AOC Recruitment 2023: ಆರ್ಮಿ ಆರ್ಡಿನನ್ಸ್‌ ಕಾರ್ಪ್ಸ್‌ನಲ್ಲಿ SSLC ಪಾಸಾದವರಿಗೆ ಉದ್ಯೋಗಾವಕಾಶ | 1749 ಹುದ್ದೆಗಳಿಗೆ ಅರ್ಜಿ ಆಹ್ವಾನ

Share the Article

ಎಸ್ಎಸ್ಎಲ್ ಸಿ ಪಾಸಾದ ಅಭ್ಯರ್ಥಿಗಳಿಗೆ ಆರ್ಮಿ ಆರ್ಡಿನನ್ಸ್‌ ಕಾರ್ಪ್ಸ್ ಸೆಂಟರ್ (AOC) ಕಡೆಯಿಂದ ಭರ್ಜರಿ ಗುಡ್ ನ್ಯೂಸ್‌ ನೀಡಿದೆ. ಮಿಲಿಟರಿಯ ಉದ್ಯೋಗದಲ್ಲಿ ಆಕಾಂಕ್ಷಿತರಾಗಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಬರೋಬ್ಬರಿ 1749 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸದ್ಯ ಆಸಕ್ತರು ಹುದ್ದೆಗಳ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು ಈ ಕೆಳಗಿನಂತಿದೆ:

  • ಟ್ರೇಡ್ಸ್‌ಮನ್ ಮೇಟ್ : 1249 ಹುದ್ದೆಗಳು
  • ಫೈಯರ್‌ಮನ್ : 544 ಹುದ್ದೆಗಳು

ಹುದ್ದೆವಾರು ವೇತನ ಶ್ರೇಣಿ:

  • ಟ್ರೇಡ್ಸ್‌ಮನ್ ಮೇಟ್ : Rs.18,000-56,900.
  • ಫೈಯರ್‌ಮನ್ : Rs.19,900-63,200.

ಆನ್‌ಲೈನ್‌ ಅರ್ಜಿ ಸಲ್ಲಿಸಲು 06-02-2023 ಆರಂಭಿಕ ದಿನಾಂಕವಾಗಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಸಲು 26-02-2023 ಕೊನೆ ದಿನಾಂಕ ಆಗಿದೆ.

ವಿದ್ಯಾರ್ಹತೆ : 10ನೇ ತರಗತಿ ಪಾಸ್ ಆಗಿದ್ದು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ನಿಯಮ ಅನುಸಾರ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

  • ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮೊದಲಿಗೆ ಎರಡು ವರ್ಷ ಪ್ರೊಬೇಷನ್ ಪೀರಿಯಡ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳು ಆಯ್ಕೆ ವಿಧಾನ ಆಗಿದೆ. ಅದಲ್ಲದೆ ಲಿಖಿತ ಪರೀಕ್ಷೆಯ ಕಂಪ್ಲೀಟ್ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿ ಚೆಕ್‌ ಮಾಡಬಹುದು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ನೋಟಿಫಿಕೇಶನ್‌ ಅನ್ನು ಕೆಳಗಿನ ಲಿಂಕ್ ಕ್ಲಿಕ್ ಮಾಡಿ . ಆರ್ಮಿ ಆರ್ಡಿನನ್ಸ್‌ ಕಾರ್ಪ್ಸ್‌ ಸೆಂಟರ್ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.aocrecruitment.gov.in/ ಈ ಲಿಂಕ್ ಮೂಲಕ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

Leave A Reply

Your email address will not be published.