ಜಿಯೋ ಗೆ ಟಕ್ಕರ್ ನೀಡುತ್ತೆ ಏರ್ಟೆಲ್ ನ ಅಗ್ಗದ ಈ ಪ್ಲಾನ್!!!

Share the Article

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಎರಡನೇ ದೊಡ್ಡ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿರುವ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ. ಇದೀಗ, ಜಿಯೋ ಗೆ ಟಕ್ಕರ್ ನೀಡುವಂತೆ ಏರ್ಟೆಲ್ ಅಗ್ಗದ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದೆ.

ಏರ್‌ಟೆಲ್ ಟೆಲಿಕಾಂ ವಿಭಿನ್ನ ಶ್ರೇಣಿಯ ಪ್ರೀಪೇಯ್ಡ್‌ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಅವುಗಳಲ್ಲಿ 199ರೂ. ರೀಚಾರ್ಜ್‌ ಪ್ಲ್ಯಾನ್ ಅಗ್ಗದ ಬೆಲೆಯಲ್ಲಿ ಉತ್ತಮ ಪ್ಲ್ಯಾನ್‌ ಎನ್ನಬಹುದಾಗಿದೆ. ಈ ಯೋಜನೆಯು ಡೇಟಾ, ಅನಿಯಮಿತ ಕರೆಯ ಜೊತೆಗೆ ಬೆಸ್ಟ್ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಜಿಯೋ ಟೆಲಿಕಾಂನ ಪ್ರೀಪೇಯ್ಡ್‌ ಪ್ಲ್ಯಾನ್‌ ಗೆ ಹೋಲಿಸಿದರೆ ಏರ್‌ಟೆಲ್‌ನ 199ರೂ. ಹೆಚ್ಚು ಆಕರ್ಷಕವೆನಿಸದು.

199ರೂ. ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಟೆಲಿಕಾಂಗಳು ಉತ್ತಮ ಪ್ರಯೋಜನ ನೀಡುತ್ತಿವೆ. ಹಾಗಿದ್ದರೂ ಕೂಡ ದೈನಂದಿನ ಡೇಟಾ ಪ್ರಯೋಜನ ಬಯಸುವ ಗ್ರಾಹಕರಿಗೆ ಜಿಯೋದ 199ರೂ. ಪ್ಲ್ಯಾನ್ ಬೆಸ್ಟ್ ಎನಿಸಿದರೂ ಆಶ್ಚರ್ಯವಿಲ್ಲ. ಆದರೆ ನಿಗದಿತ ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಏರ್‌ಟೆಲ್‌ ಟೆಲಿಕಾಂನ 199 ರೂ. ಪ್ಲ್ಯಾನ್ ಬೆಸ್ಟ್ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಏರ್‌ಟೆಲ್‌ 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅದೇ ರೀತಿ, ಜಿಯೋ ಯೋಜನೆಯು 23 ದಿನಗಳ ವ್ಯಾಲಿಡಿಟಿ ಹೊಂದಿದೆ.

ಹಾಗಿದ್ರೆ, ಏರ್‌ಟೆಲ್‌ನ 199ರೂ. ಮತ್ತು ಜಿಯೋದ 199ರೂ. ರೀಚಾರ್ಜ್‌ ಪ್ಲ್ಯಾನ್‌ಗಳ ನಡುವಿನ ಭಿನ್ನತೆಗಳೇನು?? ಎಂದು ಗಮನಿಸಿದರೆ:
ರಿಲಯನ್ಸ್‌ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಸಂಸ್ಥೆಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆಯಿದ್ದು, ಹಾಗೆಯೇ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂನ 199 ರೂ. ಬೆಲೆಯ ಪ್ರೀಪೇಯ್ಡ್‌ ಯೋಜನೆ ಕೂಡಾ ಸಹಜವಾಗಿ ಸಾಮ್ಯತೆಯಿದೆ ಎಂದೆನಿಸಿದರೂ ಕೂಡ ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 199ರೂ. ಅಗ್ಗದ ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೇಟಾ ಅನುಕೂಲ ಹೊಂದಿದ್ದು, ಎಸ್‌ಎಮ್‌ಎಸ್‌ ಸೌಲಭ್ಯ ನೀಡಿದ್ದು ಆದರೆ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ಏರ್‌ಟೆಲ್‌ ಟೆಲಿಕಾಂನ ನೂತನ 199ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದ್ದು, ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗಾಗಿ ಈ ಯೋಜನೆ ಬೆಸ್ಟ್ ಎನ್ನಬಹುದು. ಇದಲ್ಲದೇ, ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮತ್ತು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ಒಳಗೊಂಡಿವೆ. ಈ ಅವಧಿಯಲ್ಲಿ ಒಟ್ಟು 3 GB ಡೇಟಾ ಸೌಲಭ್ಯ ಪಡೆಯಬಹುದು. ಇದಲ್ಲದೆ, ಅನಿಯಮಿತ ವಾಯಿಸ್‌ ಕರೆ ಹಾಗೂ ದೈನಂದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡ ಗ್ರಾಹಕರಿಗೆ ದೊರೆಯಲಿದೆ.

ರಿಲಯನ್ಸ್‌ ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ನಲ್ಲಿ ಅನಿಯಮಿತ ವಾಯಿಸ್‌ ಕರೆಗಳ ಜೊತೆಗೆ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗಲಿವೆ. ಜಿಯೋ ಸಿನಿಮಾ, ಜಿಯೋ ಟೆಲಿಕಾಂನ ಇತರೆ ಆಪ್ಸ್‌ ಲಭ್ಯವಾಗಲಿದ್ದು ಈ ಪ್ಲಾನ್ ನಲ್ಲಿ ಒಟ್ಟು 23 ದಿನಗಳ ವ್ಯಾಲಿಡಿಟಿ ಅವಧಿಯನ್ನ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಕೂಡ ಪಡೆಯಬಹುದು. ಪೂರ್ಣ ವ್ಯಾಲಿಡಿಟಿ ಅವಧಿಗೆ 34.5 GB ಡೇಟಾ ಪ್ರಯೋಜನ ದೊರೆಯಲಿದೆ.

Leave A Reply