Home Interesting ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್‌ ಎಂತವರ ಹೃದಯ ಕೂಡಾ...

ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್‌ ಎಂತವರ ಹೃದಯ ಕೂಡಾ ಕರಗಿಸುತ್ತೆ!

Hindu neighbor gifts plot of land

Hindu neighbour gifts land to Muslim journalist

ಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಇದನ್ನು ಅನುಭವಿಸುತ್ತಾರೆ. ಕೆಲವು ದಿನಗಳು ನಮಗೆ ಒಳ್ಳೆಯ ಕ್ಷಣಗಳನ್ನು ಕೊಡುತ್ತದೆ. ಕೆಲವೊಮ್ಮೆ ಕೆಟ್ಟ ದಿನಗಳು ಕೂಡಾ ಇರುತ್ತದೆ. ಇಂತಹ ಒತ್ತಡದ ಸಮಯದಲ್ಲಿ ಕೆಲವೊಂದು ಸಣ್ಣ ಸಾಂತ್ವನ ಎಲ್ಲರಿಗೂ ಮುದ ನೀಡುತ್ತೆ. ಅಂತಹುದೇ ಒಂದು ಪುಟ್ಟ ಸಾಂತ್ವನ ಪುಟ್ಟ ಮುದ್ದು ಮಗು ತನ್ನ ತಾಯಿಗೆ ನೀಡಿದೆ. ಅದು ಕೂಡಾ ಲೆಟರ್‌ ಮೂಲಕ.

ಟ್ವಿಟರ್ ಬಳಕೆದಾರ @acweyand ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ, ಆ ತಾಯಿ ಅವತ್ತು ಕೆಟ್ಟ ದಿನವನ್ನು ಅನುಭವಿಸಿದ್ದಾಳೆ. ಆದರೆ ಅವಳ ಮುಖದಲ್ಲಿ ನಗು ತಂದಿದ್ದು ಆ ಪುಟ್ಟ ಪುಟಾಣಿ ಬರೆದ ಟಿಪ್ಪಣಿ. ಇವತ್ತು ನಿನಗೆ ಕಷ್ಟದ ದಿನವಾಗಿದ್ದರೆ ನನ್ನನ್ನು ಕ್ಷಮಿಸು ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಜೊತೆಗೆ ಆ ಪೋಸ್ಟ್‌ನಲ್ಲಿ ಎರಡು ಹೃದಯದ ಚಿತ್ರಗಳನ್ನು ಕೂಡಾ ಆಕೆಯ ಮಗು ಬರೆದಿತ್ತು. ಎಷ್ಟೊಂದು ಮುಗ್ಧತೆಯಿಂದ ಕೂಡಿದೆ ಈ ಲೆಟರ್‌ ಅಲ್ವಾ. ಇದನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ ನಂತರ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಕಮೆಂಟ್‌ ಮಾಡಿದ್ದಾರೆ. ಅದು ಕೂಡಾ ಪ್ರೀತಿಪೂರ್ವಕವಾಗಿ ಕಮೆಂಟ್‌ ಮಾಡಿದ್ದಾರೆ. ಇಷ್ಟ ಪಟ್ಟಿದ್ದಾರೆ.

ವ್ಯಕ್ತಿಯೊಬ್ಬರು, “ಇದನ್ನು ವೀ ಫ್ರೇಮ್‌ನಲ್ಲಿ ಇರಿಸಿ ಮತ್ತು ಅದನ್ನು ನಿಮ್ಮ ಕಚೇರಿಯಲ್ಲಿ ಇರಿಸಿ. ಅಥವಾ ನೀವು ಅದನ್ನು ಲ್ಯಾಮಿನೇಟ್ ಮಾಡಿ ನಿಮ್ಮ ಕಾರ್ ವೈಸರ್‌ಗೆ ಹಾಕಬಹುದು. ನಿಮಗೆ ಕೆಲಸದಲ್ಲಿ ಕೆಟ್ಟ ದಿನ ಇದ್ದಾಗ, ವೈಸರ್ ಅನ್ನು ಕೆಳಗೆ ತಿರುಗಿಸಿ ನೋಡಿದರೆ ನಿಮ್ಮ ಸ್ಟ್ರೆಸ್‌ ಎಲ್ಲ ಹೋಗುತ್ತೆ ” ಎಂದು ಕಮೆಂಟ್‌ನಲ್ಲಿ ಬರೆದಿದ್ದಾರೆ.

https://twitter.com/acweyand/status/1622999167235764228/photo/1