Home Breaking Entertainment News Kannada ನಾನೆಂಥ ಹುಚ್ಚಿ ಅಂತ ಗೊತ್ತಿಲ್ಲ, ಹೇ ಚಂಗು-ಮಂಗು ಮನೆಗೆ ನುಗ್ಗಿ ಹೊಡೆಯುತ್ತೇನೆ! ಬಾಲಿವುಡ್ನ ಈ ಸ್ಟಾರ್...

ನಾನೆಂಥ ಹುಚ್ಚಿ ಅಂತ ಗೊತ್ತಿಲ್ಲ, ಹೇ ಚಂಗು-ಮಂಗು ಮನೆಗೆ ನುಗ್ಗಿ ಹೊಡೆಯುತ್ತೇನೆ! ಬಾಲಿವುಡ್ನ ಈ ಸ್ಟಾರ್ ಜೋಡಿಗೆ ಕಂಗನಾ ಕೊಟ್ಳು ವಾರ್ನಿಂಗ್!

Hindu neighbor gifts plot of land

Hindu neighbour gifts land to Muslim journalist

ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದವನ್ನು ಮೈಮೇಲೆ ಎಳೆದು ಕೊಳ್ಳುವ ಭಾರತದ ಸ್ಟಾರ್ ನಟಿ ಎಂದರೆ ಅದು ಕಂಗನಾ ರಣಾವತ್. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗಿ ಇಂತಹ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿ ಎಲ್ರಲ್ಲೂ ಕುತೂಹಲ ಕೆರಳಿಸಿ ಬಿಡ್ತಾರೆ. ಆದರೂ ಕಂಗನಾ ಕೊಡೋ ಸ್ಟೇಟ್ಮೆಂಟ್ ಹಿಂದೆ ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ. ಇದೀಗ ಮತ್ತೆ ಇಂತದೇ ಒಂದು ಪೋಸ್ಟ್ ಮೂಲಕ ಸುದ್ಧಿಯಾಗುತ್ತಿರುವ ಕಂಗನಾ, ‘ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ, ಮನೆಗೆ ನುಗ್ಗಿ ಹೊಡಿತೀನಿ’ ಎಂದು ಈ ಬಾಲಿವುಡ್ ಸ್ಟಾರ್ ಜೋಡಿಗೆ ವಾರ್ನಿಂಗ್ ಮಾಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಕೆಲವು ದಿನಗಳ ಹಿಂದೆ, ಅಂದ್ರೆ ಭಾನುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪತ್ರ ಬರೆದುಕೊಂಡಿದ್ದರು. ಅದರಲ್ಲಿ ಹೆಸರು ಹೇಳದೇ ಬಾಲಿವುಡ್ ದಂಪತಿ ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೆಲವರು ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೇಲೆ ಕಂಗನಾ ಆರೋಪ ಮಾಡುತ್ತಿದ್ದಾರೆ ಎಂದು ಊಹಿಸಿದ್ದರು.

ಆದರೀಗ ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ಖಾರವಾಗಿ ಉತ್ತರಿಸಿರುವ ಕಂಗನಾ ಅವರು ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ಅವರು ‘ನನ್ನ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ ಹೇಳುತ್ತಿದ್ದೇನೆ. ನಿನ್ನೆ ರಾತ್ರಿಯಿಂದ ನನ್ನ ಸುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ. ಕ್ಯಾಮರಾ ಅಥವಾ ಕ್ಯಾಮರಾಗಳಿಲ್ಲದೆ ಯಾರೂ ನನ್ನನ್ನ ಹಿಂಬಾಲಿಸುತ್ತಿಲ್ಲ. ಪದಗಳ ಮೂಲಕ ಅರ್ಥ ಮಾಡಿಕೊಳ್ಳದವರಿಗೆ, ವಿಷಯಗಳನ್ನು ಬೇರೆಯದೇ ಮಾರ್ಗದಲ್ಲಿ ಅರ್ಥ ಮಾಡಿಸಬೇಕಾಗುತ್ತದೆ’ ಎಂದು ಇನ್ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಆ ಬಾಲಿವುಡ್ ಜೋಡಿಯ ಹೆಸರು ಹೇಳದೆ ‘ಚಂಗು – ಮಂಗುಗೆ ಇದು ನನ್ನ ಸಂದೇಶ, ನಿಮಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನೀವು ಯಾರೋ ಹಳ್ಳಿ ಮುಗ್ಧೆಯ ಜತೆ ಆಟವಾಡುತ್ತಿಲ್ಲ. ಇನ್ನಾದರೂ ಸರಿಹೋಗಿ, ನಿಮ್ಮ ದಾರಿ ಸರಿಪಡಿಸಿಕೊಳ್ಳಲು ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಮನೆಗೆ ನುಗ್ಗಿ ನಾನು ಹೊಡೆಯುತ್ತೇನೆ. ನನ್ನನ್ನು ಹುಚ್ಚಿ ಅಂತ ಅಂದು ಕೊಂಡಿರುವವರಿಗೆ, ನಾನು ಹುಚ್ಚಿ ಅಂತಷ್ಟೇ ಗೊತ್ತು, ಆದರೆ ಎಷ್ಟು ದೊಡ್ಡ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಒಟ್ನಲ್ಲಿ ಕಂಗನಾ ಯಾವುದೋ ಒಂದು ಸಿನಿಮಾ ಜೋಡಿಯ ಮೇಲೆ ಕೋಪಗೊಂಡಿರೋದಂತೂ ಇದರಿಂದ ತಿಳಿದು ಬರುತ್ತದೆ. ಅವರು ಈಕೆಗೇನು ಮಾಡಿದ್ದಾರೋ ಅಥವಾ ಕಂಗನಾ ಅವರಿಗೇನು ಮಾಡಿದ್ದಾಳೋ ಇದುವರೆಗೂ ತಿಳಿದಿಲ್ಲ. ಅಲ್ಲದೆ ಆ ಜೋಡಿಯ ಹೆಸರು ಕೂಡ ಬಹಿರಂಗವಾಗದೇ ಇರುವ ಕಾರಣ ಅದು ಯಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ಈ ವಿಚಾರವಾಗಿ ಇನ್ನೂ ಯಾವೆಲ್ಲಾ ಬೆಳವಣಿಗೆಗಳು ಆಗುತ್ತದೆಯೋ ಎಂದು ಕಾದು ನೋಡಬೇಕಿದೆ.