುತ್ತಾರೆ. ಹೀಗಾಗಿ ಹೆಚ್ಚಿನವರು ರೈಡಿಂಗ್ ಹೋಗೋದು, ಜಾಲಿ ರೇಡ್ ಹೋಗೋದು ಮಾಡುತ್ತಾರೆ. ಬಳಿಕ ಹೋದೆಡೆಯೆಲ್ಲ ಲಾಡ್ಜ್ ಗಳಲ್ಲಿ, ಹೋಟೆಲ್ ಗಳಲ್ಲಿ ತಂಗುತ್ತಾರೆ. ಆದರಿಂದು ಈ ಹೋಟೆಲುಗಳ ಮೇಲೆ ರೈಡ್ ನಡೆಯುವ ಭಯದಿಂದ, ಪೋಲೀಸರ ದಾಳಿಯಿಂದ ಅವರು ಎಲ್ಲಿಗೂ ಹೋಗದೆ ಪರಿತಪಿಸುವಂತಾಗಿದೆ. ಒಂದು ವೇಳೆ ನಾವೂ ಹೋಟೆಲ್ ಗಳಲಿದ್ದು, ಏಕಾಏಕಿ ಯಾರಾದರೂ ದಾಳಿ ಮಾಡಿ ರೈಡ್ ಮಾಡಿದರೆ ಏನು ಮಾಡೋದಪ್ಪ ಎಂದು ಯೋಚಿಸ್ತಿದ್ದೀರಾ? ಆ ಚಿಂತೆ ಬಿಡಿ. ಈ ವಿಚಾರಗಳು ನಿಮಗೆ ಗೊತ್ತಿದ್ದರೆ ಯಾರು ನಿಮ್ಮನ್ನು ಏನು ಮಾಡಲು ಆಗುವುದಿಲ್ಲ ಗೊತ್ತಾ!
ಹೌದು, ನೀವೆನಾದರೂ ಪ್ರೇಮಿಗಳಾಗಿದ್ದು ಅಥವಾ ಅವಿವಾಹಿತರಾಗಿದ್ದು, ಹೋಟೆಲ್, ಲಾಡ್ಜ್ ಗಳಲ್ಲಿ ಉಳಿಯಲು ಇಚ್ಛಿಸುವವರು ಈ ಕಾನೂನಿನ ಬಗ್ಗೆ ಸ್ವಲ್ಪ ತಿಳಿದುಕೊಂಡರೆ ನೀವು ಯಾರಿಗೂ ಭಯ ಪಡುವ ಅಗತ್ಯವಿರುವುದಿಲ್ಲ. ನೀವು ನಿಮ್ಮ ಗೆಳೆಯ ಅಥವಾ ಗೆಳತಿಯರೊಂದಿಗೆ ಹೋಟೆಲ್‌ನಲ್ಲಿ ಉಳಿದಾಗ ಪೊಲೀಸರೇನಾದರೂ ಬಂದರೆ, ಮೊದಲನೆಯಾದಾಗಿ ಗಾಬರಿಯಾಗಬೇಡಿ. ಧೈರ್ಯವಾಗಿಯೇ ಇರಿ. ಯಾಕೆಂದರೆ ಮದುವೆಯಾಗದವರು ಹೋಟೆಲ್‌ನಲ್ಲಿ ಒಟ್ಟಿಗೆ ಇರುವುದು ಅಪರಾಧವಲ್ಲ. ಹಾಗಾಗಿ ಹೋಟೆಲ್‌ನಲ್ಲಿ ಉಳಿದಿರುವ ಯಾವುದೇ ಅವಿವಾಹಿತ ಜೋಡಿಗೆ ಕಿರುಕುಳ ಕೊಡವ ಅಥವಾ ಬಂಧಿಸುವ ಹಕ್ಕು ಪೊಲೀಸರಿಗೆ ಇಲ್ಲ. ಆದರೆ ನೀವು ವಯಸ್ಕರಾಗಿರಬೇಕು ಎಂಬುದು ನೆನಪಿರಲಿ.
ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿರುವ ಮೂಲಭೂತ ಹಕ್ಕುಗಳು ಯಾರೊಂದಿಗೆ ಬೇಕಾದರೂ ಬದುಕುವ ಮತ್ತು ದೈಹಿಕ ಸಂಬಂಧ ಹೊಂದುವ ಹಕ್ಕನ್ನು ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದಕ್ಕಾಗಿ ಮದುವೆಯ ಅಗತ್ಯವಿಲ್ಲ. ಅಂದರೆ ಮದುವೆಯಾಗದ ದಂಪತಿ ಹೋಟೆಲ್‌ನಲ್ಲಿ ಒಟ್ಟಿಗೆ ವಾಸಿಸುವುದು ಅವರ ಮೂಲಭೂತ ಹಕ್ಕುಗಳಲ್ಲೊಂದು. ಇದಕ್ಕೆ ವಿರುದ್ಧವಾಗಿ ಪೋಲೀಸರು ನಡೆದರೆ, ಅದು ಅವರ ಹಕ್ಕಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ಪೊಲೀಸ್ ಕ್ರಮದ ವಿರುದ್ಧ ದಂಪತಿಗಳು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ಅಥವಾ ಸಂವಿಧಾನದ 226 ರ ಅಡಿಯಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು.
ಹೋಟೆಲ್‌ನಲ್ಲಿ ಉಳಿದಿರುವ ಅವಿವಾಹಿತ ದಂಪತಿಗೆ ಕಿರುಕುಳ ನೀಡುವ ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಉನ್ನತ ಪೊಲೀಸ್ ಅಧಿಕಾರಿಗೆ ದೂರು ನೀಡಬಹುದು. ಇದಲ್ಲದೆ, ನೊಂದ ದಂಪತಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಇನ್ನು ಒಂದು ಮುಖ್ಯವಾದ ವಿಷಯವೆಂದರೆ ಹೋಟೆಲ್ ಮ್ಯಾನೇಜ್ ಮೆಂಟ್ ಕೂಡ ಅವಿವಾಹಿತ ಜೋಡಿಯನ್ನು ತಡೆಯಲು ಸಾಧ್ಯವಿಲ್ಲ. ಕಪಲ್ಸ್ ಮದುವೆಯಾಗಿಲ್ಲ ಎಂಬ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಅವಿವಾಹಿತ ದಂಪತಿಗಳಿಗೆ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೋಟೆಲ್ ಈ ರೀತಿ ಮಾಡಿದರೆ ಅದನ್ನೂ ಕೂಡ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದಾಗಿಯೂ,
ಅಲ್ಲದೆ ಪೊಲೀಸರು ಹೋಟೆಲ್‌ಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ. ಆದರೆ ಅವರು ಮದುವೆಯಾಗದ ದಂಪತಿಗಳನ್ನು ಬಂಧಿಸಲು ಅಥವಾ ಕಿರುಕುಳ ನೀಡುವ ಸಲುವಾಗಿ ದಾಳಿ ಮಾಡುವಂತಿಲ್ಲ. ದೇಶದಲ್ಲಿ ವೇಶ್ಯಾವಾಟಿಕೆಯನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಅಂತಹ ವೇಶ್ಯಾವಾಟಿಕೆಯ ವಿರುದ್ಧ ಅಥವಾ ಅಪರಾಧಿಗಳನ್ನು ಅಡಗಿಸಿಟ್ಟಿರುವ ಶಂಕೆಯ ಮೇಲೆ ಪೊಲೀಸರು ಹೋಟೆಲ್‌ಗಳ ಮೇಲೆ ದಾಳಿ ಮಾಡುತ್ತಾರೆ. ಒಂದು ವೇಳೆ ಪೋಲೀಸರು ಬಂದು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಿದರಾಯಿತು. ಅವರ ಬೇಡಿಕೆಯಂತೆ, ಅಂತಹ ದಂಪತಿಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಮತ್ತು ಯಾವುದೇ ರೀತಿಯ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಾಬೀತುಪಡಿಸಬೇಕು
ಹಾಗಾಗಿ ನೀಶೇನಾದರೂ ಪ್ರೇಮಿಗಳೋ, ಅವಿವಾಹಿತ ದಂಪತಿಗಳೋ ಆಗಿದ್ದಲ್ಲಿ , ಹೋಟೆಲ್ ರೂಂ ಗಳಲ್ಲಿ ತಂಗಲು ಬಯಸಿದ್ದೇ ಆದಲ್ಲಿ ಈ ಕಾನೂನು ನಿಯಮವನ್ನು ಅರಿತಿದ್ದರೆ ಸಾಕು. ಮತ್ತು ವಯಸ್ಕರಾಗಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳು ನಿಮ್ಮ ಬಳಿ ಇದ್ದರಾಯಿತು. ಯಾವುದೇ ಸಂದರ್ಭದಲ್ಲಿ ಯಾರಿಗೂ ಭಯಪಡುವಂತಿಲ್ಲ.