Home latest ಮಂಗಳೂರು : ಇತ್ತಂಡಗಳ ಮಧ್ಯೆ ಹೊಡೆದಾಟ | ಪೊಲೀಸ್ ಬಿಗಿ ಬಂದೋಬಸ್ತ್

ಮಂಗಳೂರು : ಇತ್ತಂಡಗಳ ಮಧ್ಯೆ ಹೊಡೆದಾಟ | ಪೊಲೀಸ್ ಬಿಗಿ ಬಂದೋಬಸ್ತ್

Hindu neighbor gifts plot of land

Hindu neighbour gifts land to Muslim journalist

ಸುರತ್ಕಲ್ : ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೆ ನೆತ್ತರ ನೀರು ಹರಿದಿದೆ. ಇತ್ತೀಚೆಗಷ್ಟೇ ಜ್ಯುವೆಲ್ಲರಿ ಸಿಬ್ಬಂದಿಯನ್ನು ಹಾಡಹಗಲೇ ವ್ಯಕ್ತಿಯೋರ್ವ ಬಂದು ಚೂರಿ ಇರಿದು ಪರಾರಿಯಾಗಿದ್ದು , ಈ ಘಟನೆ ಮಾಸುವ ಮುನ್ನವೇ ಇತ್ತ ಮತ್ತೊಂದು ಕೃತ್ಯ ನಡೆಯುವುದು ಸ್ವಲ್ಪದರಲ್ಲೇ ತಪ್ಪಿದೆ.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದಿದ್ದ ಪಾಝಿಲ್ ಹತ್ಯೆ ಪ್ರಕರಣ ನಡೆದು ತಿಂಗಳುಗಳೇ ಕಳೆದು ಹೋಗಿದೆ. ಈ ಹತ್ಯೆಯ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈಗ ಮೃತ ಫಾಝಿಲ್ ಸಹೋದರನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆದಿರುವ ಘಟನೆ ನಡೆದಿದೆ. ಹೀಗಾಗಿ ಆಸುಪಾಸಿನ ಜನರಿಗೆ ಆತಂಕ ಶುರುವಾಗಿದೆ.

ಈ ಘಟನೆಯ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇಲ್ಲಿನ ಕಾಟಿಪಳ್ಳ ಸಮೀಪದ ಗಣೇಶ್ ಪುರ ಎಂಬಲ್ಲಿ ಘಟನೆ ನಡೆದಿದ್ದು, ಫಾಝಿಲ್ ಸಹೋದರ ಆದಿಲ್ ಎಂಬವರ ಮೇಲೆ ಮೂವರು ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿತ್ತು. ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ದುಷ್ಕರ್ಮಿಗಳಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಓರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನೊಂದು ಮಾಹಿತಿಯ ಪ್ರಕಾರ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಹಿಂದೂ ಯುವಕನೋರ್ವನ ದ್ವಿಚಕ್ರ ವಾಹನಕ್ಕೆ ಫಾಝಿಲ್ ಸಹೋದರ ಕಾರಿನಲ್ಲಿ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಸದ್ಯ ಬಹಳ ಸೂಕ್ಷ್ಮ ಸ್ಥಳವಾದ ಕಾರಣ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.