ಇಂದು ( ಫೆ.9) ಖಿನ್ವ್ಸಾರ್ ಕೋಟೆಯಲ್ಲಿ ನಡೆಯಲಿದೆ ಸ್ಮೃತಿ ಇರಾನಿ ಪುತ್ರಿಯ ಅದ್ಧೂರಿ ವಿವಾಹ | ಇವರೇ ನೋಡಿ ಕೇಂದ್ರ ಸಚಿವೆಯ ಅಳಿಯ!

ಸದ್ಯ ಭಾರತದಲ್ಲೀಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳ, ಉದ್ಯಮಿಗಳ ಹಾಗೂ ಅವರ ಮಕ್ಕಳ ಮದುವೆ ಸಮಾರಂಭಗಳ ಬಹಳ ಅದ್ಧೂರಿಯಾಗಿ ನಡೆಯುತ್ತಿವೆ. ಒಂದು ರೀಗಿ ಇದೀಗ ವಿವಾಹ ಪರ್ವ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರಿಟಿಗಳ, ಕ್ರಿಕೆಟ್ ಸೆಲೆಬ್ರಿಟಿಗಳ, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಮತ್ತು ರಾಜಕಾರಣಿಗಳ ಮಕ್ಕಳ ಮದುವೆ ಸಮಾರಂಭಗಳು ವಿಜೃಂಭಣೆಯಿಂದ, ಸಂಭ್ರಮ ಸಡಗರಗಳೊಂದಿಗೆ ನಡೆಯುತ್ತದೆ. ಈ ವಿಚಾರವೇಕೆ ಇಲ್ಲಿ ಪ್ರಸ್ತಾಪ ಆಗ್ತಿದೆ ಅಂದ್ಕೋತಿದಿರಾ? ಅದಕ್ಕೂ ಕಾರಣವಿದೆ.

ಯಾಕೆಂದರೆ ಇಲ್ಲೊಬ್ಬ ದೇಶದ ಪ್ರಮುಖ ರಾಜಕಾರಣಿಯ ಮಗಳ ಮದುವೆ ನಿಶ್ಚಯವಾಗಿದೆ. ಈ ರಾಜಕಾರಣಿ ಸಿನಿಮಾಗೂ ಸೈ, ರಾಜಕಾರಣಕ್ಕೂ ಸೈ ಅಂತಾ ಜನರಿಂದ ಅನ್ನಿಸಿಕೊಂಡು ಎರಡೂ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದವರು. ಅಂದ್ಹಾಗೆ ಈ ರಾಜಕಾರಣಿ ಯಾರೆಂದು ನಿಮಗೆ ಈಗಾಗ್ಲೇ ಗೊತ್ತಾಗಿರ್ಬೋದು ಅಲ್ವಾ? ಅದು ಬೇರೆ ಯಾರೂ ಅಲ್ಲ ಕೇಂದ್ರ ಸಚಿವೆ ಸ್ಮೃತಿ ಇರಾನಿ. ಹೌದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ ಇರಾನಿ ಅವರ ವಿವಾಹವು ಫೆಬ್ರುವರಿ 9 ಅಂದ್ರೆ ಇಂದು ನಡೆಯಲಿದೆ.

ಶಾಲೆನ್ ಮತ್ತು ಅರ್ಜುನ್ ಭಲ್ಲಾ ಅವರ ವಿವಾಹವು ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿಮ್ಸರ್ ಕೋಟೆಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಅನಿವಾಸಿ ಭಾರತೀಯ ಅರ್ಜುನ್ ಭಲ್ಲಾ ಅವರೊಂದಿಗೆ 2021 ರ ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಗೂ ಕೂಡ ಡೇಟ್ ಫಿಕ್ಸ್ ಆಗಿದ್ದು, ಇವರಿಬ್ಬರ ಮದುವೆ ಸಮಾರಂಭ ನಡೆಯುವ ಹೋಟೆಲ್ ಅನ್ನು ಮೂರು ದಿನಕ್ಕಾಗಿ ಮುಂಚಿತವಾಗಿ ಕಾಯ್ದಿರಿಸಲಾಗಿದೆ.

ಮೂರು ದಿನಗಳ ಕಾಲ ಇದು ಬುಕ್‌ ಆಗಿ ಇರಲಿದೆ. ಸ್ಮೃತಿ ಅವರ ಪತಿ ಜುಬಿನ್ ಇರಾನಿ ಅವರು ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಜೋಧ್‌ಪುರ ವಿಮಾನ ನಿಲ್ದಾಣಕ್ಕೆ ಬಂದು ಮಗಳ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಅವರ ಜೊತೆ ಸ್ಮೃತಿ ಇರಾನಿ ಕೂಡ ಬರಬೇಕಿತ್ತು. ಆದರೆ, ಅವರ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದಾಗಿದೆ. ಮೂಲಗಳನ್ನು ಆಧರಿಸಿ ಹೇಳುವುದಾದರೆ, ಬುಧವಾರದ ವೇಳೆಗೆ ಅವರು ಖಿನ್ವ್ಸಾರ್ ಕೋಟೆಗೆ ಬರುವ ಸಾಧ್ಯತೆ ಇದೆ.

ಶನೆಲ್, ಜುಬಿನ್ ಇರಾನಿಯ ಮೊದಲ ಪತ್ನಿ ಮೋನಾ ಅವರ ಮಗಳು. ಸದ್ಯ ಇರಾನಿ ಅವರ ಮಗಳು ವೃತ್ತಿಯಲ್ಲಿ ವಕೀಲೆ ಆಗಿದ್ದು, ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಕೋರ್ಸ್ ಪೂರ್ಣಗೊಳಿಸಿದ್ದಾರೆ. ನಂತರ ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಿಂದ ಎಲ್‌ಎಲ್‌ಎಂ ಪದವಿಯನ್ನು ಪಡೆದಿದ್ದಾರೆ. ಅರ್ಜುನ್‌ ಭಲ್ಲಾ ಕೆನಡಾದಲ್ಲಿ ವಾಸ ಮಾಡುತ್ತಿದ್ದು, ಅನಿವಾಸಿ ಭಾರತೀಯರಾಗಿದ್ದಾರೆ. ಭಲ್ಲಾ ಅವರು ಕಾನೂನು ತಜ್ಞರಾಗಿದದ್ದು, ಕೆನಡಾದಲ್ಲಿ ಹಲವಾರು ಪ್ರಮುಖ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ವಿವಾಹ ಕಾರ್ಯಕ್ರಮಕ್ಕೆ ಕೋಟೆಗೆ ಸರ್ವಾಲಂಕಾರ ಮಾಡಲಾಗಿದೆ. ಸೀಮಿತ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಮೂಲಗಳ ಪ್ರಕಾರ, 50 ಅತಿಥಿಗಳ ಪಟ್ಟಿ ಈಗಾಗಲೇ ಸಿದ್ಧ ಮಾಡಲಾಗಿದೆ. ಅವರು ಕೂಡ ಹೋಟೆಲ್‌ಗೆ ಈಗಾಗಲೇ ಆಗಮಿಸಿದ್ದಾರೆ. ಈ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮಾತ್ರ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮದುವೆಯಲ್ಲಿ ಯಾವುದೇ ವಿಐಪಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ.

Leave A Reply

Your email address will not be published.