ಮತ್ತೆ ಸಾಮಾಜಿಕ ಹೋರಾಟಕ್ಕೆ ಬಿರುಸಾಗಿ ಇಳಿದ ಮಹೇಶ್ ಶೆಟ್ಟಿ ತಿಮರೋಡಿ | ವೇಶ್ಯಾವಾಟಿಕೆ ದಂಧೆಯ ಮೇಲೆ ಪಂಜ ಬೀಸಿದ ಹುಲಿ !

ಶಿಕ್ಷಣ ಕಾಶಿ ಉಜಿರೆಯಲ್ಲಿ ವ್ಯಾಪಕವಾಗಿ ಸಾಂಕ್ರಾಮಿಕವಾಗಿ ಲಾಡ್ಜ್ ಗಳಲ್ಲಿ ಹರಡುತ್ತಿರುವ ವೇಶ್ಯಾವಾಟಿಕೆ ದಂಧೆಯ ಮೇಲೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ ಉಜಿರೆಯ ಎಂಎಸ್ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಿಡಿದು ಹಾಕಿದ್ದರು. ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ನ ಎಲ್ಲಾ ಹೊರಹೋಗುವ ಬಾಗಿಲುಗಳಲ್ಲಿ ಇಂದು ವೇದಿಕೆಯ ಕಾರ್ಯಕರ್ತರುಗಳು ತಂದೆಕೋರರು ತಪ್ಪಿಸಿಕೊಳ್ಳದಂತೆ ಪಹರೆಗೆ ನಿಂತಿದ್ದರು. ಅಷ್ಟರಲ್ಲಿ ಖುದ್ದು ಮಹೇಶ್ ಶೆಟ್ಟಿ ಅವರೇ ಸರ್ಕಲ್ ಇನ್ಸ್ಪೆಕ್ಟರಿಗೆ ಫೋನು ಎತ್ತಿ ವಿಷಯ ಮುಟ್ಟಿಸಿದ್ದರು. ತಕ್ಷಣ ಕಾರ್ಯಕ್ರಮದ ಖಡಕ್ ಪೊಲೀಸ್ ಅಧಿಕಾರಿ……
ಕೆಲವೇ ನಿಮಿಷಗಳಲ್ಲಿ ಲಾಡ್ಜಿಗೆ ಮುತ್ತಿಗೆ ಹಾಕಿದ್ದರು. ಹಾಗೆ ನಿನ್ನೆಯ ದಿನ ಅಕ್ರಮ ವೇಶ್ಯಾವಾಟಿಕೆಯ ಅಲ್ಲಿ ತೊಡಗಿದ್ದ 5 ಹುಡುಗಿಯರು ಮತ್ತು ಉಳಿದ ಇಬ್ಬರು ಪಿಂಪ್
ಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಇದಕ್ಕೂ ಮೊದಲು, ಭಾನುವಾರ ಉಜಿರೆ ಯ ಹಲವು ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆ ನಡೆಯುವ ಬಗ್ಗೆ ಡಿವೈಎಸ್ ಪಿ ಅವರಿಗೆ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬಳಗದಿಂದ ದೂರು ನೀಡಲಾಗಿತ್ತು. ಅವರ ದೂರಿನ ಅನ್ವಯ ಬಂಟ್ವಾಳದಿಂದ ಸುಮಾರು 50 ಜನರ ಪೊಲೀಸ್ ತಂಡಗಳು ಉಜಿರೆಯ 10 ಕ್ಕೂ ಹೆಚ್ಚಿನ ಲಾಡ್ಜ್ ಗಳಿಗೆ ದಾಳಿ ಮಾಡಲಾಗಿತ್ತು. ದಾಳಿಯ ಸಂದರ್ಭ ಪೊಲೀಸರಿಗೆ ಕಡೆಗೆ ಒಂದು ಕರ್ಚೀಫ್ ಕೂಡಾ ಸಿಗದೇ ಅವರೆಲ್ಲ ಬರಿಗೈಲಿ ಹೋಗಿದ್ದರು. ಅಷ್ಟೆಲ್ಲ ವ್ಯಾಪಕ ಮಾಂಸದ ದಂಧೆ ನಡೆಯುತ್ತಿದ್ದರೂ, ಅದರ ಬಗ್ಗೆ ಖಚಿತ ಮಾಹಿತಿ ಇದ್ದರೂ ಯಾರೂ ಸಿಕ್ಕಿ ಬೀಳದ ಬಗ್ಗೆ ನಿನ್ನೆ ರಾತ್ರಿ ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೆಲ ರಾಜಕೀಯ ನಾಯಕರುಗಳು ಯಾರೂ ಸಿಕ್ಕಿ ಬೀಳದಂತೆ ಸಹಕರಿಸಿದ್ದಾರೆ ಎಂದು ತಿಮರೋಡಿ ದೂರಿದ್ದಾರೆ.

ಆದರೆ ನಿನ್ನೆ ತಿಮರೋಡಿಯವರ ದೂರಿಗೆ ಬೆಳ್ತಂಗಡಿಯ ಸರ್ಕಲ್ ಇನ್ಸ್ಪೆಕ್ಟರ್ ಪೂರಕವಾಗಿ ಮತ್ತು ತಕ್ಷಣವಾಗಿ ಕಾರ್ಯೋನ್ನುಖರಾಗಿ ಮಾಂಸ ಪಿಶಾಚಿಗಳನ್ನು ಹಿಡಿದು ಕಂಬಿಯ ಹಿಂದೆ ಹಾಕಿದ್ದರು.

ಉಜಿರೆಯಲ್ಲಿ ಹೈಸ್ಕೂಲು ಹುಡುಗರ ಸೆಕ್ಸ್ ಟೋಕನ್ ಗೇಮ್ ?

ಹೌದು, ಇಂತದ್ದೊಂದು ವಿಚಿತ್ರ ಮತ್ತು ವಿಕಾರ ಟೋಕನ್ ಗೇಮ್ ನ ಸುದ್ದಿ ಲಾಡ್ಜ್ ಗಳ ಅಡ್ಡಿಯಿಂದ ಹೊರಕ್ಕೆ ಬಂದಿದೆ. 16 -17 ವರ್ಷ ವಯಸ್ಸಿನ ಹುಡುಗರುಗಳು ತಮ್ಮ ಗೆಳೆಯರ ಜೊತೆ ಮಾಂಸ ಮುಕ್ಕಲು ಲಾಡ್ಜ್ ಗೆ ತೆರಳುತ್ತಾರೆ. ಗುಂಪಾಗಿ ಗೆಳೆಯರ ಜತೆ ಹೋದಾಗ ಅಲ್ಲಿ ಹುಡುಗಿ ಒಬ್ಬಳೇ ಅಥವಾ ಕಡಿಮೆ ಸಂಖ್ಯೆಯಲ್ಲಿ ಇದ್ದರೆ, ಶುರುವಾಗುತ್ತೆ ಟೋಕನ್ ಗೇಮ್ !  ಗೆಳೆಯರೆಲ್ಲ ಸೇರಿಕೊಂಡು, ಪ್ರತಿಯೊಬ್ಬರಿಗೂ ಒಂದು ಎರಡು ಹೀಗೆ ನಂಬರ್ ಕೊಟ್ಟುಕೊಂಡು ಯಾರ ನಂಬರ್ ಮೊದಲು ( ನಂಬರ್ -1) ಬೀಳುತ್ತದೋ ಅವರು ಮೊದಲು ಆಟ ಆಡಲು ತೆರಳುವುದು ಈ ಟೋಕನ್ ಗೇಮ್ ನ ರೂಲ್ಸ್. ಉಳಿದವರು ಕ್ಯೂನಲ್ಲಿ ನಿಲ್ಲಬೇಕು.

ಹೀಗೆ ಎಳೆಯ ಹುಡುಗರ ದಾರಿ ತಪ್ಪಿಸಲಾಗುತ್ತಿದೆ. ಇಂತಹ ಲಾಡ್ಜ್ ಗಳು ಜನನಿ ಬಿಡ ಪ್ರದೇಶಗಳಲ್ಲಿ ಇದ್ದು ಆ ಲಾಡ್ಜ್ ಗಳ ಕೆಳಗೆ ಶಾಪಿಂಗ್ ಕಾಂಪ್ಲೆಕ್ಸ್ ಗಳಿವೆ. ಅಲ್ಲಿಗೆ ಮರ್ಯಾದಸ್ಥ ಹೆಣ್ಣುಮಕ್ಕಳು ಹೋಗುವ ಹಾಗೆ ಇಲ್ಲ. ಅಲ್ಲಿನ ಅಂಗಡಿಗಳಿಗೆ ಯಾರೇ ಹೋದರೂ ಅನುಮಾನದಿಂದ ಮತ್ತು ಮತ್ತು ಜನ ಕೆಕ್ಕರಿಸಿಕೊಂಡು ನೋಡುವಂತಾಗಿದೆ. ಇದರ ಬಗ್ಗೆ ನೋವಿನಿಂದ ಆಕ್ರೋಶ ಹೊರ ಹಾಕಿದ ಮಹೇಶ್ ಶೆಟ್ಟಿ ತಿಮರೋಡಿ ಅವರು ತಾವು ಇನ್ನುಮುಂದೆ ಬೆಳ್ತಂಗಡಿ ತಾಲೂಕಿನಲ್ಲಿ ಇಂತಹಾ ಯಾವುದೇ ಚಟುವಟಕೆ ಯಾರೂ  ಮಾಡಲು ನಾನು ಬಿಡೋದಿಲ್ಲ. ಪೋಲೀಸರು ಹಿಡಿಯದೆ ಹೋದರೆ ನಾವೇ ಹಿಡಿದು ಹಾಕುತ್ತೇವೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಐಪಿಸಿ ಕೋಡಿನ ಸಮೇತ ಸ್ಪಷ್ಟ ಸೂಚನೆಯನ್ನು ಕೊಟ್ಟಿದ್ದಾರೆ ತಿಮರೋಡಿ.

ಸಾಮಾಜಿಕ ಹೋರಾಟಗಾರ, ಕಟು ಮಾತಿನ ನೇರ ನುಡಿಯ ಮತ್ತೆ ಶಾಲು ಕೊಡವಿ ಸಾಮಾಜಿಕ ಕಾರ್ಯಗಳಿಗೆ, ಸುಧಾರಣಾ ಹೋರಾಟಗಳಿಗೆ ಇಳಿದಿದ್ದಾರೆ. ಅದರ ಸ್ಪಷ್ಟ ಸೂಚನೆ ನಿನ್ನೆ ಸಿಕ್ಕಿದ್ದು, ಮಹೇಶ್ ಶೆಟ್ಟಿ ತಿಮರೋಡಿಯವರು ಕೂಡಾ ಈ ಬಗ್ಗೆ ಸ್ಪಷ್ಣ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.